ಚಿಕ್ಕಮಗಳೂರು: ಕೋವಿಡ್ ಎರಡನೇ ಅಲೆ ಆರಂಭವಾದ ಬಳಿಕ ಹಲವು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಮಸ್ಯೆ, ವೈದ್ಯರ ಸಮಸ್ಯೆ, ಚಿಕಿತ್ಸೆಯ ಸಮಸ್ಯೆ ಮುಂತಾದವುಗಳ ಬಗ್ಗೆ ವರದಿಗಳನ್ನುಓದಿದ್ದೇವೆ. ಆದರೆ ಚಿಕ್ಕಮಗಳೂರಿನ ಮೂಡಿಗೆರೆ ಆಸ್ಪತ್ರೆಯಲ್ಲಿ ಈ ಸಮಸ್ಯೆಗಳಿಗಿಂತ ಸೋಂಕಿತರಿಗೆ ಊಟ- ತಿಂಡಿಯದ್ದೇ ದೊಡ್ಡ ತಲೆನೋವಾಗಿದೆ.
ಮೂಡಿಗೆರೆ ಸರ್ಕಾರಿ ಆಸ್ಪತ್ರೆಯ ಕೋವಿಡ್ ಸೆಂಟರ್ ನಲ್ಲಿ ಸೋಂಕಿತರು ಉಟ ತಿಂಡಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ನಮಗೆ ಇಲ್ಲಿ ಚಿಕಿತ್ಸೆ ಅಥವಾ ವೈದ್ಯರ ಏನೂ ಸಮಸ್ಯೆ ಇಲ್ಲ. ಆದರೆ ಊಟ ತಿಂಡಿಯಂತೂ ತಿನ್ನಲು ಆಗುವುದಿಲ್ಲ ಎಂದು ಸೋಂಕಿತರು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ:ಕೋವಿಡ್ ನಿಯಂತ್ರಣಕ್ಕೆ ಹೀಗೆ ಮಾಡಿ: ಸರ್ಕಾರಕ್ಕೆ ಹಲವು ಸಲಹೆ ನೀಡಿದ ಸಿದ್ದರಾಮಯ್ಯ
ಊಟದ ಅವ್ಯವಸ್ಥೆಯ ಬಗ್ಗೆ ಸೋಂಕಿತನೋರ್ವ ಸೆಲ್ಫಿ ವಿಡಿಯೋ ಮಾಡಿದ್ದು, ಅದೀಗ ವೈರಲ್ ಆಗಿದೆ. ಬಿಸಿನೀರು, ಚಿಕಿತ್ಸೆ ಎಲ್ಲಾ ಸೌಲಭ್ಯ ಇದೆ, ಆದರೆ ಊಟ ತಿಂಡಿ ಮಾತ್ರ ತಿನ್ನಲೂ ಸಾಧ್ಯವಿಲ್ಲ. ಆಸ್ಪತ್ರೆಯಲ್ಲಿ ಕೊಡುತ್ತಿರುವ ಊಟ ಕಳಪೆಯಾಗಿದೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಆಸ್ಪತ್ರೆ ಸೇರಲು ಪಾಸಿಟಿವ್ ವರದಿ ಬೇಕಿಲ್ಲ : ಕೇಂದ್ರ ಸರಕಾರದಿಂದ ಹೊಸ ನಿಯಮ