Advertisement

“ಬುಲ್ಡೋಜರ್‌ ಪ್ರದರ್ಶನವಾಗಿಬಿಟ್ಟಿದೆ’: ಪಾಟ್ನಾ ಹೈಕೋರ್ಟ್‌

09:22 PM Dec 04, 2022 | Team Udayavani |

ಪಾಟ್ನಾ: ಬಿಹಾರದ ಪಾಟ್ನಾದಲ್ಲಿ ಪೊಲೀಸರು ಬುಲ್ಡೋಜರ್‌ ಬಳಸಿ ಮನೆ ಉರುಳಿಸಿದ ಕುರಿತು ಪಾಟ್ನಾ ಹೈಕೋರ್ಟ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ರೀತಿ ಮನೆ ಉರುಳಿಸುವುದು ಈಗ ಸಾರ್ವಜನಿಕ ಪ್ರದರ್ಶನವಾಗಿಬಿಟ್ಟಿದೆ ಎಂದು ವಾಗ್ಧಾಳಿ ನಡೆಸಿದೆ.

Advertisement

ತನ್ನ ಮನೆಯ ಭಾಗವನ್ನು ಪೊಲೀಸರು ಅಕ್ರಮವಾಗಿ ಕೆಡವಿದ್ದಾರೆ ಎಂದು ಆರೋಪಿಸಿ ಸಜೋಗಾ ದೇವಿ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಸಂದೀಪ್‌ ಕುಮಾರ್‌ ಅವರಿದ್ದ ಏಕಸದಸ್ಯ ಪೀಠ, ಈ ಪ್ರಕರಣದಲ್ಲಿ ಪೊಲೀಸರು ಭೂಮಾಫಿಯಾದೊಂದಿಗೆ ಕೈಜೋಡಿಸಿರುವಂತೆ ಕಾಣಿಸುತ್ತಿದೆ ಎಂದು ಹೇಳಿತು.

“ಇಲ್ಲಿಯೂ ಬುಲ್ಡೋಜರ್‌ ಸದ್ದು ಮಾಡಲು ಆರಂಭಿಸಿದೆ. ಯಾರ ಮನೆಯಾದರೂ ಕೂಡ ಬುಲ್ಡೋಜರ್‌ ಬಳಸಿ ಉರುಳಿಸುವುದು ನಿಮಗೆ(ಪೊಲೀಸರು) ಸಾರ್ವಜನಿಕ ಪ್ರದರ್ಶನವಾಗಿಬಿಟ್ಟಿದೆ,’ ಎಂದು ಆಕ್ಷೇಪ ವ್ಯಕ್ತಪಡಿಸಿತು. ವಿಚಾರಣೆಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next