ಪಾಟ್ನಾ: ಎಲ್ಲ ಸೌಲಭ್ಯವಿದ್ದರೂ ಓದದೆ ಕೂರುವವರಿದ್ದಾರೆ. ಆದರೆ ಸೌಲಭ್ಯಗಳೇ ಇಲ್ಲದಿದ್ದರೂ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡುತ್ತಿರುವ ಬಿಹಾರದ ಈ ಯುವಕನಿಗೆ ಇದೀಗ ಅಮೆರಿಕದ ಪ್ರಸಿದ್ಧ ವಿಶ್ವವಿದ್ಯಾಲದಯಲ್ಲಿ ವಿದ್ಯಾಭ್ಯಾಸಕ್ಕೆ ಅವಕಾಶ ಸಿಕ್ಕಿದೆ.
ವಿದ್ಯಾಭ್ಯಾಸಕ್ಕೆ 2.5 ಕೋಟಿ ರೂ. ವಿದ್ಯಾರ್ಥಿವೇತನವನ್ನೂ ವಿವಿ ಕೊಡಲಿದೆ. ಪಾಟ್ನಾದ ಗೋನ್‌ಪುರ ಗ್ರಾಮದ ದಲಿತ ಕುಟುಂಬದ 17 ವರ್ಷದ ಪ್ರೇಮ್ ಕುಮಾರ್ ಸದ್ಯ ಶೋಶಿತ್ ಸಮಾಧಾನ್ ಕೇಂದ್ರದಲ್ಲಿ 12ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಪ್ರೇಮ್ ಅವರ ತಂದೆ ದಿನಗೂಲಿ ಕೆಲಸ ಮಾಡಿಕೊಂಡು ಮನೆ ಸಾಗಿಸುವುದರ ಜತೆ ಮಗನ ವಿದ್ಯಾಭ್ಯಾಸವನ್ನೂ ಮಾಡಿಸುತ್ತಿದ್ದಾರೆ.
ಪ್ರೇಮ್‌ಗೆ ಇದೀಗ ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿರುವ ಲಫಯೆಟ್ಟೆ ಕಾಲೇಜಿನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಮಾಡಲು ಅವಕಾಶ ಸಿಕ್ಕಿದೆ.
ಕಾಲೇಜಿನ ಟ್ಯೂಷನ್ ಶುಲ್ಕ, ವಸತಿ ಶುಲ್ಕ, ಪ್ರಯಾಣ ಶುಲ್ಕ, ವೈದ್ಯಕೀಯ ಖರ್ಚು ಮತ್ತು ಪುಸ್ತಕಗಳ ಖರ್ಚನ್ನೂ ಕಾಲೇಜು ಭರಿಸಲಿದೆ. ಕಾಲೇಜು ಡೈಯರ್ ಫೆಲ್ಲೋಶಿಪ್ ಎಂದು ವಿಶ್ವಾದ್ಯಂತ ಒಟ್ಟು ಆರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದ್ದು, ಅದರಲ್ಲಿ ಪ್ರೇಮ್ ಕುಮಾರ್ ಕೂಡ ಒಬ್ಬರು.
ಪ್ರೇಮ್ ಅವರ ಕುಟುಂಬದಲ್ಲಿ ಕಾಲೇಜು ಮೆಟ್ಟಿಲು ಹತ್ತಿದವರಲ್ಲಿ ಮೊದಲನೆಯವರು ಪ್ರೇಮ್. ಅವರನ್ನು 14ನೇ ವಯಸ್ಸಿನಲ್ಲೇ ಡೆಕ್ಸೆ$rರಿಟಿ ಗ್ಲೋಬಲ್ ಹೆಸರಿನ ಸಂಸ್ಥೆ ಗುರುತಿಸಿ ವಿದ್ಯಾರ್ಥಿ ಮಾರ್ಗದರ್ಶನ ನೀಡಿದೆ.
ಅದರಿಂದಾಗಿಯೇ ಲಫಯೆಟ್ಟೆ ಕಾಲೇಜು ಕೂಡ ಪ್ರೇಮ್‌ರನ್ನು ಗುರುತಿಸಿ ಈ ಅವಕಾಶ ಕೊಟ್ಟಿದೆ.