ಕೋಲ್ಕತ್ತಾ : ಕೋವಿಡ್ ಸೋಂಕಿನ ಡೆಲ್ಟಾ ರೂಪಾಂತರಿ ಸೋಂಕು ಉತ್ತರ ಪ್ರದೇಶದಲ್ಲಿ ದಾಖಲಾಗಿ ಆತಂಕ ಸೃಷ್ಟಿ ಮಾಡಿತ್ತು. ಈಗ ಮತ್ತೆ ಮತ್ತೊಂದು ರೂಪಾಂತರಿ ಸೋಂಕು ಮತ್ತೆ ಉತ್ತರ ಪ್ರದೇಶವನ್ನು ಆತಂಕಕ್ಕೆ ಸಿಲುಕಿಸಿದೆ.
ಕಪ್ಪಾ ಎಂಬ ಕೋವಿಡ್ ಸೋಂಕಿನ ಮತ್ತೊಂದು ಹೊಸ ರೂಪಾಂತರಿ ಪತ್ತೆಯಾಗಿದೆ. ಇಲ್ಲಿನ ಸಂತ ಕಬೀರ್ ನಗರದಲ್ಲಿ ಕಪ್ಪಾ ಎಂಬ ಹೊಸ ಸೋಂಕು ಪತ್ತೆಯಾಗಿದೆ. 66 ವರ್ಷದ ವೃದ್ಧನೋರ್ವನಲ್ಲಿ ಈ ರೂಪಾಂತರಿ ಸೋಂಕು ಕಾಣಿಸಿಕೊಂಡಿದೆ.
ಇದನ್ನೂ ಓದಿ : ಪಶುಸಂಗೋಪನೆ ಇಲಾಖೆಯಿಂದ ಅನ್ಯ ಕರ್ತವ್ಯದ ನಿಯೋಜನೆಗೆ ನಿರ್ಬಂಧ : ಸಚಿವ ಪ್ರಭು ಚವ್ಹಾಣ್
ಈ ಬಗ್ಗೆ ಪ್ರತಿಕ್ರಿಯಿಸಿದ ವೈದ್ಯ ಅಮರೇಶ್ ಸಿಂಗ್, ಜೂನ್ 12 ರಿಂದ ಈ ಸೋಂಕಿಗೆ ಚಿಕಿತ್ಸೆ ನೀಡಲು ಆರಂಭಿಸಿದ್ದೇವು. ಆದರೇ, ಜೂನ್ 14 ರಂದು ಚಿಕಿತ್ಸೆ ಫಲಕಾರಿಯಾಗದೇ ಈ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದ್ದಾರೆ.
ಕೋವಿಡ್ ಸೋಂಕಿನ ಡೆಲ್ಟಾ ರೂಪಾಂತರಿ ಸೋಂಕು ಇಳಿಮುಖವಾಗುತ್ತಿದೆ ಎನ್ನುವಾಗಲೇ ಈಗ ಮತ್ತೆ ಕೋವಿಡ್ ಸೋಂಕಿನ ಇನ್ನೊಂದು ಮತ್ತೊಂದು ಹೊಸ ರೂಪಾಂತರಿ ಕಪ್ಪಾ ಈಗ ಆತಂಕ ಸೃಷ್ಟಿಸಿದೆ.
ಇದನ್ನೂ ಓದಿ : ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ 1ಲಕ್ಷ ರೂ. ಬೋನಸ್! ಕೋವಿಡ್ ಸಮಯದಲ್ಲಿ ನೌಕರ ಸ್ನೇಹಿ ಹೆಜ್ಜೆ