Advertisement

ರಾಷ್ಟ್ರಭಕ್ತಿ, ಯುವಶಕ್ತಿಯ ಉದ್ದೀಪನ: ನಿಖೀಲೇಶ್ವರಾನಂದಜಿ

03:45 AM Feb 12, 2017 | Team Udayavani |

ಮಂಗಳೂರು: ಸ್ವಾಮಿ ವಿವೇಕಾನಂದರು ಮತ್ತು ಅಕ್ಕ ನಿವೇದಿತಾ ಅವರ ಸಾಹಿತ್ಯ ದೇಶದ ಸ್ವಾತಂತ್ರÂ ಸಂಗ್ರಾಮಕ್ಕೆ ಪ್ರೇರಕ ಶಕ್ತಿಯಾಗಿ, ರಾಷ್ಟ್ರಭಕ್ತಿ ಮತ್ತು ಯುವಶಕ್ತಿಯನ್ನು ಉದ್ದೀಪನಗೊಳಿಸುವಲ್ಲಿ ಮಹತ್ತರ ಕೊಡುಗೆ ನೀಡಿದೆ. ಅವರ ಸಾಹಿತ್ಯ, ಸಂದೇಶಗಳ ಪ್ರಸರಣ ಕಾರ್ಯ ವ್ಯಾಪಕ ನೆಲೆಯಲ್ಲಿ ನಡೆಯಬೇಕಾಗಿದೆ ಎಂದು ಗುಜರಾತ್‌ ಬರೋಡಾದ ರಾಮಕೃಷ್ಣ ಮಠದ ಸ್ವಾಮಿ ನಿಖೀಲೇಶ್ವರಾನಂದಜಿ ಮಹಾರಾಜ್‌ ಹೇಳಿದರು.

Advertisement

ನಗರದ ಕೇಂದ್ರ ಮೈದಾನದ ಗುಡ್‌ವಿನ್‌ ಮಂಟಪದಲ್ಲಿ ಯುವ ಬ್ರಿಗೇಡ್‌ ಹಾಗೂ ಸೋದರಿ ನಿವೇದಿತಾ ಪ್ರತಿಷ್ಠಾ ನದ ಆಶ್ರಯದಲ್ಲಿ ಸೋದರಿ ನಿವೇದಿತಾ 150ನೇ ಜನ್ಮದಿನಾಚರಣೆಯ ಪ್ರಯುಕ್ತ ಆಯೋಜಿಸಿರುವ 2 ದಿನಗಳ ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನವನ್ನು ಅವರು ಶನಿವಾರ ಉದ್ಘಾಟಿಸಿ ಮಾತನಾಡಿದರು.

ದೇಶ ಬ್ರಿಟಿಷರ ದಾಸ್ಯಕ್ಕೆ ಸಿಲುಕಿ ನಲುಗುತ್ತಿದ್ದ ಕಾಲಘಟ್ಟದಲ್ಲಿ ಸ್ವಾಮಿ ವಿವೇಕಾನಂದರು ಮತ್ತು ಅಕ್ಕ ನಿವೇದಿತಾ ಅವರ ಸಾಹಿತ್ಯ, ಸಂದೇಶಗಳು ಹೋರಾಟ ಗಾರರಿಗೆ ಮತ್ತು ಕ್ರಾಂತಿಕಾರಿಗಳಲ್ಲಿ ಹೊಸ ಸ್ಫೂರ್ತಿ ತುಂಬಿದವು. ಸ್ವಾಮಿ ವಿವೇಕಾನಂದರ, ಸಹೋದರಿ ನಿವೇದಿತಾ ಅವರ ಸಾಹಿತ್ಯಗಳು ಭಾರತದಲ್ಲಿ ಬ್ರಿಟಿಷ್‌ ಪ್ರಭುತ್ವಕ್ಕೆ ಅಪಾಯಕಾರಿಯಾಗಿದ್ದು ಅದನ್ನು ನಿಷೇಧಿಸ ಬೇಕು ಎಂದು ಆಗ ಬ್ರಿಟಿಷ್‌ ಗುಪ್ತಚರ ಇಲಾಖೆ ಸರಕಾರಕ್ಕೆ ಶಿಫಾರಸು ಮಾಡಿತ್ತು ಎಂದರು.

ಕೊಡುಗೆ ಗುರುತಿಸಿಲ್ಲ: ಅವರ ಸಾಹಿತ್ಯ ಜವಾಹರಲಾಲ್‌ ನೆಹರೂ, ಸಿ. ರಾಜಗೋಪಲಾಚಾರಿ, ಅರವಿಂದೊ  ಸೇರಿದಂತೆ ಅನೇಕ ನಾಯಕರಿಗೆ ಪ್ರೇರಣೆ ನೀಡಿತು. ಯಾರಾದರೂ ಭಾರತದ ಬಗ್ಗೆ ಅರಿಯಬೇಕಾದರೆ ಸ್ವಾಮಿ ವಿವೇಕಾನಂದರ ಪುಸ್ತಕ ಓದಿದರೆ ಸಾಕು ಎಂದು ಕವಿ ರವೀಂದ್ರನಾಥ ಠಾಗೋರ್‌ ಹೇಳಿದ್ದರು ಎಂದ ಅವರು, ಭಾರತದ ಸ್ವಾತಂತ್ರÂ ಸಂಗ್ರಾಮಕ್ಕೆ ಸ್ವಾಮಿ ವಿವೇಕಾನಂದರು ಹಾಗೂ ಸೋದರಿ ನಿವೇದಿತಾ ಅವರು ನೀಡಿರುವ ಕೊಡುಗೆಯನ್ನು ಗುರುತಿಸದಿರುವುದು ವಿಷಾದನೀಯವಾಗಿದೆ ಎಂದು ಸ್ವಾಮಿ ನಿಖೀಲೇಶ್ವರಾನಂದಜಿ ತಿಳಿಸಿದರು. 

ಭಾರತ ಉಸಿರು: ಧಾರವಾಡ ರಾಮಕೃಷ್ಣ ಮಠದ ಸ್ವಾಮಿ ವಿಜಯಾನಂದ ಮಹಾರಾಜ್‌ ಅವರು ಮಾತನಾಡಿ, ಭಾರತ ಸ್ವಾಮಿ ವಿವೇಕಾನಂದರ ಉಸಿರಾಗಿತ್ತು. ಸ್ವಾತಂತ್ರÂ ಪೂರ್ವದಲ್ಲಿ ಒಂದು ರೀತಿಯ ಹತಾಶ ಮನೋಭಾವ ಆವರಿಸುತ್ತಿದ್ದ ಸಂದರ್ಭದಲ್ಲಿ ಹೊಸ ಚೈತನ್ಯವನ್ನು ಸ್ವಾಮಿ ವಿವೇಕಾನಂದರು ಹಾಗೂ ಸೋದರಿ ನಿವೇದಿತಾ ತುಂಬಿದರು. ಅವರ ಸಾಹಿತ್ಯಗಳ ಅಧ್ಯಯನ ಮಾಡುವುದರ ಜತೆಗೆ ಇತರರಿಗೆ ತಿಳಿಸುವ ಕಾರ್ಯವೂ ನಡೆಯಬೇಕು ಎಂದರು.

Advertisement

ಗದಗದ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ನಿರ್ಭಯಾನಂದಜಿ ಮಹಾರಾಜ್‌ ಅವರು ಮಾತನಾಡಿ, ಬರೆದದ್ದೆಲ್ಲಾ ಸಾಹಿತ್ಯವಾಗುವುದಿಲ್ಲ. ಸಾಹಿತ್ಯದ ಹೆಸರಿನಲ್ಲಿ ನಡೆಯುವ ಎಲ್ಲವೂ ಸಾಹಿತ್ಯ ಸಮ್ಮೇಳನವಾಗುವುದಿಲ್ಲ. ಮಹಾಮೌಲ್ಯವನ್ನು ಎತ್ತಿಹಿಡಿಯುವ, ಎಲ್ಲವನ್ನೂ ಹೇಳದೆ ವಿಶ್ಲೇಷಣೆಗೆ ಅವಕಾಶವನ್ನು ಉಳಿಸಿ ಕೊಳ್ಳುವ, ಶಾಶ್ವತ ಹಿತವನ್ನು ಪ್ರತಿಪಾದಿಸುವುದು ಸಾಹಿತ್ಯವಾಗುತ್ತದೆ. ಸಾಹಿತ್ಯ ನಮ್ಮ ಚೈತನ್ಯವನ್ನು ಜಾಗೃತಗೊಳಿಸ ಬೇಕು. ಇದು ಸ್ವಾಮಿ ವಿವೇಕಾನಂದರ, ಸೋದರಿ ನಿವೇದಿತಾ ಅವರು ಚಿಂತನೆಗಳು ಎಂದು ತಿಳಿಸಿದರು.

ತಿರುವಣ್ಣಾಮಲೈ ಶ್ರೀ ಶಾರದಾ ಆಶ್ರಮದ ಅಧ್ಯಕ್ಷೆಮಾತಾಜಿ ಕೃಷ್ಣ ಪ್ರಿಯ ಅಂಬಾಜಿ ಅವರು ಸಮ್ಮೇಳನಾ ಧ್ಯಕ್ಷತೆ ವಹಿಸಿದ್ದರು. ಮಂಗಳೂರು ಶ್ರೀ ರಾಮಕೃಷ್ಣ ಮಠದ ಶ್ರೀ ವಿನಾಯಕಾನಂದಜಿ, ಪೊಳಲಿ ತಪೋವನದ ಶ್ರೀ ವಿವೇಕಾನಂದ ಚೈತನ್ಯಾನಂದಜಿ ಉಪಸ್ಥಿತರಿದ್ದರು.

ಸಾಹಿತ್ಯಗಳ ಪಲ್ಲಕ್ಕಿ ಉತ್ಸವ, ಪ್ರದರ್ಶಿನಿ ಉದ್ಘಾಟನೆ
ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ವಿವೇಕಾನಂದ- ನಿವೇದಿತಾ ಅವರ ಪ್ರಕಟಿತ ಸಾಹಿತ್ಯಗಳ ಪಲ್ಲಕ್ಕಿ ಉತ್ಸವ ಜಿಲ್ಲಾಧಿಕಾರಿ ಕಚೇರಿ ಬಳಿಯಿಂದ ಕೇಂದ್ರ ಮೈದಾನದ ವರೆಗೆ ನಡೆಯಿತು. ಮೂಡಬಿದಿರೆ ಆಳ್ವಾಸ್‌ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅವರು ಚಾಲನೆ ನೀಡಿದರು. ಕೇಂದ್ರ ಮೈದಾನದಲ್ಲಿ ಆಯೋಜಿಸಿರುವ ಪಶ್ಚಿಮದಲ್ಲಿ ವಿವೇಕಾನಂದ, ಪೂರ್ವದಲ್ಲಿ ನಿವೇದಿತಾ ಪ್ರದರ್ಶಿನಿಯನ್ನು ತರಂಗ ವ್ಯವಸ್ಥಾಪಕ ಸಂಪಾದಕರಾದ ಡಾ| ಸಂಧ್ಯಾ ಎಸ್‌. ಪೈ ಉದ್ಘಾಟಿಸಿದರು.

ಯುವಬ್ರಿಗೇಡ್‌ ರಾಜ್ಯ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಸ್ವಾಗತಿಸಿ ಪ್ರಸ್ತಾವನೆಗೈದು, ಸ್ವಾಮಿ ವಿವೇಕಾನಂದರು ಹಾಗೂ ಅಕ್ಕ ನಿವೇದಿತಾ ಅವರ ಸಾಹಿತ್ಯವನ್ನು ನಾಡಿನ ಮೂಲೆ ಮೂಲೆಗಳಿಗೆ ತಲುಪಿಸುವ ಉದ್ದೇಶದೊಂದಿಗೆ ಈ ಸಾಹಿತ್ಯ ಸಮ್ಮೇಳನವನ್ನು ಆಯೋ ಜಿಸಲಾಗಿದೆ ಎಂದು ವಿವರಿಸಿದರು.

ಸಾಹಿತ್ಯ ಸಮ್ಮೇಳನ ಸಮಿತಿ ಸಂಚಾಲಕ ಗಿರಿಧರ ಶೆಟ್ಟಿ, ಯುವಬ್ರಿಗೇಡ್‌ ರಾಜ್ಯ ಸಂಚಾಲಕ ನಿತ್ಯಾನಂದ ವಿವೇಕವಂಶಿ ಉಪಸ್ಥಿತರಿದ್ದರು. ಯುವಬ್ರಿಗೇಡ್‌ ವಿಭಾಗ ಸಂಚಾಲಕ ಮಂಜಯ್ಯ ನೆರಂಕಿ ವಂದಿಸಿದರು. ಜಿಲ್ಲಾ ಸಹಸಂಚಾಲಕ ವಿಕ್ರಮ್‌ ನಾಯಕ್‌ ನಿರೂಪಿಸಿದರು.

ಸಮ್ಮೇಳನದ ವೈಶಿಷ್ಟéಗಳು
– ದೇಶದಲ್ಲೇ ಮೊದಲ ಬಾರಿಗೆ ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ
–  ನಗರದ 15 ಶಾಲಾ ಕಾಲೇಜುಗಳಲ್ಲಿ  ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯದ ವಿಚಾರಗೋಷ್ಠಿಗಳು
–  ಸೋದರಿ ನಿವೇದಿತಾ ಪ್ರತಿಷ್ಠಾನದ ಪ್ರಿಯಾ ಅವರ ಕೃತಿ ಗುರು-ಶಿಷ್ಯೆ ಹಾಗೂ ಯುವಬ್ರಿಗೇಡ್‌ ರಾಜ್ಯ ಸಂಚಾಲಕ ನಿತ್ಯಾನಂದ ವಿವೇಕವಂಶಿ ಅವರ ಕೃತಿ “ಸಾಗರದಾಚೆಗೆ ವಿವೇಕಾನಂದ’ ಬಿಡುಗಡೆ
–  ಪಶ್ಚಿಮದಲ್ಲಿ ವಿವೇಕಾನಂದ, ಪೂರ್ವದಲ್ಲಿ ನಿವೇದಿತಾ ಪ್ರದರ್ಶಿನಿ
–  ವಿವೇಕಾನಂದ-ನಿವೇದಿತಾ ಅವರ ಪ್ರಕಟಿತ ಸಾಹಿತ್ಯಗಳ ಪಲ್ಲಕ್ಕಿ ಉತ್ಸವ 
– ಗಮನ ಸೆಳೆಯುತ್ತಿರುವ 21×16 ಅಡಿಯ ವಿವೇಕಾನಂದರ ಕೊಲ್ಯಾಜ್‌

ವಿಶ್ವಗುರು ಸ್ಥಾನದೆಡೆಗೆ ಮೊದಲ ಹೆಜ್ಜೆ
ಏಳಿ, ಎದ್ದೇಳಿ, ಗುರಿಮುಟ್ಟುವ ತನಕ ನಿಲ್ಲದಿರಿ ಎಂಬುದು ಸ್ವಾಮಿ ವಿವೇಕಾನಂದ ಅವರ ಸಂದೇಶ. ನಾವು ರಾಜಕೀಯ ಸ್ವಾತಂತ್ರÂವನ್ನು ಪಡೆದಿದ್ದೇವೆ. ಆದರೆ ಭಾರತ ಆಧ್ಯಾತ್ಮಿಕವಾಗಿ, ಸಾಂಸ್ಕೃತಿಕವಾಗಿ ವಿಶ್ವಗುರುವಾಗಬೇಕು ಎಂಬುದು ಸ್ವಾಮಿ ವಿವೇಕಾನಂದರ ಕನಸು ಆಗಿತ್ತು. ಭಾರತದ ಯೋಗ ಅಂತಾರಾಷ್ಟ್ರೀಯವಾಗಿ ಮನ್ನಣೆ ಪಡೆದು ವಿಶ್ವಯೋಗ ದಿನ ಆಚರಣೆಯಾಗುತ್ತಿದೆ. ಇದು ಭಾರತದ ವಿಶ್ವಗುರು ಸ್ಥಾನದೆಡೆಗೆ ಮೊದಲ ಹೆಜ್ಜೆಯಾಗಿದೆ. ವಿಶ್ರಮ ಪಡೆಯದೆ ವಿವೇಕಾನಂದರ ಸಂದೇಶ ಸಾಕಾರಗೊಳಿಸಬೇಕು ಎಂದು ಸ್ವಾಮಿ ನಿಖೀಲೇಶ್ವರಾನಂದಜಿ ಮಹಾರಾಜ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next