ಹೈದರಾಬಾದ್: ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಇತ್ತೀಚಿನ ದಿನಗಳಲ್ಲಿ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ಅವರು ಇನ್ಸ್ಟಾಗ್ರಾಮ್ ಖಾತೆಯನ್ನು ತೆರದಿದ್ದಾರೆ. ತನ್ನ ಮೆಚ್ಚಿನ ನಟ ಇನ್ಸ್ಟಾಗ್ರಾಮ್ ಖಾತೆಯನ್ನು ತೆರೆದಿರುವುದನ್ನು ಅಭಿಮಾನಿಗಳು ಟ್ವಿಟರ್ ನಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ. ಈ ನಡುವೆ ಅವರ ಸಂಸಾರಿಕ ಜೀವನದ ಬಗ್ಗೆಯೂ ಕಳೆದ ಕೆಲ ದಿನಗಳಿಂದ ಸುದ್ದಿಯಾಗುತ್ತಿದೆ.
ಪತ್ನಿ ಅನ್ನಾ ಲಿಜ್ನೋವಾ ಅವರು ಪವನ್ ಕಲ್ಯಾಣ್ ರಿಂದ ದೂರವಾಗಿದ್ದರೆ ಎನ್ನುವ ಕೆಲ ಗಾಸಿಪ್ ಗಳು ಟಾಲಿವುಡ್ ಟೌನ್ ನಲ್ಲಿ ಹರಿದಾಡುತ್ತಿದೆ. ಇದಕ್ಕೆ ಕಾರಣ ಪವನ್ ಕಲ್ಯಾಣ್ ರೊಂದಿಗೆ ಅವರು ಕಳೆದ ಕೆಲ ಸಮಯದಿಂದ ಜೊತೆಯಾಗಿ ಕಾಣಿಸಿಕೊಳ್ಳದೇ ಇರುವುದು ಎನ್ನಲಾಗಿದೆ.
ಪವನ್ ರೊಂದಿಗೆ ಸಾರ್ವಜನಿಕ ಸಮಾರಂಭ, ಕುಟುಂಬದ ಸಮಾರಂಭದಲ್ಲಿ ಕಾಣಿಸಿಕೊಳ್ಳುತ್ತಿದ್ದ ಪತ್ನಿ ಅನ್ನಾ ಕಳೆದ ಕೆಲ ಸಮಯದಿಂದ ಎಲ್ಲೂ ಕೂಡ ಜೊತೆಯಾಗಿ ಕಾಣಿಸಿಕೊಂಡಿಲ್ಲ. ಪ್ರಮುಖವಾಗಿ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಅವರ ನಿಶ್ಚಿತಾರ್ಥ ಸಮಾರಂಭದಲ್ಲೂ ಅವರು ಕಂಡಿಲ್ಲ. ಇನ್ನು ಪವನ್ ಅವರ ರಾಜಕೀಯ ಪ್ರಚಾರ ಕಾರ್ಯಕ್ರಮಕ್ಕೂ ಅವರು ಹಾಜರಾಗಿಲ್ಲ.
ಈ ಎಲ್ಲಾ ಕಾರಣದಿಂದ ಪವನ್ ಕಲ್ಯಾಣ್ – ಅನ್ನಾ ಲಿಜ್ನೋವಾ ಅವರ ಸಂಬಂಧದಲ್ಲಿ ಬಿರುಕು ಉಂಟಾಗಿದೆ. ಅವರು ವಿಚ್ಛೇದನ ಮುಂದಾಗಿದ್ದಾರೆ ಎನ್ನುವ ವದಂತಿಗಳು ಹಬ್ಬಿವೆ. ಆದರೆ ಈ ಬಗ್ಗೆ ಅಧಿಕೃತವಾಗಿ ಯಾವ ಮಾಹಿತಿಯೂ ಬಂದಿಲ್ಲ.
ʼತೀನ್ ಮಾರ್ʼ ಶೂಟಿಂಗ್ ವೇಳೆ ಪವನ್ ಕಲ್ಯಾಣ್ ಮತ್ತು ಅನ್ನಾ ಪರಿಚಿತರಾಗಿ ಪ್ರೀತಿಸ ತೊಡಗಿದ್ದರು. 2013 ರ ಡಿಸೆಂಬರ್ ನಲ್ಲಿ ಆತ್ಮೀಯರ ಸಮ್ಮುಖದಲ್ಲಿ ಇಬ್ಬರು ಮದುವೆಯಾಗಿದ್ದರು. ಈ ದಂಪತಿಗೆ ಪೋಲೆನಾ ಅಂಜನಾ ಪವನೋವಾ ಮತ್ತು ಮಗ ಮಾರ್ಕ್ ಶಂಕರ್ ಪವನೋವಿಚ್ ಎಂಬ ಇಬ್ಬರು ಮಕ್ಕಳಿದ್ದಾರೆ. ಸದ್ಯ ಮಕ್ಕಳು ಅನ್ನಾ ಅವರ ಬಳಿಯೇ ಇದ್ದಾರೆ ಎನ್ನಲಾಗಿದೆ.
ಇದು ಪವನ್ ಕಲ್ಯಾಣ್ ಅವರ ಮೂರನೇ ಮದುವೆ. ಅವರು ಈ ಮೊದಲು ನಂದಿನಿ ಮತ್ತು ರೇಣು ದೇಸಾಯಿ ಅವರನ್ನು ಮದುವೆಯಾಗಿದ್ದರು.