Advertisement

Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ

07:33 AM Jan 03, 2025 | Team Udayavani |

ಮೇಷ: ಪರಿಣಾಮವನ್ನು ಸರಿಯಾಗಿ ಊಹಿಸಿಕೊಂಡು ಕ್ರಿಯೆಗೆ ಇಳಿಯಿರಿ. ಹೆಚ್ಚುವರಿ ಆದಾಯದ ಮಾರ್ಗ ಗೋಚರ. ವಸ್ತ್ರೋದ್ಯಮ ಸಂಬಂಧಿ ವ್ಯವಹಾರದಲ್ಲಿ ಯಶಸ್ಸು. ಸಾಂಸಾರಿಕವಾಗಿ ನೆಮ್ಮದಿಯ ಅನುಭವ.

Advertisement

ವೃಷಭ: ನೀವಾಗಿ ಯಾವ ಜವಾಬ್ದಾರಿ ಯನ್ನೂ ಆಹ್ವಾನಿಸಬೇಡಿ. ಸಾಮಾಜಿಕ ಕಾರ್ಯಗಳಿಗೆ ಉದ್ಯಮಿಗಳ ಪ್ರೋತ್ಸಾಹ. ಉಳಿತಾಯ ಏಜೆಂಟರಿಗೆ ಸಾಮಾನ್ಯ ಲಾಭ. ದೂರದ ಊರಿನಿಂದ ಬಂದ ವ್ಯವಹಾರ ಪ್ರಸ್ತಾವದಿಂದ ಅನುಕೂಲ.

ಮಿಥುನ: ಉದ್ಯೋಗ, ವ್ಯವಹಾರ ಎರಡರಲ್ಲೂ ಯಶಸ್ಸು. ಉದ್ಯಮಕ್ಕೆ ಎದುರಾದ ಸೌಲಭ್ಯಗಳ ಸಮಸ್ಯೆ ನಿವಾರಣೆ. ಸ್ವಾವಲಂಬಿ ಜೀವನದ ಕಡೆಗೆ ಒಲವು. ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ.

ಕಟಕ: ಸೋದರಿಯ ವಿವಾಹ ಪ್ರಯತ್ನದಲ್ಲಿ ಮುನ್ನಡೆ. ಜಗಳಗಂಟರ ಮಾತುಗಳಿಗೆ ಪ್ರತಿಕ್ರಿಯೆ ನೀಡದಿರಿ. ಸಣ್ಣ ಉದ್ಯಮಿಗಳಿಗೆ ತುಂಡು ಪುಢಾರಿಗಳ ಕಾಟ. ಸಣ್ಣ ಪ್ರಮಾಣದ ಕೃಷಿ ಕಾರ್ಯದಲ್ಲಿ ಸಂತೃಪ್ತಿ.

ಸಿಂಹ:ನಿಮ್ಮ ಕಾರ್ಯವೈಖರಿಯಿಂದಾಗಿ ಸರ್ವಜನ ಮಾನ್ಯತೆ. ಉದ್ಯಮದ ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ. ಮೂಲಸೌಲಭ್ಯಗಳ ಸುಧಾರಣೆಗೆ ಪ್ರಯತ್ನ. ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ.

Advertisement

ಕನ್ಯಾ: ಆಹಾರ – ವಿಹಾರಗಳಲ್ಲಿ ಸಂಯಮ ಪಾಲಿಸಿ. ವಾಹನ ಉದ್ಯಮಿಗಳಿಗೆ ಆದಾಯ ವೃದ್ಧಿ. ಸಟ್ಟಾ ವ್ಯವಹಾರದಲ್ಲಿ ನಷ್ಟ. ಪಾಲುದಾರಿಕೆ ಉದ್ಯಮದಲ್ಲಿ ನಿಧಾನ ಪ್ರಗತಿ. ಹಿರಿಯರ ಆರೋಗ್ಯ ಸ್ಥಿರವಾಗಿ ಸುಧಾರಣೆ.

ತುಲಾ: ದುಡಿಮೆಗೆ ತಕ್ಕ ಪ್ರತಿಫ‌ಲದ ಭರವಸೆ.ಹತ್ತಿರದ ತೀರ್ಥಕ್ಷೇತ್ರಕ್ಕೆ ಸಂದರ್ಶನ. ನೂತನ ನಿವೇಶನ ಖರೀದಿ ಮಾತುಕತೆ. ಮಹಿಳೆಯರ ನೇತೃತ್ವದ ಉದ್ಯಮಗಳಿಗೆ ಪ್ರಚಾರ. ಪಂಚಮ ಶನಿಯ ಕಾಟವಿದ್ದರೂ ಸಂಸಾರದಲ್ಲಿ ಪ್ರೀತಿಗೆ ಕೊರತೆಯಿಲ್ಲ.

ವೃಶ್ಚಿಕ: ಹಿರಿಯ ಅಧಿಕಾರಿಗಳಿಗೆ ಕಿರಿಕಿರಿ. ಖಾಸಗಿ ರಂಗದವರಿಗೆ ಸಾಮಾನ್ಯ ಪರಿಸ್ಥಿತಿ. ಯಂತ್ರೋಪಕರಣ ವ್ಯಾಪಾರಿಗಳಿಗೆ ಅದೃಷ್ಟ. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ. ಮಕ್ಕಳ ಆರೋಗ್ಯದ ಕುರಿತು ಎಚ್ಚರ.

ಧನು: ಹೊಸ ಕಲ್ಪನೆಗಳಿಗೆ ರೂಪ ನೀಡುವ ಪ್ರಯತ್ನ. ರಿಯಲ್‌ ಎಸ್ಟೇಟ್‌ ವ್ಯವಹಾರಸ್ಥರಿಗೆ ಹಿನ್ನಡೆ. ಉದ್ಯೋಗಾಸಕ್ತ ಶಿಕ್ಷಿತರಿಗೆ ಸದವಕಾಶ. ಗೃಹಿಣಿಯರ ಸ್ವೋದ್ಯೋಗ ಯೋಜನೆಗಳಿಗೆ ಲಾಭ. ವ್ಯವಹಾರದ ಸಂಬಂಧ ಪ್ರಮುಖ ವ್ಯಕ್ತಿಯ ಭೇಟಿ.

ಮಕರ: ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ಹೇರಳ ಲಾಭ. ಕನ್ಯಾರ್ಥಿಗಳಿಗೆ ನಿರಾಶೆಯ ಸನ್ನಿವೇಶ. ಹಳೆಯ ಒಡನಾಡಿಗಳ ಸಂಪರ್ಕ. ಮಕ್ಕಳ ಕ್ಷೇಮ ಚಿಂತನೆ. ಅನ್ಯಾಯ ಮಾಡಿದವರ ವಿರುದ್ಧ ಸೇಡಿನ ಭಾವನೆ ಬೆಳೆಯದಿರಲಿ.

ಕುಂಭ: ಎಳೆಯರ ಒಡೆತನದ ಘಟಕದ ನೇತೃತ್ವ ವಹಿಸಲು ಆಹ್ವಾನ. ಗ್ರಾಹಕರ ಅಪೇಕ್ಷೆಗೆ ಸರಿಯಾಗಿ ಸ್ಪಂದನ. ಸಮಾಜ ಸೇವಾಕಾರ್ಯಗಳಿಗೆ ಮತ್ತಷ್ಟು ಅವಕಾಶಗಳು. ಕುಶಲಕರ್ಮಿಗಳಿಗೆ ಕೀರ್ತಿ ತರುವ ಸನ್ನಿವೇಶ. ದೇವತಾ ಕಾರ್ಯದಲ್ಲಿ ಭಾಗಿ.

ಮೀನ: ಉದ್ಯೋಗ ಸ್ಥಾನದಲ್ಲಿ ಕೊಂಚ ವ್ಯತ್ಯಾಸ. ಸರಕಾರಿ ಕಾರ್ಯಾಲಯಗಳಲ್ಲಿ ಸಾಮಾನ್ಯ ಅನುಭವ. ಭವಿಷ್ಯದ ಯೋಜನೆಗಳ ಅನುಷ್ಠಾನಕ್ಕೆ ಕಾಲ ಸನ್ನಿಹಿತ. ಸಾಮಾಜಿಕ ಕ್ಷೇತ್ರದಲ್ಲಿ ಹೊಸ ಹೊಣೆಗಾರಿಕೆ. ಪೂರ್ವದಿಕ್ಕಿನಿಂದ ಹೊಸ ವ್ಯವಹಾರ ಪ್ರಸ್ತಾವ.

Advertisement

Udayavani is now on Telegram. Click here to join our channel and stay updated with the latest news.

Next