Advertisement

ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ ದೆಹಲಿ ಘಟಕದ ವಿಚಾರ ಸಂಕಿರಣ

03:51 PM Jul 30, 2017 | Team Udayavani |

ಮುಂಬಯಿ: ಯಕ್ಷಧ್ರುವ ಪಟ್ಲ ಫೌಂಡೇಶನ್‌ಟ್ರಸ್ಟ್‌ ಮಂಗಳೂರು ಇದರ ದೆಹಲಿ ಘಟಕದ ವತಿಯಿಂದ ಯûಾಭಿಮಾನಿಗಳೊಂದಿಗೆ ವಿಶೇಷ ಸಭೆ ದೆಹಲಿ ಕರ್ನಾಟಕ ಸಂಘದ ವಿಚಾರ ಸಂಕಿರಣ ಭವನದಲ್ಲಿ ಇತ್ತೀಚೆಗೆ ನಡೆಯಿತು.

Advertisement

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಯಕ್ಷ ಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌  ಮಂಗಳೂರು ಇದರ ದೆಹಲಿ ಘಟಕದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಅವರು, ಯಕ್ಷಗಾನವನ್ನು ಮೊತ್ತ ಮೊದಲಿಗೆ ವಿದೇಶಕ್ಕೆ ಕೊಂಡು ಹೋದವರು ಡಾ| ಕೆ. ಶಿವರಾಮ ಕಾರಂತರು. ಅಂದಿನ ಆ ಪ್ರದರ್ಶನಗಳಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿತ್ತು. ಆದರೆ ಪಾರಂಪರಿಕ ಯಕ್ಷ ಗಾನವನ್ನು 

ವಿದೇಶದಲ್ಲಿ ಪ್ರದರ್ಶಿಸಿದವರು ಸರವು ಕೃಷ್ಣ ಭಟ್‌. ಅವರು ತನ್ನ ನಿರ್ದಿಷ್ಟ ವ್ಯಾಪ್ತಿಯಿಂದ ಹೊರ ಬಂದಾಗ ಪ್ರದರ್ಶನಗಳಲ್ಲಿ ಒಂದಿಷ್ಟು ಬದಲಾವಣೆಗಳು ಸಹಜವಾಗಿ ಆಗಿವೆ. ಅದೇ ರೀತಿಯಲ್ಲಿ ಇಂದು ಪರಂಪರೆಯ ಚೌಕಟ್ಟಿನೊಳಗೆ ಯಕ್ಷಗಾನಕ್ಕೊಂದು ಹೊಸ ಆಯಾಮ ನೀಡಿ ಯಕ್ಷಗಾನವನ್ನು ಮಗದೊಮ್ಮೆ ಜನಾಕರ್ಷಣೆಯತ್ತ ಕೊಂಡೊಯ್ಯುತ್ತಿರುವವರಲ್ಲಿ  ಸತೀಶ್‌ ಪಟ್ಲ ಪ್ರಮುಖರು. ಜತೆಗೆ ತಮ್ಮದೇ ಆದ ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ ಮಂಗಳೂರು ಸಂಸ್ಥೆಯನ್ನು ಸ್ಥಾಪಿಸಿ ಅದರ ಮುಖಾಂತರ ಅಶಕ್ತ ಕಲಾವಿದರಿಗೆ ನೆರವಾಗುತ್ತಿರುವ ಇವರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಯಕ್ಷಗಾನದ ಕುರಿತಾದ ನಾವು ಕಂಡ ವಿಶೇಷ ಘಟನೆಗಳು ಮತ್ತು ಅನುಭವಗಳನ್ನು ಡಾ| ಅಹಲ್ಯಾ ಚಿಂತಾಮಣಿ, ಡಾ| ಅವನೀಂದ್ರನಾಥ ರಾವ್‌, ಅನಂತ ಭಟ್‌,  ಕೆ. ಎಸ್‌. ಜಿ. ಶೆಟ್ಟಿ, ಅರವಿಂದ ಬಿಜೈ ಹಾಗೂ ರಾಘವೇಂದ್ರ ನಾಯ್ಕ ಅವರು ಬಹಳ ಸೊಗಸಾಗಿ ಹಂಚಿಕೊಂಡರು. 

ಈ ಕಾರ್ಯಕ್ರಮದಲ್ಲಿ ದೆಹಲಿಯಲ್ಲಿರುವ ಯûಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಮಾತ್ರವಲ್ಲದೆ, ಮುಂದಿನ ದಿನಗಳಲ್ಲಿ ದೆಹಲಿಯಲ್ಲಿ ಯಕ್ಷಗಾನಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ನಡೆಸುವ ಕುರಿತಾಗಿ ತಮ್ಮ ಅಭಿಪ್ರಾಯ, ಸಲಹೆಗಳನ್ನು ನೀಡಿದರು.
ಭಾರತ ಸರಕಾರದ ಕೃಷಿ ಸಚಿವಾಲಯದ ಉಪ ನಿರ್ದೇಶಕರಾದ  ಪ್ರಸನ್ನ ಸಾಲ್ಯಾನ್‌ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು. 

Advertisement

ದೆಹಲಿ ಕರ್ನಾಟಕ ಸಂಘದ ಪ್ರಧಾನ ಕಾರ್ಯ ದರ್ಶಿ ಸಿ. ಎಂ. ನಾಗರಾಜ ಅವರು ಉಪಸ್ಥಿತರಿ ದ್ದರು. ಸಂಚಾಲಕರಾದ ಕಾರ್ತಿಕ್‌ ರೈ  ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
 

Advertisement

Udayavani is now on Telegram. Click here to join our channel and stay updated with the latest news.

Next