Advertisement

ಕನ್ನಡ ಸಾಹಿತ್ಯ ಪರಿಷತ್ತು ಜತ್ತ ತಾ.ನೂತನ ಅಧ್ಯಕ್ಷರಾಗಿ ಪಾಟೀಲ್‌ ನೇಮಕ

04:21 PM Jun 20, 2018 | |

ಸೊಲ್ಲಾಪುರ: ಕನ್ನಡ ಸಾಹಿತ್ಯ  ಪರಿಷತ್ತು ಜತ್ತ  ತಾಲೂಕು ನೂತನ ಅಧ್ಯಕ್ಷ ಆರ್‌. ಕೆ. ಪಾಟೀಲ್‌ ಅವರನ್ನು ನೇಮಕ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಬಸವರಾಜ ಮಸೂತಿ ಹೇಳಿದರು.

Advertisement

ಜತ್ತ ತಾಲೂಕಿನ ಸಂಖ ಗ್ರಾಮದ ಶ್ರೀ ಗುರುಬಸವ ವಿದ್ಯಾ ಮಂದಿರದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತು ಜತ್ತ ತಾಲೂಕು ಘಟಕದ ಪದಾಧಿಕಾರಿಗಳ ನೇಮಕ ಸಭೆಯಲ್ಲಿ ಅವರನ್ನು ಒಮ್ಮತದಿಂದ ನೇಮಕ ಮಾಡಲಾಯಿತು. ಅಲ್ಲದೆ ಅಧ್ಯಕ್ಷ ಸೇರಿದಂತೆ ವಿವಿಧ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ಗೌರವ ಕಾರ್ಯದರ್ಶಿಯಾಗಿ ಎಂ. ಐ. ಜಿಡ್ಡಿ, ಗೌರವ ಕಾರ್ಯ ದರ್ಶಿ ಗುರುಬಸು ವಾಗೋಲಿ, ಕೋಶಾಧಿಕಾರಿಯಾಗಿ ವಿಜಯ ಕುಮಾರ ಬಿರಾದಾರ, ಸಂಘ-ಸಂಸ್ಥೆ ಪ್ರತಿನಿಧಿ ಚಂದ್ರಶೇಖರ ಕಾರಕಲ, ಮಹಿಳಾ ಪ್ರತಿನಿಧಿಯಾಗಿ ಸುಜಾತಾ ಬಿರಾದಾರ, ಪ್ರಚಾರ ಪ್ರಮುಖರಾಗಿ ಅರವಿಂದ ಕರಡಿ, ಪ್ರತಿನಿಧಿಯಾಗಿ ಕುಮಾರ ವ್ಹಿಟೇಕರ  ಇವರನ್ನು ನೇಮಕ ಮಾಡಿ ಗೌರವಿಸಲಾಯಿತು.

ಕಸಾಪ ರಾಜ್ಯಾಧ್ಯಕ್ಷ ಡಾ| ಮನು ಬಳಿಗಾರ ಅವರ ಆದೇಶದ ಮೇರೆಗೆ ಜತ್ತ ತಾಲೂಕು ಘಟಕದ ಅಧ್ಯಕ್ಷರನ್ನು ನೇಮಿಸಲಾಗಿದ್ದು, ಜುಲೈಯಲ್ಲಿ  ಜತ್ತ ಮತ್ತು ಅಕ್ಕಲ್‌ಕೋಟ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು  ಹಮ್ಮಿಕೊಳ್ಳಲಾಗುವುದು. 

ಮಹಾರಾಷ್ಟ್ರ ಘಟಕದ ಅಡಿಯಲ್ಲಿ 100 ಜನ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರಿದ್ದರೆ ಅಂತಹ ತಾಲೂಕು ಘಟಕ ರಚನೆ ಮಾಡುವ ಅವಕಾಶವಿದೆ. ಮೊದಲನೆಯ ಹಂತವಾಗಿ ಮುಂಬಯಿ ಮಹಾ ನಗರ ಘಟಕ, ಅಕ್ಕಲ್‌ಕೋಟೆ ಮತ್ತು ಜತ್ತ ತಾಲೂಕು ಘಟಕ ರಚನೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ದಕ್ಷಿಣ ಸೊಲ್ಲಾಪುರ, ಉದಯಗಿರಿ ಸೇರಿದಂತೆ ಹಲವು ತಾಲೂಕು ಘಟಕಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗುವುದು ಎಂದು ಕಸಾಪ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಬಸವರಾಜ ಮಸೂತಿ ಹೇಳಿದರು.

Advertisement

ಈ ವೇಳೆ ಕಸಾಪ ಅಕ್ಕಲ್‌ಕೋಟೆ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಮಡ್ಡೆ, ಆದರ್ಶ ಕನ್ನಡ ಬಳಗ ಅಧ್ಯಕ್ಷ ಮಲಿಕಜಾನ್‌ ಶೇಖ್‌ ಪತ್ರಕರ್ತ ಸೋಮಶೇಖರ ಜಮಶೆಟ್ಟಿ ಹಾಗೂ ರಾಕೇಶ್‌  ಘಾಳಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಪ್ರಕಾಶ ವಿಪ್ಪರಗಿ, ಆರ್‌. ಬಿ. ಪಾಟೀಲ್‌, ಮಧು ಪರೋಳೆಕರ, ಕಿರಣ ಪಾಟೀಲ್‌, ಅಜಯ ಪಾಟೀಲ್‌, ಅಪ್ಪಾಸಾಹೇಬ ಪುಟಾಣೆ, ಕವಿತಾ ಪಾಟೀಲ್‌, ಆರ್‌. ಜಿ. ಬಿರಾದಾರ, ಸೋಮನಾಥ ಪೂಜಾರಿ, ಶಂಕರ ಬಾಗೇಳಿ, ಸತೀಶ ಬಿರಾದಾರ, ಕರಬಸಯ್ಯ ಸ್ವಾಮಿ, ಅಮಗೊಂಡ ಜಿಗಜಿಗಣಿಗಿ, ಸಂದೀಪ ಮಾನೆ, ಕುಮಾರ ಬಿರಾದಾರ ಹಾಗೂ ಬಸವರಾಜ ಆಲಮದ, ಪ್ರಕಾಶ ಗೊಬ್ಬುರ, ಗಿರಮಲ್ಲಪ್ಪ ಬರಮಾ, ಪ್ರಕಾಶ ಪ್ರಧಾನ, ಸುನೀಲ್‌ ಸವಳಿ, ಓಂಕಾರ ಬುರೂಡ, ಸಿದ್ಧಾರಾಮ ಗೊಬ್ಬುರ, ರಾಜಶ್ರೀ ಮಸೂತಿ, ಮಲ್ಲಿನಾಥ ವಚ್ಚೆ ಸೇರಿದಂತೆ  ಮೊದಲಾದವರು ಪಾಲ್ಗೊಂಡಿದ್ದರು. ಡಾ| ಕೆ. ಕೆ. ಪತ್ತಾರ ಸ್ವಾಗತಿಸಿದರು. ಪ್ರಶಾಂತ ವಾಗೋಲಿ ನಿರೂಪಿಸಿದರು. ಶಿವಾನಂದ ಧನ್ಯಾಳ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next