Advertisement
ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ ಡಾ.ಎಚ್.ಎಂ.ಪೂಜಾ, ಶುಶ್ರೂಷಣಾಧಿ- ಕಾರಿ ಜಿ.ಪದ್ಮಾವತಿ ಹಾಗೂ ಶಸ್ತ್ರಚಿಕಿತ್ಸಾ ವಿಭಾಗದ ತಜ್ಞ ಸಿಬಂದಿ ಬಿ.ಆರ್. ಕಿರಣ್ ಅವರನ್ನು ವಜಾಗೊಳಿಸಲಾಗಿತ್ತು.ಅರಿವಳಿಕೆ ತಜ್ಞೆ ಡಾ.ನಮ್ರತಾ ಮತ್ತು ಶುಕ್ರೂಷಕಿಯರಾದ ಕೆ.ನಾಗರತ್ನಮ್ಮ ಹಾಗೂ ಬಿ.ಮಾರಕ್ಕೆ ಅವರನ್ನು ಮೊದಲು ಬೇರೆ ಕಡೆ ವರ್ಗಾವಣೆ ಮಾಡಲಾಗಿತ್ತು. ಅದರೆ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಅವರನ್ನು ಮಂಗಳವಾರ ರಾತ್ರಿ ಅಮಾನತು ಮಾಡಿ ಅದೇಶ ನೀಡಲಾಗಿದೆ.
ಪಾವಗಡ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಸೇರಿದ ತಾಯಿ ಮಕ್ಕಳ ಅಸ್ಪತ್ರೆಯಲ್ಲಿ ಹೆರಿಗೆ ಮತ್ತು ಗರ್ಭ ಕೋಶ ಚಿಕಿತ್ಸೆಗೆಂದು ಈ ಹಿಂದೆ 7 ಮಂದಿ ಮಹಿಳೆಯರು ದಾಖಲಾಗಿದ್ದರು. ಈ ಪೈಕಿ ಅಂಜಲಿ(25) ಹೆರಿಗೆ ಸಂಬಂಧ ಚಿಕಿತ್ಸೆ, ಅನಿತಾ(30)ಗೆ ಸಂತಾನಶಕ್ತಿ ಹರಣ ಚಿಕಿತ್ಸೆ, ನರಸಮ್ಮ(40) ಗರ್ಭಕೋಶದ ಚಿಕಿತ್ಸೆಗೆ ದಾಖಲಾಗಿದ್ದರು. ಕೆಲವರು ಪಾವಗಡ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರೆ, ಇನ್ನೂ ಕೆಲವರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.