Advertisement

ಯಾತ್ರಿನಿವಾಸ ಕಾಮಗಾರಿಗೆ ಪಾಟೀಲ ಚಾಲನೆ

03:31 PM Mar 02, 2018 | |

ವಿಜಯಪುರ: ಬಬಲೇಶ್ವರ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಿಸುತ್ತಿರುವ ಯಾತ್ರಿ ನಿವಾಸಗಳಿಗೆ ಸಚಿವ ಎಂ.ಬಿ. ಪಾಟೀಲ ಭೂಮಿಪೂಜೆ ನೆರವೇರಿಸಿದರು.

Advertisement

ಬಬಲೇಶ್ವರ ಕ್ಷೇತ್ರ ವ್ಯಾಪ್ತಿಯ ಅರಕೇರಿಯಲ್ಲಿ ಮಧುಗೊಂಡೆಶ್ವರ ಆಶ್ರಮದ ಹತ್ತಿರ, ಲೋಹಗಾಂವದಲ್ಲಿ ವಿರಕ್ತಾನಂದ ಮಠದ ಹತ್ತಿರ, ಬಾಬಾನಗರದ ದರ್ಗಾದ ಹತ್ತಿರ, ತಿಕೋಟಾದಲ್ಲಿ ಹನುಮಾನ ದೇವಸ್ಥಾನದ ಹತ್ತಿರ, ತಾಜಪುರ ಎಚ್‌ ಹಾಜಿಮಸ್ತಾನ, ಮೈಬೂಬ ಸುಭಾನಿ ದರ್ಗಾದ ಹತ್ತಿರ, ನಿಡೋಣಿ ಮುಸ್ಲಿಂ ಸಮಾಜದ ದರ್ಗಾದ ಹತ್ತಿರ, ಬಬಲೇಶ್ವರ ಮುಸ್ಲಿಂ ಸಮಾಜ ಈದ್ಗಾ ಹತ್ತಿರ, ಸಂಗಾಪುರ ಎಸ್‌.ಎಚ್‌ ಸಿದ್ದಲಿಂಗೇಶ್ವರ ಕಮರಿಮಠದ ಹತ್ತಿರ, ಕಂಬಾಗಿ ಕಂಬಾಗೇಶ್ವರ ಗುಡಿ ಹತ್ತಿರ, ಚಿಕ್ಕಗಲಗಲಿ ರಾಮಲಿಂಗೇಶ್ವರ ಗುಡಿ ಹತ್ತಿರ, ಕಾಖಂಡಕಿ ಮಸೀದಿ ಹತ್ತಿರ, ಕಾರಜೋಳ ಬೀರಲಿಂಗೇಶ್ವರ ದೇವಸ್ಥಾನದ ಹತ್ತಿರ ತಲಾ 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಯಾತ್ರಿ ನಿವಾಸಗಳಿಗೆ ಭೂಮಿಪೂಜೆ ನೆರವೇರಿಸಲಾಯಿತು.

ಈ ವೇಳೆ ಮಾತನಾಡಿದ ಸಚಿವ ಡಾ| ಎಂ.ಬಿ. ಪಾಟೀಲ, ಕನಮಡಿ ಕೆಳಗಿನಮಠದ ಹತ್ತಿರ, ಕಣಬೂರ ರಾಚೋಟೇಶ್ವರ ದೇವಸ್ಥಾನದ ಹತ್ತಿರ ಹಾಗೂ ಬೆಳ್ಳುಬ್ಬಿಯ ಮಳೆ ಮಲ್ಲೇಶ್ವರ ದೇವಸ್ಥಾನದ ಹತ್ತಿರ ಕೂಡ ಪ್ರವಾಸೋದ್ಯಮ ಇಲಾಖೆಯಿಂದ ತಲಾ 25 ಲಕ್ಷ ರೂ. ವೆಚ್ಚದ ಯಾತ್ರಿ ನಿವಾಸಗಳು ಮಂಜೂರಾತಿ ಪಡೆದಿವೆ ಎಂದರು.

ಬಬಲೇಶ್ವರ ವಿಧಾನಸಭಾ ಕ್ಷೇತ್ರದ 15 ವಿವಿಧ ಶೃದ್ಧಾ ಕೇಂದ್ರಗಳಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಯಾತ್ರಿ ನಿವಾಸಗಳನ್ನು ನಿರ್ಮಿಸುತ್ತಿದ್ದು, ಸಮಿತಿಯವರು ಸೂಕ್ತ ನಿರ್ವಹಣೆ ಮೂಲಕ ಯಾತ್ರಿ ನಿವಾಸಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next