Advertisement

ಕನಿಷ್ಠ ವೇತನ ನೀಡಿ, ಕಿರುಕುಳ ತಪ್ಪಿಸಿ

05:25 PM Oct 20, 2019 | Team Udayavani |

ಮಾಲೂರು: ಮಾಸಿಕ 10,500 ರೂ. ಕನಿಷ್ಠ ವೇತನ, ಗುಣಮಟ್ಟದ ಸಮವಸ್ತ್ರ, ಕೆಲಸದಿಂದ ವಜಾ ಮಾಡದಂತೆ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಿಸಿಯೂಟ ನೌಕರರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಪ್ರಜಾಸೇವಾ ಸಮಿತಿ ಸಂಯೋಜಿತ ಅಕ್ಷರ ದಾಸೋಹ ನೌಕರರ ಕ್ಷೇಮಾಭಿ ವೃದ್ಧಿ ಸಂಘದ ಸದಸ್ಯರು ಪಟ್ಟಣದ ಸರ್ಕಾರಿ ಬಾಲಕರ ಜೂನಿಯರ್‌ ಕಾಲೇಜಿನ ಆಟದ ಮೈದಾ ನದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ, ಬಸ್‌ ನಿಲ್ದಾಣದ ವೃತ್ತದಲ್ಲಿ ಕೆಲ ಕಾಲ ರಸ್ತೆ ತಡೆ ನಡೆಸಿ, ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.

ಪ್ರತಿ ತಿಂಗಳ 5ನೇ ತಾರೀಖೀನಂದು ವೇತನ ನೀಡಬೇಕು, ಎಲ್ಲರಿಗೂ ಸಮಾನವಾಗಿ ಗುಣಮಟ್ಟದ ಸಮವಸ್ತ್ರ ನೀಡಬೇಕು, ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕ ವರ್ಗದಿಂದ ಆಗುತ್ತಿರುವ ಅನಗತ್ಯ ಕಿರುಕುಳ ತಪ್ಪಿಸುವುದರ ಜೊತೆಗೆ ಬಿಸಿಯೂಟ ನೌಕರರನ್ನು ಕಾಲಕಾಲಕ್ಕೆ ಬದಲಿಸುವುದು, ವಿದ್ಯಾರ್ಥಿ ಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಕೆಲಸದಿಂದ ತೆಗೆಯುವುದು ಮಾಡಬಾರದು ಎಂದು ಒತ್ತಾಯಿಸಿದರು. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ತಾಪಂ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ ಮನವಿ ಸ್ವೀಕರಿಸಿ, ಕ್ರಮದ ಭರವಸೆ ನೀಡಿದರು.

ಬಿಸಿಯೂಟ ನೌಕರರ ಸಂಘದ ರಾಜ್ಯಾಧ್ಯಕ್ಷ ಶಿವಣ್ಣ, ಜ್ಯೋತಿ, ವನಜಾ, ನಾರಾಯಣಸ್ವಾಮಿ, ಲಕ್ಷ್ಮಮ್ಮ, ಕನ್ನೂ ರಮ್ಮ, ನಾಗಮಣಿ, ಆರ್‌.ಮುನಿರತ್ನಮ್ಮ, ಗೌರಮ್ಮ. ಲಕ್ಷ್ಮೀ, ಅಮರಾವತಿ, ನಿರ್ಮಲಮ್ಮ, ಜಯಮ್ಮ, ನೇತ್ರಾವಣಿ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next