ಹೊಸದಿಲ್ಲಿ: ಓರ್ವ ವ್ಯಕ್ತಿ ಹಿಂದೂ ಇದ್ದರೆ ಆತ ದೇಶಭಕ್ತನೇ ಆಗಿರುತ್ತಾನೆ. ದೇಶಭಕ್ತಿ ಹಿಂದೂಗಳ ಮೂಲ ಗುಣ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಜೆಕೆ ಬಜಾಜ್ ಮತ್ತು ಎಂ.ಡಿ. ಶ್ರೀನಿವಾಸ್ ಅವರ “ಮೇಕಿಂಗ್ ಆಫ್ ಹಿಂದೂ ಪ್ಯಾಟ್ರಿಯೋಟ್: ಬ್ಯಾಕ್ ಗ್ರೌಂಡ್ ಆಫ್ ಗಾಂಧೀಜಿ’ಸ್ ಹಿಂದ್ ಸ್ವರಾಜ್’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವ್ಯಕ್ತಿಯ ದೇಶಭಕ್ತಿಯು ಆತನ ಧರ್ಮದಿಂದ ಹುಟ್ಟಿಕೊಳ್ಳುತ್ತದೆ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ಆದರೆ ಇಲ್ಲಿ ಧರ್ಮ ಎಂದರೆ ಕೇವಲ ರಿಲೀಜನ್ ಅಲ್ಲ. ಅದಕ್ಕೂ ವಿಶಾಲವಾದ ಅರ್ಥ ಹೊಂದಿದೆ ಎಂದರು.
ಮಹಾತ್ವ ಗಾಂಧಿಯವರನ್ನು ಸಂಘವು ತಮ್ಮವರೆಂದು ಬಿಂಬಿಸಲು ಪ್ರಯತ್ನ ಪಡುತ್ತಿದೆ ಎಂದು ಊಹೆಗಳು ಬೇಡ. ಅಂತಹ ಮಹಾನ್ ವ್ಯಕ್ತಿಯನ್ನು ಹಾಗೆಂದು ಬಿಂಬಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಆರ್ ಎಸ್ಎಸ್ ಮುಖ್ಯಸ್ಥ ಅಭಿಪ್ರಾಯಪಟ್ಟರು.
ಇದನ್ನೂ ಓದಿ:ನೂತನ ಕೃಷಿ ಕಾಯ್ದೆ: ಜನವರಿ 4ರ ಮಾತುಕತೆ ವಿಫಲಗೊಂಡರೆ ಟ್ರ್ಯಾಕ್ಟರ್ ರಾಲಿ: ರೈತ ಸಂಘಟನೆ
ದೇಶಭಕ್ತಿ ಹಿಂದೂಗಳ ಮೂಲ ಗುಣ. ಕೆಲವೊಮ್ಮೆ ನೀವು ಅವರಲ್ಲಿ ದೇಶಭಕ್ತಿಯನ್ನು ಜಾಗೃತಗೊಳಿಸಬೇಕಾದೀತು. ಆದರೆ ಅವರೆಂದೂ ದೇಶ ವಿರೋಧಿಯಾಗಲಾರ. ದೇಶ ಭಕ್ತಿ ಎಂದರೆ ಕೇವಲ ಭೂಮಿಯ ಮೇಲಿನ ಪ್ರೀತಿಯಲ್ಲ, ಅದು ಜನರು, ನದಿಗಳು, ಸಂಸ್ಕೃತಿ, ಸಂಪ್ರದಾಯಗಳ ಮೇಲಿನ ಅಭಿಮಾನ ಎಂದು ಮೋಹನ್ ಭಾಗವತ್ ಹೇಳಿದರು.