ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಸನ್ನಿಹಿತವಾಗುತ್ತಿರುವಂತೆಯೇ ರಾಜ್ಯ ಸರಕಾರದ ಸಾಧನೆ, ಅಭಿವೃದ್ಧಿ ಯೋಜನೆಗಳು ಮುಂತಾಗಿ ಹಲವು ರೀತಿಯಲ್ಲಿ ತಮ್ಮ ನೇತೃತ್ವದ ಕಾಂಗ್ರೆಸ್ ಸರಕಾರದ ಬಗ್ಗೆ ಜನರಲ್ಲಿ ಸದ್ಭಾವನೆ ಉಂಟುಮಾಡುವ ಯತ್ನದಲ್ಲಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದು ಏಶ್ಯ ಖಂಡದಲ್ಲೇ ಅತೀ ದೊಡ್ಡದೆನ್ನುವ ಖ್ಯಾತಿವೆತ್ತ ಪಾವಗಡದ ಸೋಲಾರ್ ಪಾರ್ಕ್‌ನ ಮೊದಲ ಹಂತದ ಯೋಜನೆಯನ್ನು ಉದ್ಘಾಟಿಸಿದರು.
ರಾಜ್ಯದ ಹೆಮ್ಮೆಯ ಪಾವಗಡ ಸೋಲಾರ್ ಪಾರ್ಕ್ 13 ಸಾವಿರ ಎಕರೆ ಜಾಗದಲ್ಲಿ ಮೈದಳೆಯುತ್ತಿದೆ. ಇದರ ಒಟ್ಟು ನಿರ್ಮಾಣ ವೆಚ್ಚ 10 ಸಾವಿರ ಕೋಟಿ ರೂ.ಗಳಾಗಲಿವೆ.
ಈ ಸೋಲಾರ್ ಪಾರ್ಕ್ ಮೊದಲ ಹಂತದ ಕಾಮಗಾರಿ ಇದೀಗ ಪೂರ್ಣಗೊಂಡಿದ್ದು ಇದು 600 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಿ ರಾಜ್ಯಕ್ಕೆ ಪೂರೈಸಲು ಮುಂದಾಗಿದೆ.
ಪಾವಗಡ ಸೋಲಾರ್‌ಪಾರ್ಕ್ ಪೂರ್ಣಗೊಂಡಾಗ ಅದು ಎರಡು ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಿ ಕೊಡಲಿದೆ.
ಸೋಲಾರ್ ಪಾರ್ಕ್ ಮೈದಳೆಯು 13 ಸಾವಿರ ಎಕರೆಯ ಪೈಕಿ 12 ಸಾವಿರ ಎಕರೆಯನ್ನು ರಾಜ್ಯ ಸರಕಾರ ರೈತರಿಂದ ಪಡೆದು ಕಂಪೆನಿಗೆ ಹಸ್ತಾಂತರಿಸಿದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಸಿದ್ಧರಾಮಯ್ಯ, ಇಂಧನ ಸಚಿವ ಡಿ ಕೆ ಶಿವಕುಮಾರ್, ಸಚಿವ ಟಿ ಬಿ ಜಯಚಂದ್ರ ಮುಂತಾಗಿ ಅನೇಕ ಪ್ರಮುಖರು ಪಾಲ್ಗೊಂಡಿದ್ದರು.