Advertisement
ಶುಕ್ರವಾರ ಸಂಜೆ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, 4 ವರ್ಷಗಳ ಸರ್ಕಾರದಲ್ಲಿ ಏನನ್ನೂ ಮಾಡಲಾಗದ ಇವರ ಸರ್ಕಾರ, 20 ದಿನಗಳಲ್ಲಿ ಎನನ್ನು ಮಾಡಲು ಸಾಧ್ಯವಿದೆ. ಇದೆಲ್ಲ ಜನರಿಗೆ ತಿಳಿಯುವುದಿಲ್ಲ ಎಂದುಕೊಂಡಿದ್ದಾರೆ ಎಂದು ಬಜೆಟ್ ಬಗ್ಗೆ ಅಸಮಾಧಾನ ಹೊರಹಾಕಿದರು.
Related Articles
Advertisement
ಸಚಿವನಾಗಿರುವ ಅಶ್ವತ್ಥನಾರಾಯಣ ಎನ್ನುವ ವ್ಯಕ್ತಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಹೊಡೆದುಹಾಕಿ ಎಂದು ಕರೆ ನೀಡಿರುವಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ. ಬಿಜೆಪಿ ಡಿಎನ್‍ಎ ಮೂಲದಲ್ಲೇ ಹಿಂಸಾ ಸಂಸ್ಕೃತಿ ಅಡಗಿದ್ದು, ಅದನ್ನೇ ಅವರು ಹೇಳಿದ್ದಾರೆ ಎಂದರು.
ಇಂಥ ಹಿಂಸಾ ಮನಸ್ಥಿತಿಗಳೇ ಮಹಾತ್ಮಾ ಗಾಂಧಿಜಿ ಅವರನ್ನು, ದೇಶಧ ಪ್ರಧಾನಿ ಆಗಿದ್ದ ಇಂದಿರಾ ಗಾಂಧಿ, ರಾಜೀವ ಗಾಂಧಿ ಅವರನ್ನು ಹತ್ಯೆ ಮಾಡಿದ್ದು. ಸರ್ದಾರ್ ಬಿಯಾಂತಸಿಂಗ್ ಅವರನ್ನು ತುಂಡರಿಸಿದ್ದು,ವಿ.ಸಿ.ಶುಕ್ಲಾ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದು, ಕಾಂಗ್ರೆಸ್ ಮುಖಂಡರಾಗಿದ್ದ ಬುಡಕಟ್ಟು ಸಮುದಾಯದ ನಾಯಕ ನಂದಕುಮಾರ ಪಟೇಲ ಅವರನ್ನು ಕೊಂದು ಹಾಕಿದ ಮನಸ್ಥಿತಿಗಳಿಂದ ಹಿಂಸೆಯ ಹೊರತಾಗಿ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ ಎಂದು ಟೀಕಾ ಪ್ರಹಾರ ನಡೆಸಿದರು.
ಕರ್ನಾಟಕದಲ್ಲಿ ಬಿಜೆಪಿ ಸೋಲುವ ಹಾದಿಯಲ್ಲಿದೆ, ಸೋತಿರುವ ಮನಸ್ಥಿತಿ ಹಾಗೂ ಸೋಲುವ ಮನಸ್ಥಿತಿಗಳು ಮಾತ್ರ ಇಂಥ ಪ್ರಚೋದನಕಾರಿ ಹೇಳಿಕೆ ನೀಡಲು ಸಾಧ್ಯ ಎಂಬುದನ್ನು ಕರ್ನಾಟಕದಲ್ಲಿ ಸಚಿವ ಅಶ್ವತ್ಥನಾರಾಯಣ ಮುಂದುವರೆಸಿದ್ದಾರೆ ಎಂದು ಕುಟುಕಿದರು.
ಮತ್ತೊಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಅವರನ್ನು ಕೇಳಿದ್ದಾದರೂ ಏನು? ಎಲ್‍ಐಸಿ ಸೇರಿದಂತೆ ಇತರೆ ಸಾರ್ವಜನಿಕ ಆರ್ಥಿಕ ಉದ್ಯಮಗಳಲ್ಲಿ ಅದಾನಿ ನಡೆಸಿದ ವ್ಯವಹಾರದ ಕುರಿತು ದೇಶದ ಜನರಿಗೆ ಉತ್ತರ ಕೊಡಿ ಎಂದಲ್ಲವೇ ಎಂದು ಪ್ರಶ್ನಿಸಿದರು.
140 ಕೋಟಿ ಭಾರತೀಯರಿಗೆ ಉತ್ತರದಾಯಿ ಆಗಬೇಕಿರುವುದು ದೇಶದ ಪ್ರಧಾನಿ ಜವಾಬ್ದಾರಿ ಅಲ್ಲವೇ ಎಂದು ಟೀಕಾಸ್ತ್ರ ಪ್ರಯೋಗಿಸಿದ ಸುರ್ಜೇವಾಲಾ, ಇಂಥ ಸ್ಥಿತಿಯಲ್ಲಿ ಧ್ವನಿ ಎತ್ತಬೇಕಿದ್ದ ಮಾಧ್ಯಮಗಳ ಕತ್ತನ್ನೇ ಹಿಸುಕುವ ಕೆಲಸ ಮಾಡಿದ್ದಾರೆ ಎಂದು ಹರಿಹಾಯ್ದರು.