ನವದೆಹಲಿ: ಇಂದು ಡಿಜಿಟಲ್ ಪೇಮೆಂಟ್ ಎಂಬುದು ಜನರ ಜೀವನದ ಒಂದು ಭಾಗವಾಗಿದ್ದು, ಸಾಕಷ್ಟು ಮಂದಿ ಇದನ್ನು ಬಳಸುತ್ತಿದ್ದಾರೆ. ಹಲವಾರು ಪೇಮೆಂಟ್ ಆ್ಯಪ್ ಗಳು ಕೂಡ ಬಂದಿದ್ದು ಆನ್ ಲೈನ್ ಬ್ಯಾಂಕಿಂಗ್, ರೀಚಾರ್ಜ್ ಸೇರಿದಂತೆ ಹಲವಾರು ಉಪಯುಕ್ತ ಸೇವೆಗಳನ್ನು ಕುಳಿತಲ್ಲಿಂದಲೇ ಜನರು ಬಳಸುತ್ತಿದ್ದಾರೆ. ಆದರೆ ಆನ್ಲೈನ್ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಹ್ಯಾಕರ್ಸ್ಗಳ ಉಪಟಳವೂ ಮಿತಿಮೀರುತ್ತಿದೆ.
ಡಿಜಿಟಲ್ ಪೆಮೆಂಟ್ ಆ್ಯಪ್ಗಳಲ್ಲಿ ಬಹಳ ಪ್ರಸಿದ್ಧಿ ಪಡೆದ ಪೆಟಿಎಂ ಆ್ಯಪ್ ತನ್ನ ಬಳಕೆದಾರರಿಗೆ ಎಚ್ಚರಿಕೆ ಸಂದೇಶವೊಂದನ್ನು ಹೊರಡಿಸಿದ್ದು, ಕೆವೈಸಿ (ನೋ ಯುವರ್ ಕಸ್ಟಮರ್) ಪೂರ್ಣಗೊಳಿಸುವ ಸಲುವಾಗಿ ಆ್ಯಪ್ ಡೌನ್ಲೋಡ್ ಮಾಡುವಂತೆ ಯಾವುದಾರರು ಎಸ್ಎಮ್ಎಸ್, ಕರೆ ಬಂದರೆ ಅವುಗಳನ್ನು ಬಳಸದಿರಿ ಎಂದು ಎಚ್ಚರಿಕೆ ನೀಡಿದೆ.
ನಕಲಿ ಕರೆಯನ್ನು ಮಾಡಿ ಬಳಕೆದಾರರ ಖಾಸಗಿ ಮಾಹಿತಿಯನ್ನು ಮತ್ತು ಬ್ಯಾಂಕ್ ನಲ್ಲಿದ್ದ ಹಣವನ್ನು ಎಗರಿಸುವ ಹ್ಯಾಕರ್ಸ್ ಗುಂಪೊಂದು ಬಗ್ಗೆ ಪೇಟಿಎಂ ಸಂಸ್ಥೆಯ ಗಮನಕ್ಕೆ ಬಂದಿದ್ದು, ಈ ಹಿನ್ನಲೆಯಲ್ಲಿ ಎಚ್ಚರಿಕೆ ವಹಿಸುವಂತೆ ತಿಳಿಸಿದೆ. ಮಾತ್ರವಲ್ಲದೆ ಆ್ಯಪ್ ರಿ- ಇನ್ಸ್ಟಾಲ್ ಮಾಡುವಾಗ ಎನಿಡೆಸ್ಕ್, ಟೀಮ್ವ್ಯೂವರ್ ಕ್ವಿಕ್ ಸಪೋರ್ಟ್ ಮೂಲಕ ಪರ್ಮಿಷನ್ ಕೇಳುತ್ತದೆ .ಇನ್ಸ್ಟಾಲ್ ಮಾಡಿದಂತೆ 9 ಸಂಖ್ಯೆಯ ಕೋಡ್ ಅನ್ನು ಕೂಡ ಕೇಳುತ್ತದೆ. ಜಾಗರೂಕರಾಗದೆ ಆ ಕೋಡ್ ಟೈಪ್ ಮಾಡಿದರೆ ನಿಮ್ಮ ಪೇಟಿಎಂ ಖಾತೆ ಬೇರೆಯವರು ಹಿಡಿತದಲ್ಲಿರುತ್ತದೆ ಮಾತ್ರವಲ್ಲದೆ ಹಣವೂ ಕೂಡ ಹ್ಯಾಕರ್ಸ್ ಗಳ ಪಾಲಾಗುತ್ತದೆ ಎಂದು ತಿಳಿಸಿದೆ.
ಅದರ ಜೊತೆಗೆ ಎಸ್ ಎಮ್ ಎಸ್ ರೂಪದಲ್ಲಿ ಕ್ಯಾಶ್ಬ್ಯಾಕ್ ಸೇರಿದಂತೆ ಹಲವಾರು ಆಫರ್ಗಳು ಬರುತ್ತವೆ. ಅಲ್ಲಿ ಕಾಣುವ ಲಿಂಕ್ ಅನ್ನು ಕ್ಲಿಕ್ ಮಾಡದೇ ತಕ್ಷಣವೇ ಡಿಲೀಟ್ ಮಾಡಿ ಎಂದು ಪೇಟಿಎಂ ತಿಳಿಸಿದೆ. ಇಲ್ಲಿಯವರೆಗೆ ಆಫರ್ ಅಥವಾ ಸಂದೇಶದ ಮೂಲಕ ಯಾವುದೇ ಲಿಂಕ್ ಅನ್ನು ಕಳುಹಿಸಿಲ್ಲ ಎಂದು ಸಂಸ್ಥೆ ಹೇಳಿಕೊಂಡಿದೆ. ಪೇಟಿಎಂ ಸೇರಿದಂತೆ ಫೋನ್ ಪೇ, ಗೂಗಲ್ ಪೇ ಮುಂತಾದ ಬಳಕೆದಾರರೂ ಕೂಡ ಈ ಕುರಿತು ಎಚ್ಚರವಹಿಸುವುದು ಸೂಕ್ತ