Advertisement

ಕಲಾಪೋಷಣೆ ಇದ್ದಲ್ಲಿ ಪ್ರತಿಭೆಗೆ ಅವಕಾಶ: ಅಭಯಚಂದ್ರ

12:22 AM Nov 18, 2021 | Team Udayavani |

ಹಳೆಯಂಗಡಿ: ಕಲಾಪೋಷಣೆ ಇದ್ದಲ್ಲಿ ಮಾತ್ರ ಕಲಾವಿದರೂ ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಲು ಸಾಧ್ಯ. ಯಕ್ಷಗಾನ ತುಳುನಾಡಿನ ಶ್ರೀಮಂತ ಕಲೆಯಾಗಿರುವುದರಿಂದ ಎಲ್ಲರೂ ಪ್ರೋತ್ಸಾಹಿಸೋಣ ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್‌ ಅವರು ಹೇಳಿದರು.

Advertisement

ಪಾವಂಜೆಯ ಶ್ರೀ ಜ್ಞಾನಶಕ್ತಿ ಸುಬ್ರಮಣ್ಯಸ್ವಾಮೀ ದೇವಸ್ಥಾನದ ಬಾಕಿಮಾರು ಗದ್ದೆಯಲ್ಲಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಎರಡನೇ ವರ್ಷದ ತಿರುಗಾಟಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.

ಮೇಳದ ಸಂಚಾಲಕ ಹಾಗೂ ಪ್ರಧಾನ ಭಾಗವತ ಪಟ್ಲ ಸತೀಶ್‌ ಶೆಟ್ಟಿ ಅವರಿಗೆ ವೇದಕೃಷಿಕ ಕೆ.ಎಸ್‌. ನಿತ್ಯಾನಂದ, ಧರ್ಮದರ್ಶಿ ಡಾ| ಯಾಜಿ ನಿರಂಜನ ಭಟ್‌, ಮೊಕ್ತೇಸರ ಶಶೀಂದ್ರಕುಮಾರ್‌ ಅವರು ಗೆಜ್ಜೆ ಹಾಗೂ ಹಿಮ್ಮೇಳದ ಸಾಧನಗಳನ್ನು ನೀಡಿ ಪ್ರಸಾದ ವಿತರಿಸಿದರು. ಸನ್ನಿ ಧಿಯಲ್ಲಿ ಕಲಾವಿದರು ಗೆಜ್ಜೆ ಸೇವೆ ನೀಡಿದರು. ಚೌಕಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಪೂನಾದ ದಾನಿಯೊಬ್ಬರು ಬೆಳ್ಳಿಯ ತ್ರಿಶೂಲವನ್ನು ಹಸ್ತಾಂತರಿಸಿದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಮಂಗಳೂರು ವಿ.ವಿ.ಯ ನಾರಾಯಣಗುರು ಅಧ್ಯಯನ ಪೀಠದ ನಿರ್ದೇಶಕ ಡಾ| ಗಣೇಶ್‌ ಅಮೀನ್‌ ಸಂಕಮಾರ್‌ ಮಾತನಾಡಿದರು.

ಇದನ್ನೂ ಓದಿ:ಬೆಂಗಳೂರಿನಲ್ಲಿ ಮತ್ತೊಬ್ಬ ಶಂಕಿತ ಐಎಸ್‌ಐ ಉಗ್ರ ಸೆರೆ

Advertisement

ಸೀತಾರಾಮ ಶೆಟ್ಟಿ ಸವಣೂರು, ಡಾ| ಎಂ.ಎಲ್‌. ಸಾಮಗ, ಡಾ| ಎಂ. ಪ್ರಭಾಕರ ಜೋಶಿ, ಮಟ್ಟಾರು ರತ್ನಾಕರ ಹೆಗ್ಡೆ, ರವೀಂದ್ರ ಉಳಿದೊಟ್ಟು, ಗುರ್ಮೆ ಸುರೇಶ್‌ ಶೆಟ್ಟಿ, ಸೌಂದರ್ಯ ರಮೇಶ್‌, ಪಟ್ಲಗುತ್ತು ಮಹಾಬಲ ಶೆಟ್ಟಿ, ನಕ್ರೆ ಬಾಲಕೃಷ್ಣ ಭಟ್‌, ರವಿಶಂಕರ್‌ ಶೆಟ್ಟಿ ಬಡಾಜೆ, ಯೋಗೀಂದ್ರ ಭಟ್‌ ಉಳಿ, ಪ್ರಸಾದ್‌ ಶೆಟ್ಟಿ, ಸಿ.ಎ.ದಿವಾಕರ ರಾವ್‌, ಡಾ| ಮನು, ಸಿ.ಎ. ಸುದೇಶ್‌ಕುಮಾರ್‌, ಶಂಭು ಶೆಟ್ಟಿ, ಅಡ್ಯಾರು ಮಾಧವ ನಾೖಕ್‌, ಸುಧಾಕರ್‌ ಎಸ್‌. ಪೂಂಜ, ಕುಡಾಲ ವೆಂಕಟ್ರಾಯ ಪೂನಾ, ಪೂರ್ಣಿಮಾ, ಜೀವನ್‌ ಪ್ರಕಾಶ್‌, ಸುಕೇಶ್‌ ಪಾವಂಜೆ, ಅಶ್ವಿ‌ನ್‌ ದೇವಾಡಿಗ, ಕುದ್ರೋಳಿ ಗಣೇಶ್‌ ಮತ್ತಿತರರು ಉಪಸ್ಥಿತರಿದ್ದರು.

ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕ ಉಮಾನಾಥ ಕೋಟ್ಯಾನ್‌, ಯಕ್ಷಧೃವ ಪಟ್ಲ ಫೌಂಡೇಶನ್‌ನ ಪ್ರಮುಖರು ಶುಭ ಹಾರೈಸಿದರು.

ಪಟ್ಲ ಸತೀಶ್‌ ಶೆಟ್ಟಿ ಸ್ವಾಗತಿಸಿದರು. ಪುರುಷೋತ್ತಮ ಭಂಡಾರಿ ಅಡ್ಯಾರು ನಿರೂಪಿಸಿದರು. ಮೇಳದ ಕಲಾವಿದರಿಂದ ಪಾಂಡವಾಶ್ವಮೇಧ ಪ್ರಸಂಗ ಪ್ರದರ್ಶನಗೊಂಡಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next