Advertisement

ಆರೋಗ್ಯ ವಿಮೆಗಳ ಕಂತು ಪಾವತಿ ಇನ್ನು ಸರಳ!

11:42 PM Sep 24, 2019 | mahesh |

ಹೊಸದಿಲ್ಲಿ: ಸಾರ್ವಜನಿಕರ ಪಾಲಿಗೆ ಹೊರೆ ಎನಿಸುವ ಆರೋಗ್ಯ ವಿಮೆಗಳ ವಾರ್ಷಿಕ ಪ್ರೀಮಿಯಂ ಅನ್ನು ಇನ್ನು ಮುಂದೆ ಮಾಸಿಕ, ತ್ತೈಮಾಸಿಕ, ಅರ್ಧವಾರ್ಷಿಕ ರೂಪದಲ್ಲಿಯೂ ಪಾವತಿಸಬಹುದು ಎಂದು ಭಾರತೀಯ ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಆಯೋಗ ಆದೇಶ ಹೊರಡಿಸಿದೆ. ಜತೆಗೆ, ವಿಮೆಗಳ ಸ್ವರೂಪದಲ್ಲಿ ಮಾಡಬಹುದಾದ ಸಣ್ಣ ಪುಟ್ಟ ಬದಲಾವಣೆಗಳನ್ನು ಪ್ರಮಾಣ ಪತ್ರ ಅಥವಾ ದೃಢೀಕರಣ ಪತ್ರಗಳ ಆಧಾರದಲ್ಲಿ, ಆಯೋಗದ ಒಪ್ಪಿಗೆಗೆ ಕಾಯದೇ ಬದಲಿಸಲು ವಿಮಾ ಕಂಪೆನಿಗಳಿಗೆ ಸ್ವಾತಂತ್ರ್ಯ ನೀಡಲಾಗಿದೆ. ಆ ಮೂಲಕ, ವಿಮೆಗಳ ಮೂಲ ಪ್ರೀಮಿಯಂ ದರದಲ್ಲಿನ ಬದಲಾವಣೆ, ಕನಿಷ್ಠ ಕಂತು ಅಥವಾ ಗರಿಷ್ಠ ಕಂತುಗಳಲ್ಲಿನ ಬದಲಾವಣೆ, ವಿಮೆ ಹೊಂದಿರುವ ವ್ಯಕ್ತಿಯ ಕನಿಷ್ಠ ಅಥವಾ ಗರಿಷ್ಠ ವಯಸ್ಸಿನ ಬಗ್ಗೆ ತೀರ್ಮಾನಿಸುವ ಸ್ವಾತಂತ್ರ್ಯ ವಿಮಾ ಕಂಪೆನಿಗಳಿಗೆ ಸಿಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next