ಕುಂದಾಪುರ: ಗಂಗೊಳ್ಳಿಯ ಬಂದರಿನಲ್ಲಿ ನಡೆಯುತ್ತಿರುವ ಬಹು ಅಪೇಕ್ಷಿತ ಬ್ರೇಕ್ ವಾಟರ್ ಕಾಮಗಾರಿಗೆಂದು ಕಳೆದ ಹಲವಾರು ತಿಂಗಳುಗಳಿಂದ ಟನ್ ಗಟ್ಟಲೆ ತೂಕದ ಭಾರೀ ಗಾತ್ರದ ಶಿಲೆಕಲ್ಲುಗಳನ್ನು ಲಾರಿಗಳ ಮೂಲಕ ಸಾಗಣೆ ಮಾಡಲಾಗುತ್ತಿದೆ.
ಈ ಕಲ್ಲು ಗಳನ್ನು ಅಪಾಯಕರ ಸ್ಥಿತಿಯಲ್ಲಿ ಹೇರಿ ಕೊಂಡು ಲಾರಿಗಳು ಗಂಗೊಳ್ಳಿಯ ಜನಬಾಹುಳ್ಯದ ಕಿರಿದಾದ ಮುಖ್ಯ ರಸ್ತೆಯಲ್ಲಿ ನಿತ್ಯವೂ ಚಲಿಸುತ್ತಿರುತ್ತವೆ. ಈ ಕಲ್ಲುಗಳನ್ನು ತರುವ ಹಳೆಯ ಲಾರಿಗಳು ಅಷ್ಟೇನೂ ಉತ್ತಮ ಸ್ಥಿತಿಯಲ್ಲಿಲ್ಲ. ಈ ಕಲ್ಲುಗಳನ್ನು ಕೂಡ ಬೇಕಾಬಿಟ್ಟಿ ತುಂಬಿಕೊಂಡಂತೆ ಕಾಣಿಸುವುದರಿಂದ ಜನರಲ್ಲಿ ಆತಂಕ ಹುಟ್ಟಿಕೊಂಡಿದೆ.
ಇತ್ತೀಚೆಗೆ ಚರ್ಚ್ ರಸ್ತೆಯಲ್ಲಿನ ಶಾಲೆ ಸಮೀಪ ಲಾರಿಯಿಂದ ಕಲ್ಲುಗಳು ಉರುಳಿಬಿದ್ದಿರುವುದು ನಾಗರಿಕರಲ್ಲಿ ಹೆಚ್ಚಿನ ಆತಂಕಕ್ಕೆ ಕಾರಣ ವಾಗಿದೆ. ಈ ಕಲ್ಲುಗಳನ್ನು ಸಾಗಿಸುವ ಲಾರಿಗಳು ನಿಯಮ ಮೀರಿ ಭಾರವನ್ನು ತುಂಬಿಕೊಂಡು ಸಂಚ ರಿಸುತ್ತವೆಯೆ,ಈ ಲಾರಿಗಳು ಬಳಕೆಗೆ ಯೋಗ್ಯವಾಗಿವೆಯೆ ಎಂಬುದನ್ನು ಅಧಿಕಾರಿಗಳು ಆಗಾಗ್ಗೆ ಪರಿಶೀಲಿಸಬೇಕು ಅಪಾಯ ಸಂಭವಿಸಿದ ಮೇಲೆ ಎಚ್ಚೆತ್ತು ಕೊಳ್ಳುವುದ ಕ್ಕಿಂತ ಈಗಲೇ ಜಾಗರೂಕತೆ ವಹಿಸುವುದೊಳ್ಳೆ ಯದು. ಬ್ರೇಕ್ ವಾಟರ್ ಕಾಮಗಾರಿಯೂ ಆದಷ್ಟು ಬೇಗ ಪೂರ್ಣಗೊಳ್ಳಲಿ ಎನ್ನುವುದು ಜನಾಶಯ.
– ನರೇಂದ್ರ ಎಸ್. ಗಂಗೊಳ್ಳಿ, ಉಪನ್ಯಾಸಕರು