Advertisement

“ನಾವಿರುವ ಕ್ಷೇತ್ರದಲ್ಲೇ ದೇಶಪ್ರೇಮ ಮೆರೆಯಬೇಕು’

11:22 PM Aug 30, 2019 | Sriram |

ಮಡಿಕೇರಿ: ನಾವೆಲ್ಲರೂ ಸೈನಿಕರಾಗಲು ಸಾಧ್ಯವಿಲ್ಲ ಆದರೆ, ನಮ್ಮ ನಮ್ಮ ಕ್ಷೇತ್ರಗಳಲ್ಲಿ ಸೈನಿಕರಂತೆಯೇ ದೇಶ ಮೊದಲು ಎಂಬ ಭಾವನೆಯಿಂದ, ಶ್ರದ್ಧೆಯಿಂದ, ಪ್ರಾಮಾಣಿಕತೆಯಿಂದ ಕೆಲಸ ಮಾಡಿದಾಗ ಅದು ಕೂಡ ದೇಶ ಸೇವೆ ಎನಿಸಿಕೊಳ್ಳುತ್ತದೆ ಎಂದು ಮಂಡ್ಯದ ಸ್ತ್ರೀ ರೋಗ ತಜ್ಞ ಮತ್ತು ಶಸ್ತ್ರಚಿಕಿತ್ಸಕರೂ ಆಗಿರುವ ಡಾ| ಬಿ.ಕೆ.ಸುರೇಶ್‌ ಅವರು ಹೇಳಿದರು.

Advertisement

ಪ್ರಜ್ಞಾ ಕಾವೇರಿ ಮಡಿಕೇರಿ ಮತ್ತು ಅಖೀಲ ಭಾರತೀಯ ಸಾಹಿತ್ಯ ಪರಿಷತ್‌ ಕೊಡಗು ಘಟಕದ ಆಶ್ರಯದಲ್ಲಿ ನಗರದ ಕೊಡವ ಸಮಾಜ ಆವರಣದಲ್ಲಿ ಬುಧವಾರ ಸಂಜೆ ಆಯೋಜಿಸಲಾಗಿದ್ದ ಪತ್ರಕರ್ತ ಮಾಣಿಪಂಡ ಸಂತೋಷ್‌ ತಮ್ಮಯ್ಯ ಅವರ ಸಮರ ಭೈರವಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕೃತಿ ಪರಿಚಯ ಮಾಡಿ ಅವರು ಮಾತನಾಡಿದರು.

ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಫೀಲ್ಡ್‌ ಮಾರ್ಷಲ್‌ ಕೆ.ಎಂ ಕಾರ್ಯಪ್ಪ, ಜನರಲ್‌ ತಿಮ್ಮಯ್ಯ ಫೋರಂನ ಅಧ್ಯಕ್ಷ ನಿವೃತ್ತ ಕರ್ನಲ್‌ ಕಡ್ರತಂಡ ಸುಬ್ಬಯ್ಯ ಅವರು, ಈ ಪುಸ್ತಕ ಎಲ್ಲರಿಗೂ ಪ್ರಿಯವಾಗಬೇಕು. ಎರಡು ವರ್ಷಗಳ ಅಧ್ಯಯನದಲ್ಲಿ ಸೇನಾಧಿಕಾರಿಗಳನ್ನು ಸೈನಿಕರನ್ನು ಸಂದರ್ಶಿಸಿ ಅವರ ಜೀವನ ಕಥೆಯನ್ನು ವಿಮರ್ಶಿಸಿ ಬರೆದ ಕೃತಿ ಇದಾಗಿದ್ದು, ಈ ಪುಸ್ತಕವನ್ನು ನಮ್ಮ ಯುವ ಪೀಳಿಗೆ ಓದಿ ಪ್ರೇರಿತರಾಗಿ ಸೈನ್ಯಕ್ಕೆ ಸೇರುವಂತಾಗಲಿ ಎಂದು ಆಶಿಸಿದರು.

ಮುಖ್ಯ ಅತಿಥಿಯಾಗಿದ್ದ ಅಜಿತ್‌ ಹನಮಕ್ಕನವರ್‌, ನಾವು ಯುದ್ಧವಲ್ಲದ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿದ್ದು, ನಮ್ಮ ಸಂಸ್ಕೃತಿ, ಪರಂಪರೆ, ಹಬ್ಬ, ಹರಿದಿನಗಳನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸುವುದು ಮಾತ್ರವಲ್ಲದೆ, ನಮ್ಮ ಯುವ ಪೀಳಿಗೆಗೆ ನಮ್ಮ ಪರಂಪರೆ, ಪದ್ಧತಿಗಳನ್ನು ಹೇಳಿಕೊಡುವ ಮೂಲಕ ಇದನ್ನು ಎದುರಿಸಬೇಕಾಗಿದೆ ಎಂದು ನುಡಿದರು.

ಅಧ್ಯಕ್ಷತೆ ವಹಿಸಿದ್ದ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೊಂಗಂಡ ಎಸ್‌.ದೇವಯ್ಯ ಮಾತನಾಡಿ, ಈ ಪುಸ್ತಕ ದೇಶದ ಎಲ್ಲಾ ಭಾಷೆಗಳಲ್ಲಿ ಪ್ರಕಟಗೊಳ್ಳಬೇಕು. ಸಂತೋಷ್‌ ತಮ್ಮಯ್ಯ ಅವರಂತಹ ಸಮವಸ್ತ್ರ ಇಲ್ಲದ ಸೈನಿಕರು ಹೆಚ್ಚು ಸಂಖ್ಯೆಯಲ್ಲಿ ಕಂಡು ಬರಬೇಕು. ಸಮರ ಭೈರವಿ ಕೂಡ ದೇಶ ಸೇವೆಯ ಒಂದು ಭಾಗವೇ ಆಗಿದ್ದು ಇದನ್ನು ವಿಶೇಷವಾಗಿ ನಮ್ಮ ಜಿಲ್ಲೆಯಲ್ಲಿ ಹೆಚ್ಚು ಹೆಚ್ಚು ಪ್ರಚುರಪಡಿಸಬೇಕೆಂದು ಕರೆ ನೀಡಿದರು.

Advertisement

ಬಹಳಷ್ಟು ವರ್ಷಗಳಿಂದ ನಮ್ಮ ದೇಶದ ಆಡಳಿತ ವ್ಯವಸ್ಥೆ ಸಾಕಷ್ಟು ಸುಳ್ಳುಗಳನ್ನು ಹೇಳುತ್ತಾ, ನಮ್ಮನ್ನೂ ಕತ್ತಲ್ಲೆಯಲ್ಲಿಟ್ಟಿತ್ತು ಈಗ ಒಂದೊಂದೇ ಸತ್ಯಗಳು ಹೊರ ಬರುತ್ತಿದ್ದು ಈಗಲಾದರೂ ನಾವು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಹೇಳಿದರು.

ಅತಿಥಿ ಗಣ್ಯರು ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಗೌರವ ಸಲ್ಲಿಸಿದರು. ರಮ್ಯಾ ಪ್ರಸಾದ್‌ ಮತ್ತು ರಾಧಿಕಾ ಪ್ರಾರ್ಥಿಸಿ¨ರು. ಲೇಖಕ ಮಾಣಿಪಂಡ ಸಂತೋಷ್‌ ತಮ್ಮಯ್ಯ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಚಿನ್‌ ಅವರು ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next