Advertisement

Paytmಗೆ 550 ಕೋಟಿ ರೂ ನಷ್ಟ: ಉದ್ಯೋಗ ಕಡಿತಕ್ಕೆ ಚಿಂತನೆ?

07:08 PM May 22, 2024 | Team Udayavani |

ನವದೆಹಲಿ: ಮಾ.31ಕ್ಕೆ ಮುಕ್ತಾಯಗೊಂಡ ಕಳೆದ ವಿತ್ತೀಯ ವರ್ಷದಲ್ಲಿ ಪೇಟಿಎಂಗೆ 550 ಕೋಟಿ ರೂ. ನಷ್ಟ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕಂಪನಿ ಕೆಲವೊಂದು ವಿಭಾಗಗಳಲ್ಲಿ ಉದ್ಯೋಗ ಕಡಿತ ಮಾಡಲು ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗಿದೆ.

Advertisement

ಪೇಟಿಎಂ ಹಣಕಾಸಿನ ಅಂಗ ಸಂಸ್ಥೆಯಾದ ಪೇಟಿಎಂ ಪೇಮೆಂಟ್‌ ಬ್ಯಾಂಕ್‌ ಕೂಡ ನಷ್ಟ ಅನುಭವಿಸಿದ್ದು, ಗ್ರಾಹಕರಿಗೆ ಕೆಲ ಪೇಮೆಂಟ್‌ ಸೇವೆ ಹಾಗೂ ಸಾಲ ಸೌಲಭ್ಯವನ್ನು ಕಡಿತಗೊಳಿಸಿದೆ. ಶೀಘ್ರ ಈ ಸೇವೆಗಳನ್ನು ಪುನರಾರಂಭಿಸಲಾಗುವುದು ಎಂದು ಸಂಸ್ಥೆಯ ಶೇರು ಪಾಲುದಾರ ವಿಜಯ್‌ ಶೇಖರ್‌ ಶರ್ಮಾ ತಿಳಿಸಿದ್ದಾರೆ.

ಇದನ್ನೂ ಓದಿ: ಓಟಿಟಿಗೆ ಲಗ್ಗೆ ಇಡಲಿದೆ ಪೃಥ್ವಿರಾಜ್‌ ʼಆಡುಜೀವಿತಂʼ: ಈ ದಿನ ಸ್ಟ್ರೀಮಿಂಗ್‌ ಆಗೋದು ಪಕ್ಕಾ?

Advertisement

Udayavani is now on Telegram. Click here to join our channel and stay updated with the latest news.

Next