ಅಫಜಲಪುರ: ಅವಕಾಶಗಳಿಲ್ಲ ಎಂದು ಕೊರಗುವ ಬದಲು ಸಿಗುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಸಾಧನೆ ಮಾಡಿ ಎಂದು ಶಾಸಕ ಎಂ.ವೈ. ಪಾಟೀಲ ಹೇಳಿದರು.
ತಾಲೂಕಿನ ಕರ್ಜಗಿ ಗ್ರಾಮದ ಸುಭಾಶ್ಚಂದ್ರ ಬೋಸ್ ಸೇನಾ ತರಬೇತಿ ಕೇಂದ್ರದಲ್ಲಿ ಮೂರು ತಿಂಗಳ ಕಾಲ ಯುವಕರಿಗೆ ಉಚಿತ ಸೇನಾ ತರಬೇತಿ ನೀಡಿದ್ದರ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಸೇನೆ ಜಗತ್ತಿನ ಅತೀ ಬಲಿಷ್ಠವಾಗಿದೆ. ಸೇನೆಯ ಭಾಗವಾಗುವುದಕ್ಕೆ ಯುವಕರು ಆಸಕ್ತಿ ತೋರಬೇಕು. ದೇಶದ ಭವಿಷ್ಯ ಇರುವುದು ಯುವಕರ ಮೇಲೆ. ಹೀಗಾಗಿ ಯುವಕರು ಯಾವಾಗಲೂ ಧನಾತ್ಮಕವಾಗಿ ಚಿಂತಿಸುತ್ತಾ ದೇಶಕ್ಕಾಗಿ ಸೇವೆ ಸಲ್ಲಿಸುವುದರತ್ತ ಚಿತ್ತ ಹರಿಸಬೇಕು ಎಂದು ಸಲಹೆ ನೀಡಿದರು.
ಗ್ರಾಮೀಣ ಭಾಗದಲ್ಲಿ ತರಬೇತಿ ಕೇಂದ್ರ ಹುಟ್ಟು ಹಾಕಿ ಉಚಿತವಾಗಿ ಸೇನಾ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಸೇನಾ ತರಬೇತಿ ಕೇಂದ್ರಕ್ಕೆ ಬೇಕಾದ ಸಹಾಯ ನೀಡಲು ಸಿದ್ಧನಿದ್ದೇನೆ ಎಂದರು.
ತರಬೇತಿ ಸಂಸ್ಥೆ ಅಧ್ಯಕ್ಷ ಭಗವಂತರಾಯ ಬಳಗಾನೂರ ಮಾತನಾಡಿ, ಮುಂದಿನ ದಿನಗಳಲ್ಲಿ ಈ ಭಾಗದ ಯುವಕರನ್ನು ಹೆಚ್ಚು ಸೇನೆಗೆ ಸೇರುವಂತೆ ಮಾಡುವುದೇ ನಮ್ಮ ಗುರಿಯಾಗಿದೆ ಎಂದರು. ತಾ.ಪಂ ಮಾಜಿ ಉಪಾಧ್ಯಕ್ಷ ಭೀಮಾ ಶಂಖರ ಹೊನ್ನಕೇರಿ, ಜ್ಞಾನೇಶ್ವರಿ ಪಾಟೀಲ, ಮಾಂತೇಶ ಉಜನಿ, ರಾಜು ಉಕ್ಕಲಿ, ಶಿವಾಜಿ ಮೇಟಗಾರ, ಪ್ರಕಾಶ ಜಮಾದಾರ, ಸಿದ್ಧಾರ್ಥ ಬಸರಿಗಿಡ, ವಿಠೊಬಾ ಪೂಜಾರಿ, ಅಂಬು ರಾಠೊಡ, ಪೀರಪ್ಪ ನಾಯೊRàಡಿ ಇದ್ದರು.