ಕೋಟ: ಯುವಕರು ಐಪಿಎಲ್ ನೋಡಿ ಕ್ರಿಕೆಟ್ ಪಾಠ ಕಲಿಯುವ ಬದಲು ಟೆಸ್ಟ್ ಪಂದ್ಯಗಳಂತೆ ಸಾಂಪ್ರದಾಯಿಕ ಕ್ರಿಕೆಟ್ ಕಡೆಗೆ ಹೆಚ್ಚಿನ ಒಲವು ನೀಡಿ ಎಂದು ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟಿಗ ಸಯ್ಯದ್ ಕಿರ್ಮಾನಿ ಹೇಳಿದರು.
ಅವರು ಹಂಗಾರಕಟ್ಟೆಯ ಚೇತನ ಪ್ರೌಢ ಶಾಲೆಯ ಅಂಗಣದಲ್ಲಿ ಆರಂಭಗೊಂಡ ಬೆಳ್ಳಿಪಾಡಿ ಆಳ್ವಾಸ್ ಕ್ರಿಕೆಟ್ ಅಕಾಡೆಮಿಯ ವಾರ್ಷಿಕ ಕ್ರಿಕೆಟ್ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ಹಿಂದೆ ದೇಶದ ಗೌರವಕ್ಕಾಗಿ ಆಡುತ್ತಿದ್ದೆವು. ಆದರೆ ಇಂದು ಸಾಕಷುc ಹಣದ ಹೊಳೆ ಹರಿದುಬರುತ್ತಿದೆ. ಹೀಗಾಗಿ ಕ್ರೀಡೆಯಲ್ಲಿ ಬದಲಾವಣೆಗಳಾಗಿದೆ ಎಂದರು.
ಅಕಾಡೆಮಿಯ ಪ್ರಧಾನ ಕೋಚ್ ವಿಜಯ್ ಆಳ್ವಾ ಮಾತನಾಡಿ, ಈ ಅಕಾಡೆಮಿ ಸ್ಥಾಪಿಸುವಲ್ಲಿ ಬಿ.ಡಿ. ಶೆಟ್ಟಿ ಕಾಲೇಜ್ ಹಾಗೂ ಚೇತನಾ ಪ್ರೌಢಶಾಲೆ ಸಹಕಾರ ನೀಡಿದೆ. ಉಡುಪಿ ಜಿಲ್ಲೆಯಿಂದ ಕರ್ನಾಟಕ ಹಾಗೂ ಭಾರತ ತಂಡವನ್ನು ಪ್ರತಿನಿ ಸುವ ಕ್ರಿಕೆಟಿಗರನ್ನು ಸಿದ್ಧಗೊಳಿಸುವುದು ನಮ್ಮ ಗುರಿ ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ಯುವ ಕ್ರಿಕೆಟಗರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಮಂಗಳೂರು ವಿಶ್ವವಿದ್ಯಾನಿಲಯವು ಈ ಶಿಬಿರಕ್ಕೆ ಎಲ್ಲ ರೀತಿಯ ಪ್ರೋತ್ಸಾಹ ನೀಡುತ್ತಿದೆ ಎಂದರು.
ಅಂತಾರಾಷ್ಟ್ರೀಯ ಕಾಟೂìನಿಸ್ಟ್ ಸತೀಶ್ ಆಚಾರ್ಯ ಸ್ಥಳದಲ್ಲೇ ವಿಕೆಟ್ ಕೀಪರ್ ಸಯ್ಯದ್ ಕಿರ್ಮಾನಿ ಅವರ ಕ್ಯಾರಿಕೇಚರ್ ರಚಿಸಿದರು.
ಬಿ.ಡಿ. ಶೆಟ್ಟಿ ಕಾಲೇಜ್‌ನ ಪ್ರಾಂಶುಪಾಲ ಬಾಲಕೃಷ್ಣ ಶೆಟ್ಟಿ ಶಿಬಿರಕ್ಕೆ ಚಾಲನೆ ನೀಡಿದರು.
ಚೇತನ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಗಣೇಶ್ ಜಿ. ಪ್ರೌಢಶಾಲೆಯ ದೆ„ಹಿಕ ಶಿಕ್ಷಕ ಹರ್ಷವರ್ಧನ್ ಶೆಟ್ಟಿ, ದೆ„ಹಿಕ ಶಿಕ್ಷಣ ನಿರ್ದೇಶಕರಾದ ಕಿಶೋರ್ ಕಮಾರ್ ಸಿ.ಕೆ. ಮುಂತಾದವರು ಉಪಸ್ಥಿತರಿದ್ದರು.