Advertisement

ಪವನ್‌ ಸುಖ್‌ದೇವ್‌ ಗೆ ಪರಿಸರ ನೊಬೆಲ್‌

10:02 AM Jan 29, 2020 | Hari Prasad |

ವಿಶ್ವಸಂಸ್ಥೆ: ಭಾರತದ ಪರಿಸರ ತಜ್ಞ, ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ರಾಯಭಾರಿ ಪವನ್‌ ಸುಖ್‌ದೇವ್‌ ಅವರಿಗೆ ‘ಟೇಲರ್‌ ಪುರಸ್ಕಾರ’ ಪ್ರಕಟಿಸಲಾಗಿದೆ. ಅದನ್ನು ಪರಿಸರ ಸಂರಕ್ಷಣೆಗಾಗಿ ನೀಡಲಾಗುವ ನೊಬೆಲ್‌ ಎಂದೇ ಪರಿಗಣಿಸಲಾಗಿದೆ.
‘ಹಸುರು ಪರಿಸರ’ ಕ್ಷೇತ್ರದಲ್ಲಿ ಅವರ ಕೊಡುಗೆ ಪರಿಗಣಿಸಿ ಈ ಗೌರವ ನೀಡಲಾಗುತ್ತಿದೆ.

Advertisement

ಪವನ್‌ ಜತೆಗೆ ಜೀವ ವಿಜ್ಞಾನಿ ಗ್ರೆಚೆಕನ್‌ ದೇವ್‌ ಅವರಿಗೂ ಈ ಪ್ರಶಸ್ತಿ ಸಂದಿದೆ. ಪರಿಸರ ವಿನಾಶದಿಂದ ಆರ್ಥಿಕ ಕ್ಷೇತ್ರಕ್ಕೂ ಪ್ರತಿಕೂಲ ಪರಿಣಾಮ ಉಂಟಾಗಲಿದೆ. ಈ ಬಗ್ಗೆ ರಾಜಕೀಯ ಮತ್ತು ಕಾರ್ಪೊರೇಟ್‌ ಕ್ಷೇತ್ರದ ನಾಯಕರು ಚಿಂತನೆ ನಡೆಸಬೇಕು ಎಂದು ಅವರಿಬ್ಬರು ಸಲಹೆ ಮಾಡಿದ್ದಾರೆ. ಮೇ 1ರಂದು ಅವರಿಬ್ಬರಿಗೆ 2 ಲಕ್ಷ ಅಮೆರಿಕನ್‌ ಡಾಲರ್‌ ನಗದು, ಚಿನ್ನದ ಪದಕ ನೀಡಿ ಗೌರವಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next