Advertisement
ದೇವಸ್ಥಾನದಲ್ಲಿ ವಿಶ್ವ ಜಿಗೀಷದ್ ಯಾಗ ಹಾಗೂ ಮಹಾರಥೋತ್ಸವ ಸಂಭ್ರಮದ ಮುಕ್ತಾಯದ ಜತೆಗೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆಯುತ್ತಿರುವುದರಿಂದ ಕ್ಷೇತ್ರಕ್ಕೆ ಆಗಮಿಸುವವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದ್ದು ಎಲ್ಲ ವ್ಯವಸ್ಥೆಗಳನ್ನು ಆಚ್ಚು ಕಟ್ಟಾಗಿ ನಿರ್ವಹಿಸಲು ಆಡಳಿತ ಮಂಡಳಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಸಜ್ಜಾಗಿದೆ.
Related Articles
Advertisement
ಶಿಖರಕ್ಕೆ ಸಾರ್ವತ್ರಿಕ ಕಲಶಾಭಿಷೇಕಬ್ರಹ್ಮಕಲಶದ ಸಂದರ್ಭದಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕಲಶಗಳನ್ನು ಸ್ಥಾಪಿಸಿ, ಪೂಜಿಸಿ ಶಕ್ತಿ ಸಂಚಯಿಸಿ ಆ ಪವಿತ್ರ ತೀರ್ಥ ಜಲವನ್ನು ಶ್ರೀ ದೇವರಿಗೆ ಅಭಿಷೇಕಿಸಿ, ಶೇಷ ಭಾಗವನ್ನು ಗರ್ಭಗೃಹದ ಶಿಖರಕ್ಕೆ ಪುರುಷ ಸೇವಾದಾರರು ವಸ್ತ್ರ ಸಂಹಿತೆಯಾಗಿ, ಸ್ವತಃ ಅಭಿಷೇಕ ಮಾಡುವ ಅಪೂರ್ವ ಕಾರ್ಯಕ್ರಮ ಈ ಕಲಶಾಭಿಷೇಕಕ್ಕೆ ಸದಾವಕಾಶವಿದ್ದು, ಹಿರಿಯರು ಶಾಂತಿ ಕರ್ಮದ ಫಲವನ್ನು ಅನುಭವಿಸುವುದಕ್ಕೆ ಸದಾವಕಾಶ ಇದೆ. ದೇವಳದ ಶಿಖರಕ್ಕೆ ಅಭಿಷೇಕ ಮಾಡಿ, ಶಿಖರಕ್ಕೆ ಒಂದು ಹಿಡಿ ನಾಣ್ಯವನ್ನೂ ಅಭಿಷೇಕ ಮಾಡಿ, ಹೂವಿನ ಹಾರ ಹಾಕಿ ಪೂಜಿಸುವುದರಿಂದ 60 ಸಂವತ್ಸರ ತುಂಬಿದ ಹಿರಿಯರಿಗೆ ಷಷ್ಟ್ಯಬ್ದಿ, ಭೀಮರಥ, ವಿಜಯರಥ.. ಇತ್ಯಾದಿ ಶಾಂತಿಕರ್ಮಗಳ ಫಲಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿಂದ ಈ ವ್ಯವಸ್ಥೆ ಮಾಡಲಾಗಿದೆ. ಈ ತಾತ್ಕಾಲಿಕ ನಿರ್ಮಿಸಿರುವ ಅಟ್ಟಳಿಗೆಯನ್ನು ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸಾರ್ವಜನಿಕರು ಕಲಶಾಭಿಷೇಕ ಮಾಡುವ ಕ್ರಮವು ವಿಶೇಷವಾಗಿದೆ.