ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಿರುವ ಹಣ ಪಾವತಿ ಸೇರಿ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಲು ಜಿಲ್ಲಾಡಳಿತ ಭವನದ ಎದುರು ರೈತರ ಪ್ರತಿಭಟಿಸಿದರು.
ಈ ವೇಳೆ ಜಿಲ್ಲಾಧಿಕಾರಿ ಆರ್.ಲತಾಗೆ ಮನವಿ ಸಲ್ಲಿಸಿ ಮಾತನಾಡಿದ ರೈತ ಸಂಘಹಾಗೂ ಹಸಿರುಸೇನೆ (ಸಾಮೂಹಿಕ ನಾಯಕತ್ವ) ಜಿಲ್ಲಾಧ್ಯಕ್ಷ ಬೆಳ್ಳೂಟಿ ಮುನಿ ಕೆಂಪಣ್ಣ, ಜಿಲ್ಲೆಯಲ್ಲಿ ಸರ್ಕಾರ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಮಾಡಿ 4 ತಿಂಗಳುಕಳೆದರೂಹಣಜಮಾಮಾಡಿಲ್ಲ. ಮುಂಗಾರು ಆರಂಭವಾಗಿದ್ದರಿಂದ ಬಿತ್ತನೆಕಾರ್ಯ ನಡೆಸಲು ರೈತರಿಗೆ ಹಣ ಅಗತ್ಯವಾಗಿದೆ. ಕೂಡಲೇ ಪಾವತಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಕೆರೆ ಸ್ವತ್ಛ ಮಾಡಿಸಿ: 2020-21ನೇ ಸಾಲಿನಲ್ಲಿ ಫಸಲ್ ಬಿಮಾ ಯೋಜನೆ ಯಡಿನೋಂದಣಿಮಾಡಿಸಿರುವ ರೈತರಿಗೆ ಕೂಡಲೇ ಬೆಳೆ ನಷ್ಟ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು. ಶಿಡ್ಲಘಟ್ಟ ತಾಲೂಕಿನ ಕೆರೆಗಳಿಗೆ ಎಚ್.ಎನ್. ವ್ಯಾಲಿ ನೀರು ಹರಿಸುವ ಮೊದಲು ಕೆರೆಯಲ್ಲಿನ ಜಾಲಿ ಮರ ತೆರವುಗೊಳಿಸಬೇಕು ಎಂದು ಹೇಳಿದರು.
ಶಿಡ್ಲಘಟ್ಟ ತಾಲೂಕಿನ ಇದ್ನೂಡು ರಸ್ತೆಯಲ್ಲಿ ಪ್ಯೂಪ ಕಾರ್ಖಾನೆಯಿಂದ ದುರ್ವಾಸನೆ ಬೀರುತ್ತಿದ್ದು, ಜನರ ಆರೋಗ್ಯ ಹಾಳಾಗುತ್ತಿದೆ. ಕೂಡಲೇ ಅದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಕೃಷಿಗೆ ಮಾರಕವಾಗಿರುವ ಮೂರು ಕಾಯ್ದೆಗಳನ್ನು ಕೂಡಲೇ ಕೇಂದ್ರ ಸರ್ಕಾರ ವಾಪಸ್ ಪಡೆಯಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿ ಗೆ ಮನವಿ ಸಲ್ಲಿಸಿದರು.
ಜಿಲ್ಲಾ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್ ಮಾತನಾಡಿ, ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜದ ಕೊರತೆ ಯಿಂದ ರೈತರು ಪರದಾಡುವಂತಾಗಿದೆ. ಜಿಲ್ಲೆಯಲ್ಲಿ ರಸಗೊಬ್ಬರವನ್ನು ದುಪ್ಪಟ್ಟು ಬೆಲೆಗಳಿಗೆ ಮಾರಾಟ ಮಾಡುತ್ತಿದ್ದು, ಕೂಡಲೇ ಎಲ್ಲಾ ಅಂಗಡಿಗಳಲ್ಲಿ ರಸಗೊಬ್ಬರ ದರಪಟ್ಟಿ ಮತ್ತು ದಾಸ್ತಾನಿನ ಮಾಹಿತಿ ಬಹಿರಂಗಗೊಳಿಸಲು ಕ್ರಕೈಗೊಳ್ಳ ಬೇಕೆಂದು ಒತ್ತಾಯಿಸಿದರು.
ಸಂಘದ ಗೌರಿಬಿದನೂರು ತಾಲೂಕು ಅಧ್ಯಕ್ಷ ಲೋಕೇಶ್‌ಗೌಡ, ಕಾರ್ಯದರ್ಶಿ ಸನದ್‌ಕುಮಾರ್, ಚಿಕ್ಕಬಳ್ಳಾಪುರ ತಾಲೂಕು ಅಧ್ಯಕ್ಷ ಸಂಪತ್‌ಕುಮಾರ್, ಮುಖಂಡ ರಾದ ತಿಮ್ಮನಾಯಕನಹಳ್ಳಿ ಮಂಜುನಾಥ್ ,ಚಿಂತಾಮಣಿ ತಾಲೂಕು ಕಾರ್ಯದರ್ಶಿ ಎಚ್.ಎನ್.ಕದಿರೇಗೌಡ, ಕೈವಾರ ಹೋಬಳಿ ಘಟಕದ ಅಧ್ಯಕ್ಷ ಭೀಮಣ್ಣ,ಬಿನ್ನಮಂಗಲ ಬಿ.ಎಂ.ಮುನಿರಾಜು, ತಾಲೂಕು ಉಪಾಧ್ಯಕ್ಷ ಅತ್ತಿಗಾನಹಳ್ಳಿ ಮುನೇಗೌಡ, ಮಂಜುನಾಥ್ ಅಂಬಾರಿ, ನವೀನ್‌ಕುಮಾರ್ ಉಪಸ್ಥಿತರಿದ್ದರು.