Advertisement
ಪಟ್ಲ ಬೆಟ್ಟ ಕೊಡಗಿನ ಸೋಮವಾರಪೇಟೆತಾಲೂಕಿಗೆ ಅತಿ ಸಮೀಪದಲ್ಲಿದ್ದು, ಗುಡ್ಡ, ದಟ್ಟ ಅರಣ್ಯ, ಜಲಪಾತ, ಸದಾ ಮಂಜಿನಿಂದ ಕೂಡಿರುವ ಪ್ರದೇಶವಾಗಿದೆ. ಇದು ಪ್ರವಾಸಿಗರ ಕಣ್ಮನ ತಣಿಸುತ್ತದೆ. ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಜಲಪಾತ, ತಾಲೂಕಿನ ಬಿಸಿಲೆ, ಮುಂತಾದ ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರು, 9 ಕಿ.ಮೀ. ದೂರದ ಪಟ್ಲ ಬೆಟ್ಟಕ್ಕೆ ಭೇಟಿ ನೀಡುವುದು ಸಾಮಾನ್ಯ. ಸಮುದ್ರ ಮಟ್ಟದಿಂದ 3500 ಅಡಿ ಎತ್ತರದಲ್ಲಿರುವಈ ಬೆಟ್ಟದ ಮೇಲಿಂದ ದಕ್ಷಿಣ ಕನ್ನಡ, ಹಾಸನ, ಕೊಡಗುಜಿಲ್ಲೆಯ ಗಿರಿ ಶಿಖರಹಾಗೂಜಲಪಾತಗಳು ಕಾಣಿಸುತ್ತಿವೆ.
Related Articles
Advertisement
ಪತಿ ಮುಂದೆಯೇ ಲೈಂಗಿಕ ಕಿರುಕುಳ : ಕೆಲವೊಮ್ಮೆ ಗಂಡ ಹೆಂಡತಿ ಇಬ್ಬರೆ ಇಲ್ಲಿನ ಸೌಂದರ್ಯ ವೀಕ್ಷಿಸಲು ಬಂದರೆ, ಪತಿಯ ಮುಂದೆಯೇ ಕೆಲ ಕಿಡಿಗೇಡಿಗಳು ಲೈಂಗಿಕ ಕಿರುಕುಳ ನೀಡಿದ ಉದಾಹರಣೆಯಿದೆ. ಕೆಲವು ಸಂದರ್ಭಗಳಲ್ಲಿ ಪ್ರವಾಸಿಗರ ಮೇಲೆ ಹಲ್ಲೆ ಮಾಡಿರುವುದು ಉಂಟು. ಮರ್ಯಾದೆಗೆ ಅಂಜಿ ಹಲವರು ಈ ಕುರಿತು ದೂರು ನೀಡಲು ಮುಂದಾಗುವುದಿಲ್ಲ. ಇಲ್ಲಿ ದೌರ್ಜನ್ಯಕ್ಕೆ ಒಳಗಾಗುವರು ಬಹುತೇಕರು ಹೊರ ಜಿಲ್ಲೆಗಳಿಂದ ಬರುವವರು ಆಗಿರುವುದರಿಂದ ಯಾರೂ ಪೊಲೀಸರಿಗೆ ದೂರು ನೀಡಲು ಹೋಗುವುದಿಲ್ಲ.ಕಳೆದಕೆಲವು ತಿಂಗಳ ಹಿಂದೆ ತಾಲೂಕಿನಕೆಲವು ಮಾಧ್ಯಮದವರು ಪಟ್ಲ ಬೆಟ್ಟದ ಕುರಿತು ವರದಿ ಮಾಡಲು ಹೋದಾಗ ಎರಡು ಕಾರುಗಳ 8 ಟಯರ್ ಗಳನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದರು. ಇಲ್ಲಿಗೆ ಬರುವ ಪ್ರವಾಸಿಗರ ವಿರುದ್ಧ ಇಲ್ಲಸಲ್ಲದ ನೆಪ ಹೇಳಿಕೊಂಡು ನೈತಿಕ ಪೊಲೀಸ್ ಗಿರಿ ತೋರುತ್ತಿರುವವರ ವಿರುದ್ಧ ತಾಲೂಕು ಆಡಳಿತ, ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಗ್ರಾಪಂ ಆಡಳಿತ ಉಗ್ರಕ್ರಮಕೈಗೊಳ್ಳಬೇಕಾಗಿದೆ.
ಪಟ್ಲ ರಮಣೀಯ ಸ್ಥಳ. ಇಲ್ಲಿಗೆ ಬರುವ ಪ್ರವಾಸಿಗರ ಮೇಲೆಕೆಲ ಕಿಡಿಗೇಡಿಗಳು ಹಲ್ಲೇ ಮಾಡುವುದು, ವಾಹನಗಳ ಟಯರ್ ಪಂಕ್ಚರ್ ಮಾಡುವುದು, ಹೀಗೆ ವಿಕೃತ ಆನಂದ ಪಡೆಯುತ್ತಿದ್ದಾರೆ. ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಿ, ಪ್ರವಾಸಿಗರಲ್ಲಿನ ಆತಂಕ ನಿವಾರಿಸಬೇಕು. – ಜೈಭೀಮ್ ಮಂಜು, ಜಿಲ್ಲಾಧ್ಯಕ್ಷ, ಮಾನವ ಬಂಧುತ್ವ ವೇದಿಕೆ.
ಬೆಟ್ಟ ನೋಡಲು ಬರುವ ಕೆಲವರು ಮದ್ಯಪಾನ ಮಾಡಿ ಬಾಟಲ್‌ಗಳನ್ನು ಎಲ್ಲೆಂದರಲ್ಲಿ ಎಸೆಯುವುದು ಬೇಸರದ ಸಂಗತಿ. ಜೊತೆಗೆ ಸುತ್ತಮುತ್ತಲಿನ ಗ್ರಾಮಸ್ಥರು ಪಟ್ಲ ಬೆಟ್ಟಕ್ಕೆ ಹೋದಾಗ ಕೆಲವು ಕಿಡಿಗೇಡಿಗಳು ದಬ್ಟಾಳಿಕೆ ಮಾಡುವುದು ಸರಿಯಲ್ಲ. ಸ್ಥಳೀಯ ಗ್ರಾಪಂಆಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು. -ಜಗದೀಶ್,ಹೆತ್ತೂರು ಗ್ರಾಮಸ್ಥ
ಪಟ್ಲ ಬೆಟ್ಟ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಕೆಲವು ಕಿಡಿಗೇಡಿಗಳು ವಿನಾಕಾರಣ ಕಿರುಕುಳ ನೀಡುತ್ತಿರುವ ಬಗ್ಗೆ ದೂರುಕೇಳಿ ಬಂದಿದೆ. ಈ ಕುರಿತು ಪೊಲೀಸ್ ಇಲಾಖೆಗೆ ತಿಳಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು. – ಮಂಜುನಾಥ್, ತಹಶೀಲ್ದಾರ್.
– ಸುಧೀರ್ ಎಸ್.ಎಲ್.