Advertisement

ಫೇಸ್ ಬುಕ್ ಪೋಸ್ಟ್ ದೊಡ್ಡ ಕಾರಣವೇನು ಅಲ್ಲ, ರಾಜಕೀಯ ತಂತ್ರವಿದೆ: ಆರೋಪಿ ನವೀನ್ ತಂದೆ

04:09 PM Aug 14, 2020 | keerthan |

ಬೆಂಗಳೂರು: ನಗರದ ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿ ಮಂಗಳವಾರ ರಾತ್ರಿ ಗಲಭೆಯಾಗಲು ರಾಜಕೀಯ ತಂತ್ರಗಳಿವೆ. ಕೇವಲ ಫೇಸ್ ಬುಕ್ ಪೋಸ್ಟ್ ಕಾರಣದಿಂದ ಇದು ಸಾಧ್ಯವಾಗಿಲ್ಲ ಎಂದು ಬಂಧಿತ ಆರೋಪಿ ನವೀನ್ ತಂದೆ ಪವನ್ ಕುಮಾರ್ ಹೇಳಿದ್ದಾರೆ.

Advertisement

ಒಂದು ವೇಳೆ ಮಗ ನವೀನ್ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ. ಕಾನೂನಿನ ಮೂಲಕ ಶಿಕ್ಷೆಯಾಗಲಿ, ಕಾನೂನುಗಿಂತ ಯಾರೂ ಮಿಗಿಲಲ್ಲ ಎಂದು ಪವನ್ ಕುಮಾರ್ ಹೇಳಿರುವುದಾಗಿ ವರದಿಯಾಗಿದೆ.

ಫೇಸ್ ಬುಕ್ ನಲ್ಲಿ ಫೋಟೊ ಪೋಸ್ಟ್ ಮಾಡಿದ್ದು, ದೊಡ್ಡ ವಿಷಯವೇನಲ್ಲ. ಇದಕ್ಕಾಗಿ ಈ ರೀತಿಯ ಗಲಾಟೆಯ ಅಗತ್ಯವಿರಲಿಲ್ಲ. ಆದರೆ ಈ ಕೃತ್ಯದ ಹಿಂದೆ ರಾಜಕೀಯ ದುರುದ್ದೇಶವಿದೆ ಎಂದು ಪವನ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಫೇಸ್ ಬುಕ್ ನಲ್ಲಿ ವಿವಾದಾತ್ಮಕ ಪೋಸ್ಟ್ ನ್ನು ತಾನೇ ಹರಿಬಿಟ್ಟಿರುವುದಾಗಿ ನವೀನ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಬೆಂಗಳೂರು ಗಲಭೆ ಆರೋಪಿಗಳು ಬಳ್ಳಾರಿಗೆ ಶಿಫ್ಟ್: ಬಳ್ಳಾರಿ ಜೈಲಿನ 16 ಖೈದಿಗಳಿಗಿದೆ ಕೋವಿಡ್ !

Advertisement
Advertisement

Udayavani is now on Telegram. Click here to join our channel and stay updated with the latest news.

Next