Advertisement

ದೇಶಪ್ರೇಮ ದಿನಾಚರಣೆಗಷ್ಟೇ ಸೀಮಿತವಾಗದಿರಲಿ

05:12 PM Jul 27, 2018 | Team Udayavani |

ಅಕ್ಕಿಆಲೂರು: ವೈರಿಗಳೊಂದಿಗಿನ ಸ್ನೇಹ ಬಾಂಧವ್ಯ ಗಟ್ಟಿಗೊಳ್ಳಬೇಕಾದರೇ ಪರಸ್ಪರರಲ್ಲಿ ಇಚ್ಛಾಶಕ್ತಿ ಪ್ರಮುಖವಾಗಿದ್ದು, ಈ ದಿಸೆಯಲ್ಲಿ ಜಗತ್ತಿನ ಪ್ರತಿ ರಾಷ್ಟ್ರಗಳು ಸ್ನೇಹಮೈತ್ರಿಗೆ ಮುಂದಾಗುವ ಕಾಲ ಬಂದೊದಗಿದೆ ಎಂದು ಗಂಗಪ್ಪ ಧಾರವಾಡ ಗ್ರಾಮೀಣ ಗುರುಕುಲದ ಅಧ್ಯಕ್ಷ ನಾಗರಾಜ ಪಾವಲಿ ಹೇಳಿದರು.

Advertisement

ಪಟ್ಟಣದ ಗಂಗಪ್ಪ ಧಾರವಾಡ ಗ್ರಾಮೀಣ ಗುರುಕುಲದಲ್ಲಿ ಕಾರ್ಗಿಲ್‌ ವಿಜಯ ದಿವಸ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಂತಿ ಸೌಹಾರ್ದತೆಗೆ ಹೆಸರಾದ ನಮ್ಮ ದೇಶದ ಪ್ರತಿಯೊಂದು ಉದ್ಧೇಶವೂ ಪರರಾಷ್ಟ್ರದೊಂದಿಗೆ ಸ್ನೇಹಮೈತ್ರಿ ಸಾಧಿಸುವುದಾಗಿದೆ. ತನ್ನ ಅನೀತಿ ಅನುಕರಣೆಯಿಂದಾಗಿ ಉಗ್ರರ, ನಕ್ಸಲರ ತವರು ಮನೆಯಾಗಿರುವ ಪಾಕಿಸ್ತಾನ ಮುಂದೊಂದು ದಿನ ವಿನಾಶದ ಹಂತಕ್ಕೆ ಬರುವುದು ನಿಶ್ಚಿತ. ಭಾರತದ ಕಿರೀಟಪ್ರಾಯವಾಗಿರುವ ಜಮ್ಮು ಮತ್ತು ಕಾಶ್ಮೀರ ಭಾಗಗಳಲ್ಲಿ ಅಭದ್ರತೆಯ ಕೂಗು ಇಂದಿಗೂ ಕೇಳಿ ಬರುತ್ತಿರುವುದು ರಾಜಕೀಯ ಪಕ್ಷಗಳ ಇಚ್ಛಾಶಕ್ತಿಯ ಕೊರತೆಗೆ ಹಿಡಿದಗನ್ನಡಿಯಾಗಿದೆ. ಭಾರತದಲ್ಲೀಗ ದೇಶಪ್ರೇಮ ಕೇವಲ ದಿನಾಚರಣೆಗೆ ಮಾತ್ರ ಸೀಮಿತವಾಗಿದ್ದು, ರಾಷ್ಟ್ರದ ಪ್ರಗತಿಯ ಜವಾಬ್ದಾರಿ ಹೊತ್ತಿರುವ ಯುವಶಕ್ತಿ ಈಗಲಾದರೂ ಎಚ್ಚೆತ್ತುಕೊಂಡು ತಮ್ಮ ಕರ್ತವ್ಯ ಪೂರ್ಣಗೊಳಿಸುವಲ್ಲಿ ಸನ್ನದ್ಧವಾಗಬೇಕಿದೆ. ಎಂದರು.

ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಾರ್ಗಿಲ್‌ ವಿಜಯೋತ್ಸವದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪ್ರಭಾತ್‌ ಪೇರಿ ನಡೆಸಿದರು. ಮೆರವಣಿಗೆಯುದ್ದಕ್ಕೂ ಜಯಘೋಷ, ಹುತಾತ್ಮ ಯೋಧರಿಗೆ ನುಡಿನಮನಗಳ ಘೋಷವಾಕ್ಯ ಕೂಗುತ್ತ ಸಾಗಿದರು. ಸಂಸ್ಥೆಯ ಗೌರವ ಕಾರ್ಯದರ್ಶಿ ಮಹೇಶ ಸಾಲವಟಗಿ, ಸಂಸ್ಥೆಯ ಪ್ರಾಚಾರ್ಯ ವಿಜಯಕುಮಾರ ಪರಶಿಕ್ಯಾತಿ, ನಿರ್ದೇಶಕ ಮಂಡಳಿಯ ನಾಗರಾಜ ಅಡಿಗ, ಸಂತೋಷ ಅಪ್ಪಾಜಿ, ಅಶೋಕ ಸಣ್ಣವೀರಪ್ಪನವರ, ಎಂ.ಎಂ. ಕಂಬಾಳಿ, ಸಿದ್ಧಲಿಂಗೇಶ ತುಪ್ಪದ ಸೇರಿದಂತೆ ಪಾಲಕ ಪ್ರತಿನಿಧಿಗಳು, ಪ್ರವೀಣ ಕಟಗಿ ಸೇರಿದಂತೆ ಶಾಲೆಯ ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next