ಕೊಡಿಯಾಲಬೈಲ್: ಅಮೇರಿಕದಲ್ಲಿ ಪಟ್ಲ ಫೌಂಡೇಶನ್ ಸ್ಥಾಪನೆ ಯಾಗುವ ಸಂಭ್ರಮದಲ್ಲಿ ನಾವಿ ರುವಾಗ ಶೀಘ್ರದಲ್ಲಿಯೇ ಆಸ್ಟ್ರೇಲಿಯದ ಸಿಡ್ನಿ, ಯುನೈಟೆಡ್ ಕಿಂಗ್‌ಡಮ್‌ನಲ್ಲಿಯೂ ಪಟ್ಲ ಫೌಂಡೇಶನ್ ಘಟಕ ಕಾರ್ಯಾರಂಭಿಸಲಿದೆ ಎಂದು ಸತೀಶ ಶೆಟ್ಟಿ ಹೇಳಿದರು.
ಪುತ್ತುಮುಡಿ ಸೌಧದಲ್ಲಿ ಆಯೋಜಿಸಿದ ಅಮೆರಿಕದಲ್ಲಿ ಜೂನ್‌ನಲ್ಲಿ ನಡೆಯುವ ಪಟ್ಲ ಘಟಕ ಉದ್ಘಾಟನಸಮಾರಂಭದ ಸಮಾಲೋಚನೆ, ಜೂ. 2ರಂದು ಅಡ್ಯಾರ್‌ಗಾರ್ಡನ್‌ನಲ್ಲಿ ನಡೆಯುವ ಪಟ್ಲ ಸಂಭ್ರಮದ ಕಾರ್ಯ ಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಬಡ ಕಲಾವಿದರಿಗಾಗಿ 100 ಮನೆ ನಿರ್ಮಿಸುವ ಈ ದೊಡ್ಡ ಯೋಜನೆಗೆ ಜಾಗ ಬೇಕಾಗಿತ್ತು. ಪಟ್ಲ ಫೌಂಡೇಶನ್‌ಗಾಗಿ ಕೆಲವರು ಉಚಿತವಾಗಿ ನೀಡುವುದಾಗಿ ಭರವಸೆ ನೀಡಿದರು. ಕಾರಣಾಂತರ ಗಳಿಂದ ಸಾಧ್ಯವಾಗಲಿಲ್ಲ. ಇದೀಗ ಫೌಂಡೇಶನ್ ವತಿಯಿಂದ ಕಿನ್ನಿಗೋಳಿ ಬಳಿ 11 ಎಕ್ರೆ ಜಾಗ ಪಡೆದು ಒಪ್ಪಂದಕ್ಕೆ ಸಹಿ ಮಾಡಿದೆ ಎಂದರು.
ಸಾವಿರಾರು ಮಂದಿ ಪಟ್ಲ ಫೌಂಡೇಶನ್‌ಗಾಗಿ, ಕಲಾವಿರದ ಒಳಿತಿಗಾಗಿ ತಮ್ಮ ಅಮೂಲ್ಯ ಸಮಯವನ್ನು ವಿನಿಯೋಗಿ ಸುತ್ತಿದ್ದಾರೆ. ಇದರೊಂದಿಗೆ ಘಟಕಗಳು ಕಲಾವಿದರ ಒಳಿತಿಗಾಗಿ ಇನ್ನಷ್ಟು ಕಾರ್ಯ ಕ್ರಮ ರೂಪಿಸಬೇಕು. ಜೂ. 2ರಂದು ನಡೆಯುವ ಪಟ್ಲ ಸಂಭ್ರಮದಲ್ಲಿ ಘಟಕದ ಸದಸ್ಯರು ಸ್ವಯಂ ಸೇವಕರಂತೆ ಭಾಗವಹಿಸಬೇಕು. 7.30ಕ್ಕೆ ಚೌಕಿ ಪೂಜ ನಡೆಯಲಿವೆ ಎಂದರು.
ಪ್ರ. ಕಾಯದರ್ಶಿ ಪುರುಷೋತ್ತಮ ಭಂಡಾರಿ, ಖಜಾಂಚಿ ಸುಧೇಶ್ ರೈ, ರವಿ ಶೆಟ್ಟಿ ಅಶೋಕನಗರ, ನಿತ್ಯಾನಂದ ಶೆಟ್ಟಿ, ಸುಧಾಕರ ಪೂಂಜಾ, ಜಯಶೀಲ ಅಡ್ಯಂತಾಯ, ಮಂಗಳೂರು ನಗರ ಘಟಕ ಅಧ್ಯಕ್ಷ ಪ್ರದೀಪ್ ಆಳ್ವ, ಕೃಷ್ಣ ಶೆಟ್ಟಿ ತಾರೆಮಾರ್, ಆರತಿ ಆಳ್ವ ಉಪಸ್ಥಿತರಿದ್ದರು.