Advertisement

ನಿಂದನೆಯ ಪೋಸ್ಟ್‌ ಬೇಡ: ಪವನ್‌ ಕಪೂರ್‌

05:03 PM Apr 22, 2020 | sudhir |

ತಾರತಮ್ಯ ಧೋರಣೆಯು ನಮ್ಮ ನೈತಿಕ ಮೌಲ್ಯಕ್ಕೆ ವಿರುದ್ಧವಾದುದು ಎಂಬುದನ್ನು ಸದಾ ನೆನಪಿಟ್ಟುಕೊಳ್ಳಬೇಕು ಎಂದು ಯುಎಇಯಲ್ಲಿರುವ ಭಾರತದ ರಾಯಭಾರಿ ಪವನ್‌ ಕಪೂರ್‌, ಅಲ್ಲಿನ ಭಾರತೀಯರಲ್ಲಿ ಮನವಿ ಮಾಡಿದ್ದಾರೆ.

Advertisement

ಯುಎಇಯಲ್ಲಿ ನೆಲೆಸಿರುವ ಕೆಲ ಭಾರತೀಯರು ಸಾಮಾಜಿಕ ಜಾಲತಾಣಗಳಲ್ಲಿ ಇಸ್ಲಾಂ ಕುರಿತು ಪೂರ್ವಗ್ರಹದ (ಇಸ್ಲಾಮೋಫೋಬಿಯ) ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಬಗ್ಗೆ ರಾಜಮನೆತನ ಮತ್ತು ಅರಬ್‌ ನಾಗರಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರು ಟ್ವೀಟ್‌ ಮಾಡಿ ಮನವಿ ಮಾಡಿಕೊಂಡಿದ್ದಾರೆ. “ಕೋವಿಡ್ ಅಂಟಿಕೊಳ್ಳುವ ಮುನ್ನ ನಿಮ್ಮ ಜನಾಂಗ, ಧರ್ಮ, ಜಾತಿ, ಮತ, ಬಣ್ಣ, ಭಾಷೆ ಮತ್ತು ಗಡಿಗಳನ್ನು ನೋಡುವುದಿಲ್ಲ. ಹೀಗಾಗಿ ಕೋವಿಡ್ ವಿರುದ್ಧದ ಹೋರಾಟದಲ್ಲಿ ನಾವೆಲ್ಲರೂ ಒಗ್ಗಟ್ಟು ಮತ್ತು ಸಹೋದರತ್ವ ಪ್ರದರ್ಶಿಸಬೇಕಿದೆ’ ಎಂಬ ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಅನ್ನು ಉಲ್ಲೇಖೀಸಿದ್ದಾರೆ. ಭಾರತ ಮತ್ತು ಯುಎಇ ಯಾವುದೇ ವಿಧದಲ್ಲೂ ತಾರತಮ್ಯ ಧೋರಣೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next