Advertisement

ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಿ: ಡಾ|ಪಾಟೀಲ

11:16 AM Dec 04, 2019 | Team Udayavani |

ಧಾರವಾಡ: ಇಂದು ರೈತರಿಗೆ ಬೇಕಾದದ್ದು ಬೆಂಬಲ ಬೆಲೆ ಅಲ್ಲ, ಬದಲಾಗಿ ವೈಜ್ಞಾನಿಕ ಬೆಲೆ ನೀತಿ ಎಂದು ಹಿರಿಯ ಚಿಂತಕ, ಹೋರಾಟಗಾರ ಡಾ| ಸಿದ್ದನಗೌಡ ಪಾಟೀಲ ಹೇಳಿದರು.

Advertisement

ಕವಿಸಂನಲ್ಲಿ ದಿ| ಬಸಪ್ಪ ಮುಂದಿನಮನಿ ಸ್ಮರಣೆ ದತ್ತಿ ಅಂಗವಾಗಿ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಕೃಷಿ ಬಿಕ್ಕಟ್ಟು ಹಾಗೂ ಪರಿಹಾರಎಂಬ ವಿಷಯ ಕುರಿತು ಅವರು ಮಾತನಾಡಿದರು. ಇಂದು ಕಾರ್ಪೊರೇಟ್‌ ಕಂಪನಿಗಳು ಲಾಭ ಗಳಿಕೆಯೇ ಮೂಲ ಗುರಿ ಹೊಂದಿವೆ. ಸಬ್ಸಿಡಿ ಕಡಿತ,ರಫ್ತು ಉತ್ತೇಜನ ನೀತಿಯಿಂದ ರೈತರ ಬದುಕು

ದಿವಾಳಿಯಾಗುತ್ತಿದೆ. ರೈತರಿಗೆ ಸರ್ಕಾರ ಬೆಂಬಲ ಬೆಲೆ ನೀಡಿದ್ದು, ಮಾರುಕಟ್ಟೆ ಬೆಲೆಗಿಂತ ಕಡಿಮೆ ಇದೆ. 1991ರ ನವ ಆರ್ಥಿಕ ನೀತಿ ಕೃಷಿ ಬಿಕ್ಕಟ್ಟಿಗೆ ಮಾರಕವಾಗಿದೆ. ಹೀಗಾಗಿ ರೈತ ಪ್ರಜ್ಞೆ ಬಂದಾಗ ಮಾತ್ರ ಕೃಷಿ ಬಿಕ್ಕಟ್ಟು ಪರಿಹಾರವಾಗಬಲ್ಲದು ಎಂದರು.

ವಾಲ್ಮಿ ನಿರ್ದೇಶಕ ಡಾ| ರಾಜೇಂದ್ರ ಪೋದ್ದಾರ ಮಾತನಾಡಿ, ಗ್ರಾಮೀಣ ಪ್ರದೇಶದ ಯುವಕರು ಕೃಷಿಯಿಂದ ವಿಮುಖರಾಗುತ್ತಿರುವುದು ಕಳವಳಕಾರಿ. ಸರ್ಕಾರ ಸಮಾಜವಾದಿ ತತ್ವದಡಿಯಲ್ಲಿ ಭೂಸುಧಾರಣೆ ಜಾರಿಗೆ ತಂದರೂ ಅದು ಸಮರ್ಪಕವಾಗಿಲ್ಲ. ಹವಾಮಾನ ವೈಪರಿತ್ಯವೂ ಸಹ ಭವಿಷ್ಯದಲ್ಲಿ ಕೃಷಿಗೆ ಮಾರಕವಾಗಿದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಧಾರವಾಡ ಲಾ ಅಕಾಡೆಮಿ ಅಧ್ಯಕ್ಷ ಕೆ.ಬಿ. ನಾವಲಗಿಮಠ ಮಾತನಾಡಿ, ಇಂದು ಕೃಷಿ ಉತ್ಪಾದನಾ ವೆಚ್ಚ ಅಧಿಕಗೊಂಡು ಉತ್ಪನ್ನಗಳ ಬೆಲೆ ಕುಂಠಿತವಾಗಿದ್ದಕ್ಕೆ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಲಿವೆ. ಗಾಂಧೀಜಿಯವರ ಗ್ರಾಮಸ್ವರಾಜದ ಕನಸು ನನಸಾದಾಗ ಕೃಷಿ ಬಿಕ್ಕಟ್ಟಿಗೆ ಪರಿಹಾರವಾಗಬಲ್ಲದು ಎಂದರು.

ದಿ| ಬಸಪ್ಪ ಶಿ. ಮುಂದಿನಮನಿ ಅವರ ಭಾವಚಿತ್ರಕ್ಕೆ ಪುಷ್ಪ ನಮನದೊಂದಿಗೆ ಗೌರವ ಸಲ್ಲಿಸಲಾಯಿತು. ಶಿವಣ್ಣ ಬೆಲ್ಲದ, ದತ್ತಿದಾನಿ ಸದಾನಂದ ಮುಂದಿನಮನಿ ಇದ್ದರು. ಪ್ರಕಾಶ ಉಡಿಕೇರಿ ಸ್ವಾಗತಿಸಿದರು. ಕೃಷ್ಣ ಜೋಶಿ ಪ್ರಾಸ್ತಾವಿಕ ಮಾತನಾಡಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ಪ್ರಶಾಂತ ಕುಲಕರ್ಣಿ ಪ್ರಾರ್ಥಿಸಿದರು. ಶಾಂತೇಶ ಗಾಮನಗಟ್ಟಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next