Advertisement
ಅದಾನಿ ಸಮೂಹ ಸಂಸ್ಥೆಯನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿರುವಂತೆ ತೋರುತ್ತಿದೆ ಎಂದು ಸಂದರ್ಶನವೊಂದರಲ್ಲಿ ಪವಾರ್ ಹೇಳಿಕೆ ನೀಡಿದ್ದರು. ಇದರಿಂದ ವಿಪಕ್ಷಗಳನ್ನು ಬಿಜೆಪಿ ವಿರುದ್ಧ ಒಗ್ಗೂಡಿಸುವ ಕಾಂಗ್ರೆಸ್ ಪ್ರಯತ್ನಕ್ಕೂ ಹಿನ್ನಡೆ ಎನ್ನುವಂಥ ಮಾತು ಕೇಳಿಬಂದಿತ್ತು.ಬೆನ್ನಲ್ಲೇ ತಮ್ಮ ಹೇಳಿಕೆ ಕುರಿತು ಪವಾರ್ ಸ್ಪಷ್ಟನೆ ನೀಡಿದ್ದಾರೆ.”ಹಿಂಡನ್‌ಬರ್ಗ್ ಸಂಸ್ಥೆಯ ಪೂರ್ವಾಪರ ನನಗೆ ತಿಳಿದಿಲ್ಲ. ಒಂದು ವಿದೇಶಿ ಸಂಸ್ಥೆ, ದೇಶದಲ್ಲಿ ಇಷ್ಟೆಲ್ಲ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂಬುದಾದರೆ, ಈ ಬಗ್ಗೆ ಎಷ್ಟು ಗಮನಹರಿಸಬೇಕೆಂದು ನಾವು ನಿರ್ಧರಿಸಬೇಕು. ಜೆಪಿಸಿಯನ್ನು ಸಂಸತ್ತಿನ ಬಲದ ಮೇಲೆ ರಚಿಸಲಾಗುತ್ತದೆ. ಅದರಲ್ಲಿ ಬಹುತೇಕರು ಆಡಳಿತ ಪಕ್ಷದ ಸದಸ್ಯರೇ ಇರುವ ಕಾರಣ, ತನಿಖೆಗೆ ಅದಕ್ಕಿಂತ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿ ಉತ್ತಮ ಎಂಬುದು ನನ್ನ ಅಭಿಪ್ರಾಯವಾಗಿದೆ’ ಎಂದಿದ್ದಾರೆ.