Advertisement
ಪಾವಂಜೆ ನಾಗವೃಜ ಕ್ಷೇತ್ರದ ಬಾಕಿಮಾರು ಗದ್ದೆಯಲ್ಲಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ಕೃಪಾಪೋಷಿತ ಯಕ್ಷಗಾನ ಮಂಡಳಿಯ 3ನೇ ವರುಷದ ಯಕ್ಷಗಾನ ತಿರುಗಾಟಕ್ಕೆ ಶನಿವಾರ ಚಾಲನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Related Articles
Advertisement
ಅಶೋಕ್ ಶೆಟ್ಟಿ ಕಲ್ಪವೃಕ್ಷ, ಸಚ್ಚಿದಾನಂದ ಶೆಟ್ಟಿ ಮುಂಬಯಿ, ಪ್ರೊ| ಎಂ.ಎಲ್. ಸಾಮಗ, ಸಿಎ ದಿವಾಕರ ರಾವ್, ಯೋಗೀಂದ್ರ ಭಟ್ ಉಳಿ, ಕದ್ರಿ ನವನೀತ್ ಶೆಟ್ಟಿ, ಹಳೆಯಂಗಡಿ ಗ್ರಾಮ ಪಂಚಾಯತ್ ಸದಸ್ಯರಾದ ಸುಕೇಶ್ ಪಾವಂಜೆ, ಅಶ್ವಿನ್ ದೇವಾಡಿಗ, ಹಳೆಯಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿಯ ಹಿಮಕರ್ ಕದಿಕೆ ಉಪಸ್ಥಿತರಿದ್ದರು. ಪುರುಷೋತ್ತಮ ಭಂಡಾರಿ ಅಡ್ಯಾರು ನಿರೂಪಿಸಿದರು. ಕಲಾವಿದರ ಕೂಡುವಿಕೆಯಲ್ಲಿ ಪಾಂಡವಾಶ್ವಮೇಧ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ಸ್ವರ್ಣ ಕಿರೀಟದ ಆಕರ್ಷಣೆಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಅವರು ಸೇವಾ ರೂಪದಲ್ಲಿ ನೀಡಿದ ಸ್ವರ್ಣ ಕಿರೀಟ ಈ ಬಾರಿಯ ಆಕರ್ಷಣೆಯಾಗಿದೆ. ಪಾವಂಜೆ ಅಣ್ಣಪ್ಪಯ್ಯ ಯುವ ವೇದಿಕೆಯಿಂದ ಉಯ್ನಾಲೆಯ ಬೆಳ್ಳಿಯ ಪ್ರಭಾವಳಿ, ಬಿರುವೆರ್ ಕುಡ್ಲ ಅವರಿಂದ ಬೆಳ್ಳಿ ಕಿರೀಟ, ಯೋಗೀಂದ್ರ ಭಟ್ ಉಳಿ ಅವರಿಂದ ಬೆಳ್ಳಿಯ ಶಂಖ, ರಾಮ್‌ಪ್ರಸಾದ್‌ರಿಂದ ಬೆಳ್ಳಿಯ ಬಿಲ್ಲು-ಬಾಣ, ಶರತ್ ಕಾರ್ನಾಡು ಅವರಿಂದ 6 ಆಯುಧಗಳನ್ನು ಸೇವಾ ರೂಪದಲ್ಲಿ ನೀಡಲಾಯಿತು. ಪ್ರಸ್ತುತ ತಿರುಗಾಟದಲ್ಲಿ ಪ್ರೊ| ಪವನ್ ಕಿರಣ್‌ಕೆರೆ ರಚಿಸಿರುವ “ನಾಗ ಸಂಜೀವನ’ ಪ್ರಸಂಗ ಪ್ರದರ್ಶನಗೊಳ್ಳಲಿದೆ. 180ಕ್ಕೂ ಹೆಚ್ಚು ಯಕ್ಷಗಾನ ಬುಕ್ಕಿಂಗ್ ಆಗಿದೆ.