Advertisement

ಕೆಲಸದ ಜೊತೆ ಆರೋಗ್ಯದ ಕಡೆ ಗಮನ ಕೊಡಿ

11:17 AM May 05, 2019 | Team Udayavani |

ಕೆಜಿಎಫ್: ಜನರ ದಿನನಿತ್ಯ ಕಾರ್ಯದೊತ್ತಡ ಮಧ್ಯೆ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ತಹಶೀಲ್ದಾರ್‌ ರಮೇಶ್‌ ಹೇಳಿದರು.

Advertisement

ನಗರದ ಶ್ರೀಪ್ರಸನ್ನ ಲಕ್ಷ್ಮೀವೆಂಕಟರಮಣ ಸ್ವಾಮಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಸಂಭ್ರಮ್‌ ಆಸ್ಪತ್ರೆ ಆಯೋಜಿಸಿದ್ದ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಮನೆಯಲ್ಲಿ ಎಲ್ಲಾ ಕೆಲಸಗಳನ್ನು ಮಾಡಿಟ್ಟು ಕುಟುಂಬ ಸದಸ್ಯರ ಸೇವೆಯಲ್ಲಿ ದಿನವಿಡೀ ನಿರತರಾಗುತ್ತಾರೆ, ದಿನ‌ಗೂಲಿ ನೌಕರರು ಬೆಳಗ್ಗೆಯಿಂದ ಸಂಜೆವರೆಗೆ ದುಡಿಯುವುದರಿಂದ ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು.

ವೃದ್ಧರು ಯಾವುದೇ ವ್ಯಾಯಾಮವಿಲ್ಲದೆ ಖುರ್ಚಿಯಲ್ಲಿ, ಹಾಸಿಗೆಯಲ್ಲಿ ಮಲಗಿರುತ್ತಾರೆ. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸುವುದರಿಂದ ವ್ಯಾಯಾಮ ಅಥವಾ ಯೋಗದಲ್ಲಿ ಪಾಲ್ಗೊಳ್ಳದೇ ಇರುವುದರಿಂದ ಆರೋಗ್ಯದಲ್ಲಿ ಹಲವು ಸಮಸ್ಯೆಗಳು ಎದುರಾಗುತ್ತವೆ. ಆದ್ದರಿಂದ ತಿಂಗಳಿಗೊಮ್ಮೆ ಅಥವಾ ಮೂರು ತಿಂಗಳಿಗೊಮ್ಮೆ ತಮ್ಮ ಆರೋಗ್ಯ ಪರೀಕ್ಷಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಲು ಮುಂದಾಗಬೇಕು ಎಂದು ತಿಳಿಸಿದರು. ಕೆಜಿಎಫ್ ಎಕ್ಸ್‌ರೇಯಿಂದ ಲ್ಯಾಬ್‌ ಪರೀಕ್ಷೆ, ಪ್ರಧಾನಿ ಜನ ಔಷಧಿ ಹಾಗೂ ಮೋಯ್ದು ಮೆಡಿಕಲ್ಸ್ನಿಂದ ಉಚಿತ ಔಷಧಿ ವ್ಯವಸ್ಥೆ ಒದಗಿಸಲಾಗಿತ್ತು. ವೈದ್ಯ ರಾದ ಡಾ.ಮಹಾಲಿಂಗಮ್‌, ಡಾ.ಗ‌ುರುದತ್‌, ಡಾ.ಮುಖೇಶ್‌, ಜನ ಔಷಧಿಯ ಲಯನ್‌ ಜೆ.ಸುರೇಶ್‌, ಕಮಲ್ ಮುನಿಸ್ವಾಮಿ, ಆನಂದಕೃಷ್ಣನ್‌, ಸುಜಾ ತಾಬಾಬು, ಕರ್ಣ, ಉಮಾ, ಸತೀಶ್‌ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next