Advertisement

ಅಪರಾಧ ತಡೆಗೆ ಗಸ್ತು ವ್ಯವಸ್ಥೆ

02:51 PM Jul 24, 2017 | |

ಶಿವಮೊಗ್ಗ: ಅಪರಾಧ ಪ್ರಕರಣ ಮತ್ತಿತರರೆ ದುಷ್ಕೃತ್ಯ ತಡೆಗೆ ಪೊಲೀಸ್‌ ಇಲಾಖೆಯಿಂದ ಸುಧಾರಿತ ಗಸ್ತು ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ತುಂಗಾನಗರ ಠಾಣೆ ಸಬ್‌ ಇನ್‌ ಸ್ಪೆಕ್ಟರ್‌ ಗಿರೀಶ್‌ ಹೇಳಿದರು.

Advertisement

ಇಲ್ಲಿನ ಗೋಪಾಳದ ಸಿದ್ಧೇಶ್ವರ ವೃತ್ತದ ಸಮೀಪದ ಸಮುದಾಯ ಭವನದಲ್ಲಿ ತುಂಗಾ ನಗರ ಠಾಣೆ ಮತ್ತು ನವ ಕರ್ನಾಟಕ ಯುವ ಶಕ್ತಿ ವೇದಿಕೆ ವತಿಯಿಂದ ಆಯೋಜಿಸಿದ್ದ ಹೊಸ ಬೀಟ್‌ ಪೊಲೀಸ್‌ ವ್ಯವಸ್ಥೆ ಕುರಿತು ಸಾರ್ವಜನಿಕರಿಗೆ ಪರಿಚಯ ಮತ್ತು ಜನ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.ಪೊಲೀಸ್‌ ಇಲಾಖೆ ಮತ್ತು  ಸಾರ್ವಜನಿಕರು ಹತ್ತಿರವಾಗಬೇಕು ಎಂಬ ಉದ್ದೇಶದಿಂದ ಸುಧಾರಿತ ಗಸ್ತು ವ್ಯವಸ್ಥೆ ಜಾರಿಗೆ ತರಲಾಗಿದೆ. ಬಡಾವಣೆಯ ಪ್ರತಿ 300ರಿಂದ 400 ಮನೆಗಳಿಗೆ ಒಬ್ಬರಂತೆ ಪೊಲೀಸ್‌ ಪೇದೆಗಳನ್ನು ನೇಮಕ ಮಾಡಲಾಗಿದೆ. ಅವರೊಂದಿಗೆ ಸಾರ್ವಜನಿಕರು ಮಾಹಿತಿ ಹಂಚಿಕೊಳ್ಳಬಹುದು. ಜತೆಗೆ ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದರೆ ಮಾಹಿತಿ ನೀಡಬಹುದು ಎಂದು ತಿಳಿಸಿದರು.

ಇತ್ತೀಚೆಗೆ ಮೊಬೈಲ್‌ಗ‌ಳಿಗೆ ಕರೆಮಾಡಿ ನಿರ್ದಿಷ್ಟ ಮಾಹಿತಿ ಕೇಳಿದಾಗ ಯಾವುದೇ ಮಾಹಿತಿಗಳನ್ನು ಹಂಚಿಕೊಳ್ಳಬಾರದು. ನಗರದಲ್ಲಿ ಸಾಕಷ್ಟು ಕಳ್ಳತನ ಪ್ರಕರಣಗಳು ಪತ್ತೆಯಾಗುತ್ತಿದೆ. ಸಾರ್ವಜನಿಕರು ಪರ ಊರಿಗೆ ತೆರಳುವಾಗ ಹತ್ತಿರದ ಠಾಣೆಗೆ ಮಾಹಿತಿ ನೀಡಬೇಕು. ಆಗ ಗಸ್ತು ವ್ಯವಸ್ಥೆ ಹೆಚ್ಚಿಸಬಹುದು ಎಂದರು. ಕಳ್ಳತನ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನಗಳಿದೆ. ಅದನ್ನು ಬಳಕೆ ಮಾಡಿಕೊಳ್ಳಬಹುದು. ಸಿಸಿ ಕ್ಯಾಮೆರಾ ಅಳವಡಿಕೆ ಮಾಡಿಕೊಳ್ಳಬಹುದು.ಇದರಿಂದ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಸಹಕಾರಿಯಾಗುತ್ತದೆ ಎಂದರು.

ನಿಯಮ ಪಾಲಿಸಿ: ವಾಹನ ಚಾಲನೆ ಮಾಡುವಾಗ ನಿಯಮ ಉಲ್ಲಂಘಿಸಿದರೆ ಪೊಲೀಸ್‌ ಇಲಾಖೆ ದಂಡ ಹಾಕುತ್ತದೆ. ಇಲಾಖೆಯಾಗಲಿ ಅಥವಾ ಸರ್ಕಾರವಾಗಲಿ ದುಡ್ಡು ಮಾಡಲು ಈ ಕ್ರಮ ಕೈಗೊಳ್ಳುವುದಿಲ್ಲ. ಕಾನೂನನ್ನು ಪರಿಪಾಲನೆ ಮಾಡಬೇಕು ಎಂಬುದನ್ನು ದಂಡ ಕಟ್ಟುವ ಮೂಲಕವಾದರು ಅರಿತುಕೊಳ್ಳಲಿ ಎಂಬ ಉದ್ದೇಶವಷ್ಟೆ. ವಾಹನಗಳಿಗೆ ಇನುÒರೆನ್ಸ್‌, ವಾಹನ ಪರವಾನಗಿ ಸೇರಿದಂತೆ ಎಲ್ಲಾ ದಾಖಲೆಗಳನ್ನು ಹೊಂದಿರಬೇಕು ಎಂದರು.

ನಿಯಮ ಉಲ್ಲಂಘಿಸುವವರ ವಿರುದ್ಧ ದಿನನಿತ್ಯ ಸಾವಿರಾರು ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಆದರೂ ಕೂಡ ಜನರಲ್ಲಿ ಜಾಗೃತಿ ಮೂಡುತ್ತಿಲ್ಲ. ಪ್ರತಿಯೊಬ್ಬರು ನಿಯಮಗಳನ್ನು ಪರಿಪಾಲನೆ ಮಾಡಬೇಕು. ಇದರಿಂದ ಅಪಘಾತ ಪ್ರಕರಣಗಳನ್ನು ತಡೆಗಟ್ಟಬಹುದು ಎಂದು ಹೇಳಿದರು. ಪ್ರಾಣಿಗಳಲ್ಲಿ ಅತಿ ಬುದ್ಧಿವಂತ ಪ್ರಾಣಿ ಮನುಷ್ಯ. ಆದರೆ ಕಾನೂನು ಇಲ್ಲದೆ ಹೋದರೆ ಮನುಷ್ಯನಿಗಿಂತ ದುಷ್ಟವಾದ ಪ್ರಾಣಿ ಬೇರೊಂದಿಲ್ಲ. ಆತ ತುಂಬಾ ಕ್ರೂರಿಯಾಗುತ್ತಾನೆ. ಸಮಾಜಬಾಹಿರ ಕೃತ್ಯಗಳನ್ನು ಎಸಗುತ್ತಾನೆ. ಇದಕ್ಕೆ ಕಡಿವಾಣ ಹಾಕಲು ಕಾನೂನು ರಚನೆ ಮಾಡಲಾಗಿದೆ ಎಂದರು.

Advertisement

 ನವ ಕರ್ನಾಟಕ ಯುವ ಶಕ್ತಿ ವೇದಿಕೆ ಜಿಲ್ಲಾಧ್ಯಕ್ಷ ಸತೀಶ್‌ ಗೌಡ, ಗೌರವಾಧ್ಯಕ್ಷ ಭದ್ರಾನಾಯ್ಕ, ನಗರಾಧ್ಯಕ್ಷ ಉಮೇಶ್‌, ಪೊಲೀಸ್‌ ಸಿಬ್ಬಂದಿ ಸಂತೋಷ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next