Advertisement

ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಗಮನ ಹರಿಸಿ

07:44 PM Nov 22, 2021 | Team Udayavani |

ರಬಕವಿ-ಬನಹಟ್ಟಿ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಹೆಚ್ಚು ಗಮನ ನೀಡಬೇಕು. ಸತತ ಅಧ್ಯಯನ, ದೃಢ ಸಂಕಲ್ಪಗಳು ವ್ಯಕ್ತಿಯ ವ್ಯಕ್ತಿತ್ವವನ್ನು ಹೆಚ್ಚಿಸುತ್ತವೆ ಎಂದು ಬೆಂಗಳೂರಿನ ಕಸ್ಟಮ್‌ ವಿಭಾಗದ ಡೆಪ್ಯೂಟಿ ಕಮೀಶನರ್‌ ಆಗಿ ಪದೋನ್ನತಿ ಹೊಂದಿದ ಸ್ಥಳೀಯ ಡಾ| ಕಿಶೋರ ಭಟ್ಟಡ ಹೇಳಿದರು.

Advertisement

ಸ್ಥಳೀಯ ಗೆಳೆಯರ ಬಳಗದವರು ಪದೋನ್ನತಿ ಹೊಂದಿದ ನಿಮಿತ್ತ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಯಲ್ಲಟ್ಟಿಯ ಕೊಣ್ಣೂರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ| ಬಸವರಾಜ ಕೊಣ್ಣೂರ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಪ್ರತಿಭಾವಂತ ವಿದ್ಯಾರ್ಥಿಗಳಿದ್ದು, ಅವರಿಗೆ ಪ್ರೋತ್ಸಾಹ ಅಗತ್ಯವಾಗಿದೆ. ಡಾ| ಕಿಶೋರ ಭಟ್ಟಡ ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಯಲ್ಲಿ ರಾಷ್ಟ್ರಕ್ಕೆ 808ನೇ ಸ್ಥಾನ ಪಡೆದುಕೊಂಡಿದ್ದರು.

ಪಿಯುಸಿ ದ್ವಿತೀಯ ವರ್ಷದ ಸಿಇಟಿ ಪರೀಕ್ಷೆಯಲ್ಲೂ ಕೂಡಾ ರಾಜ್ಯಕ್ಕೆ 6ನೇ ಸ್ಥಾನ ಪಡೆದುಕೊಂಡು ವಿಶೇಷ ಸಾಧನೆ ಮಾಡಿದ್ದರು. ಅವರು ಈ ಭಾಗದ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ ಎಂದರು. ಈ ಸಂದರ್ಭದಲ್ಲಿ ಮುಂಬೈಯ ಠಾಣೆಯ ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಾ ಧೀಶ ಅಭಯ ಮಂತ್ರಿ, ಪ್ರಕಾಶ ಹೋಳಗಿ, ವಿನಾಯಕ ತಾಂಬಟ, ಕಿರಣ ಆಳಗಿ, ಡಾ| ಸಾಗರ, ವಿಶ್ವಜ ಕಾಡದೇವರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next