Advertisement

ಸಿಂಗ್‌ ಸ್ಮಾರಕ ನಿರ್ಮಾಣ: ಸ್ಥಳ ನಿರ್ಧರಿಸಲು ಸಿಂಗ್‌ ಕುಟುಂಬಕ್ಕೆ ಕೇಂದ್ರ ಮನವಿ

08:21 AM Jan 02, 2025 | Team Udayavani |

ಹೊಸದಿಲ್ಲಿ: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಸ್ಮಾರಕ ನಿರ್ಮಾಣ ಕಾರ್ಯಕ್ಕೆ ಕೇಂದ್ರ ಸರಕಾರ ಚಾಲನೆ ನೀಡಿದೆ. ಸ್ಮಾರಕ ನಿರ್ಮಿ ಸಬ ಹುದಾದ ಸಂಭಾವ್ಯ ಸ್ಥಳಗಳ ಪಟ್ಟಿ ಯನ್ನು ಸಿಂಗ್‌ ಕುಟುಂಬಕ್ಕೆ ಹಸ್ತಾಂತರಿಸಿದೆ.

Advertisement

ರಾಜ್‌ಘಾಟ್‌ ಸಮೀಪದ 1-1.5 ಎಕ್ರೆ ಭೂಮಿ, ರಾಷ್ಟ್ರೀಯ ಸ್ಮತಿ ಸ್ಥಳ ಹಾಗೂ ಕಿಸಾನ್‌ ಘಾಟ್‌ ಪ್ರದೇಶವನ್ನು ಸ್ಮಾರಕ ನಿರ್ಮಾಣಕ್ಕೆ ಪರಿಗಣಿಸಲಾಗಿದೆ. ಈ ಪೈಕಿ ಸಿಂಗ್‌ ಕುಟುಂಬ ನಿರ್ಧರಿಸುವ ಒಂದು ಸ್ಥಳದಲ್ಲಿ ಸ್ಮಾರಕ ನಿರ್ಮಿಸಲು ಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಗರಾ ಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ಸ್ಥಳ ಪರಿಶೀಲನೆ ಕೂಡ ನಡೆಸಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next