ಯುವುದು, ನಗರ ನಿರಾಶ್ರೀತರಿಗೆ ನಿವೇಶನ ನೀಡಲು 16 ಎಕರೆ ಜಮೀನು ಗುರುತಿಸುವ ಕಾರ್ಯವನ್ನು ಶೀಘ್ರ ಮುಗಿಸಿ ಎಂದು ಜಿಲ್ಲಾಧಿಕಾರಿ ವೆಂಕಟ್‌ರಾಜಾ ಸೂಚನೆ ನೀಡಿದರು.
Advertisement
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಶಾಸಕಿ ರೂಪಕಲಾ ಡೀಸಿಗೆ ಮನವಿ ಮಾಡಿ, ಕೆಜಿಎಫ್ ತಾಲೂಕು ವಿಭಜನೆಯಾದ ನಂತರ ಪ್ರತ್ಯೇಕ ಎಪಿಎಂಸಿ ಮಾಡಲು ಸಿದ್ಧತೆ ನಡೆದಿದ್ದು, 25 ಎಕರೆ ಜಾಗ ಗುರುತಿಸಲಾಗಿದೆ. ಅದಕ್ಕೆ ಮಾರುಕಟ್ಟೆ ಮೌಲ್ಯದ ಅರ್ಧದಷ್ಟು 72 ಲಕ್ಷ ರೂ. ಹಣ ಕಟ್ಟಲು ಈಗಾಗಲೇ ಎಪಿಎಂಸಿ ರಾಜ್ಯ ನಿರ್ದೇಶಕರು ಸೂಚನೆ ನೀಡಿದ್ದು, ಅದರಂತೆ ಹಣ ಕಟ್ಟಲು ಸೂಚಿಸುವಂತೆ ಕೋರಿದರು.
Related Articles
Advertisement
ಮಿನಿ ವಿಧಾನಸೌಧ ಶೀಘ್ರದಲ್ಲೇ ಉದ್ಘಾಟನೆ: ಕೆಜಿಎಫ್ ಮಿನಿ ವಿಧಾನಸೌಧ ಕಾಮಗಾರಿ ಅಂತಿಮ ಹಂತದಲ್ಲಿದೆ. ಕಂದಾಯ ಸಚಿವರು ಉದ್ಘಾಟನೆಗೆ ಶೀಘ್ರವೇ ದಿನಾಂಕ ನೀಡಲಿದ್ದಾರೆ. ಈ ಹಿನ್ನಲೆಯಲ್ಲಿ ಉಳಿಕೆ ಕಾಮಗಾರಿಗಳನ್ನು ಆದಷ್ಟು ಶೀಘ್ರ ಮುಗಿಸಿಕೊಡಲು ಶಾಸಕರು ಕೋರಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ಕಟ್ಟಡಕ್ಕೆ ಶೀಘ್ರ ಅಗತ್ಯ ಕಾಂಪೌಂಡ್ ನಿರ್ಮಿಸಿಕೊಡಿ, ಸುರಕ್ಷತೆಗೆ ತಂತಿ ಬೇಲಿ ನಿರ್ಮಾಣ ಮಾಡಿಕೊಟ್ಟು, ವಿದ್ಯುತ್ ಸಂಪರ್ಕ ಮತ್ತಿತರ ಕೆಲಸ ಮುಗಿಸಿಕೊಡಿ ಎಂದು ಲೋಕೋಪಯೋಗಿ ಎಇಇ ಸರಸ್ವತಿಗೆ ಸೂಚಿಸಿದರು. ಸಭೆಯಲ್ಲಿ ವಿಭಾಗಾಧಿಕಾರಿ ವೆಂಕಟ ಲಕ್ಷ್ಮಮ್ಮ, ಕೆಜಿಎಫ್ ನಗರಸಭೆ ಅಧ್ಯಕ್ಷ ವಿ.ಮುನಿ ಸ್ವಾಮಿ, ಪೌರಾಯುಕ್ತ ಡಾ.ಮಾಧವಿ, ಕೆಜಿಎಫ್ ತಹಶೀಲ್ದಾರ್ ಸುಜಾತಾ, ಬಂಗಾರಪೇಟೆ ತಹಶೀಲ್ದಾರ್ದಯಾನಂದ್, ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಹೀರ್ ಅಬ್ಟಾಸ್, ಎಪಿಎಂಸಿ ಸಹಾಯಕ ನಿರ್ದೇಶಕ ಕಿರಣ್, ನಗರಸಭೆ ಎಇಗಳಾ ಮಂಜು ನಾಥ್, ಶಶಿಕುಮಾರ್, ಲೋಕೋಪಯೋಗಿ ಇಲಾಖೆ ಎಇಇ ಸರಸ್ವತಿ, ಎಂಜಿನಿಯರ್ ರಾಜಶೇಖರ್ ಮತ್ತಿತರರಿದ್ದರು.