Advertisement

Pawan Kalyan: ವಿಚ್ಚೇದನ ವದಂತಿಗೆ ತೆರೆ‌; ಪತ್ನಿ ಜೊತೆ ಕಾಣಿಸಿಕೊಂಡ ಪವನ್‌ ಕಲ್ಯಾಣ್

09:31 AM Jul 06, 2023 | Team Udayavani |

ಹೈದರಾಬಾದ್: ಟಾಲಿವುಡ್‌ ನಟ ಪವನ್‌ ಕಲ್ಯಾಣ್‌ ಹಾಗೂ ಪತ್ನಿ ಅನ್ನಾ ಲಿಜ್ನೋವಾ ಅವರ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿದೆ ಎನ್ನುವ ಸುದ್ದಿ ಹರಡುತ್ತಿರುವಾಗಲೇ ಇದೀಗ ನಟ ಪವನ್‌ ಕಲ್ಯಾಣ್‌ ಪತ್ನಿ ಜೊತೆ ಕಾಣಿಸಿಕೊಂಡಿರುವ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Advertisement

ಪವನ್‌ ಕಲ್ಯಾಣ್‌ ಅವರ ಸಾರ್ವಜನಿಕ ಕಾರ್ಯಕ್ರಮ ಅಥವಾ ಕುಟುಂಬದಕಾರ್ಯಕ್ರಮದಲ್ಲಿ ಸದಾ ಕಾಣಿಸಿಕೊಳ್ಳುತ್ತಿದ್ದ ಪತ್ನಿ ಅನ್ನಾ ಲಿಜ್ನೋವಾ ಇತ್ತೀಚೆಗಿನ ಅವರ ಕಾರ್ಯಕ್ರಮದಲ್ಲೂ ಅವರ ಜೊತೆಯಾಗಿ ಕಾಣಿಸಿಕೊಂಡಿಲ್ಲ. ಅವರಿಬ್ಬರು ದೂರವಾಗಿದ್ದಾರೆ. ವಿಚ್ಚೇದನಕ್ಕೆ ಮುಂದಾಗಿದ್ದಾರೆ ಎನ್ನುವ ವದಂತಿಗಳು ಹಬ್ಬಿತ್ತು. ಆದರೀಗ ಈ ವದಂತಿಗೆ ತೆರೆಬಿದ್ದಿದೆ.

ಆಂಧ್ರ ಪ್ರದೇಶದ ಚುನಾವಣಾ ಅಂಗವಾಗಿ ಪವನ್‌ ಕಲ್ಯಾಣ್‌ ಅವರು ಕಳೆದ ಕೆಲ ಸಮಯದಿಂದ ವಾರಾಹಿ ವಿಜಯ ಯಾತ್ರೆಯನ್ನು ಮಾಡುತ್ತಿದ್ದಾರೆ. ಈ ಯಾತ್ರೆಯ ಮೊದಲ ಹಂತ ಇತ್ತೀಚೆಗೆ ಮುಕ್ತಾಯ ಕಂಡಿದೆ. ಈ ಹಿನ್ನೆಲೆಯಲ್ಲಿ ಜನ ಸೇನಾ ಪಕ್ಷದಿಂದ ಅವರ ನಿವಾಸದಲ್ಲಿ ಪೂಜೆಯೊಂದನ್ನು ಏರ್ಪಾಡಿಸಲಾಗಿತ್ತು. ಅದರಲ್ಲಿ ಪತ್ನಿ ಅನ್ನಾ ಭಾಗಿಯಾಗಿದ್ದಾರೆ.

ಈ ಬಗ್ಗೆ ಜನ ಸೇನಾ ಪಕ್ಷದ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಫೋಟೋ ಹಂಚಿಕೊಳ್ಳಲಾಗಿದೆ.

“ವಾರಾಹಿ ವಿಜಯ ಯಾತ್ರೆಯ ಮೊದಲ ಹಂತ ಯಶಸ್ವಿಯಾಗಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಜನಸೇನಾ ಪಕ್ಷದ ಅಧ್ಯಕ್ಷರಾದ ಶ್ರೀಪವನ್ ಕಲ್ಯಾಣ್ ಮತ್ತು ಶ್ರೀಮತಿ ಅನಾ ಕೊನಿಡೇಲ ಅವರು ಹೈದರಾಬಾದ್‌ನ ತಮ್ಮ ನಿವಾಸದಲ್ಲಿ ನಡೆದ ಪೂಜಾ ಕಾರ್ಯಕ್ರಮಲ್ಲಿ ಭಾಗವಹಿಸಿದರು. ಇನ್ನು ಕೆಲವೇ ದಿನಗಳಲ್ಲಿ ವಾರಾಹಿ ವಿಜಯ ಯಾತ್ರೆಯ ಮುಂದಿನ ಹಂತ ಆರಂಭವಾಗಲಿದೆ. ಇದಕ್ಕಾಗಿ ಪೂರ್ವಸಿದ್ಧತಾ ಸಭೆಗಳಲ್ಲಿ ಭಾಗವಹಿಸಲು ಶ್ರೀ ಪವನ್ ಕಲ್ಯಾಣ್ ಅವರು ಶೀಘ್ರದಲ್ಲೇ ಮಂಗಳಗಿರಿ ತಲುಪಲಿದ್ದಾರೆ”ಎಂದು ಬರೆಯಲಾಗಿದೆ.

Advertisement

ಈ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಪವರ್‌ ಸ್ಟಾರ್‌ ಅಭಿಮಾನಿಗಗಳು ಖುಷ್‌ ಆಗಿದ್ದಾರೆ.

ʼತೀನ್ ಮಾರ್ʼ ಶೂಟಿಂಗ್ ವೇಳೆ ಪವನ್ ಕಲ್ಯಾಣ್ ಮತ್ತು ಅನ್ನಾ ಪರಿಚಿತರಾಗಿ ಪ್ರೀತಿಸ ತೊಡಗಿದ್ದರು. 2013 ರ ಡಿಸೆಂಬರ್‌ ನಲ್ಲಿ ಆತ್ಮೀಯರ ಸಮ್ಮುಖದಲ್ಲಿ ಇಬ್ಬರು ಮದುವೆಯಾಗಿದ್ದರು. ಈ ದಂಪತಿಗೆ ಪೋಲೆನಾ ಅಂಜನಾ ಪವನೋವಾ ಮತ್ತು ಮಗ ಮಾರ್ಕ್ ಶಂಕರ್ ಪವನೋವಿಚ್ ಎಂಬ ಇಬ್ಬರು ಮಕ್ಕಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next