Advertisement

ಇಂಡೋ ಟಿಬೇಟ್‌ ಗಡಿ ರಕ್ಷಣ ಪೊಲೀಸರಿಂದ ಪಥ ಸಂಚಲನ

04:13 AM Apr 18, 2019 | mahesh |

ಕಡಬ: ಲೋಕಸಭಾ ಚುನಾವಣೆಯನ್ನು ಭಯಮುಕ್ತವಾಗಿ ನಡೆಸುವ ಮತ್ತು ಸೂಕ್ಷ್ಮ ಮತಗಟ್ಟೆಗಳ ಮತದಾರರಲ್ಲಿ ಧೈರ್ಯ ತುಂಬುವ ಸಲುವಾಗಿ ಚುನಾವಣ ಆಯೋಗದ ನಿರ್ದೇಶನದಂತೆ ಇಂಡೋ ಟಿಬೇಟ್‌ ಗಡಿ ರಕ್ಷಣ ಪೊಲೀಸರು ಕಡಬ ಪೊಲೀಸರ ಜತೆ ಸೇರಿ ಕಡಬ ಪೇಟೆಯಲ್ಲಿ ಮಂಗಳವಾರ ಪಥಸಂಚಲನ ನಡೆಸಿದರು.

Advertisement

ಕಡಬ ಪೊಲೀಸ್‌ ಠಾಣೆ ಪಿಐ ಪ್ರಕಾಶ್‌ ದೇವಾಡಿಗ ಮಾತನಾಡಿ, ಭಯಮುಕ್ತರಾಗಿ ಮತ ಚಲಾಯಿಸಲು ಚುನಾವಣ ಆಯೋಗವು ಎಲ್ಲ ವ್ಯವಸ್ಥೆಗಳನ್ನು ಮಾಡಿದೆ. ಅರ್ಹತೆ ಇರುವ ಯಾವೊಬ್ಬ ಮತದಾರನೂ ಮತದಾನದ ಹಕ್ಕಿನಿಂದ ವಂಚಿತನಾಗಬಾರದು. ಶಾಂತಿಯುತ ಮತದಾನ ನಡೆದು ಚುನಾವಣ ಪ್ರಕ್ರಿಯೆ ಸುಲಲಿತವಾಗಿ ನಡೆಯಬೇಕು ಎನ್ನುವುದು ಆಯೋಗದ ಉದ್ದೇಶವಾಗಿದ್ದು, ಮತದಾರರಿಗೆ ರಕ್ಷಣೆ ಒದಗಿಸಲು ಪೊಲೀಸರು ಮತ್ತು ದೇಶದ ರಕ್ಷಣಾ ಪಡೆಗಳು ಸನ್ನದ್ಧವಾಗಿದೆ. ಚುನಾವಣ ಅಕ್ರಮ ನಡೆಸಲು ಮುಂದಾದರೆ ಕಾನೂನು ಕ್ರಮ ನಿಶ್ಚಿತ ಎಂದರು.

ಕಡಬ ಠಾಣೆ ವ್ಯಾಪ್ತಿಯ ಕೊಂಬಾರು, ಸಿರಿಬಾಗಿಲು ಹಾಗೂ ಬಿಳಿನೆಲೆಯ ಕೆಲವು ಭಾಗಗಳನ್ನು ನಕ್ಸಲ್‌ ಪೀಡಿದ ಪ್ರದೇಶಗಳೆಂದು ಗುರುತಿಸಿರುವ ಹಿನ್ನೆಲೆಯಲ್ಲಿ ಅಲ್ಲಿನ ಮತಗಟ್ಟೆಗಳಲ್ಲಿ ಹಾಗೂ ಇತರ ಸೂಕ್ಷ್ಮ ಮತಗಟ್ಟೆಗಳಲ್ಲಿ ಇಂಡೋ ಟಿಬೇಟ್‌ ಗಡಿ ರಕ್ಷಣ ಪೊಲೀಸರು ಮತದಾರರಿಗೆ ರಕ್ಷಣೆಯ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.

ಇಂಡೋ ಟಿಬೇಟ್‌ ಗಡಿ ರಕ್ಷಣ ಪೊಲೀಸ್‌ ಪಡೆಯ ಆಫೀಸರ್‌ ಕಮಾಂಡಿಂಗ್‌ ಗಂಗಾ ಸಿಂಗ್‌ ಹಾಗೂ ಪ್ರೊಬೆಶನರಿ ಎಸ್‌ಐ ಕುಮಾರ್‌ ಜಿ. ಕಾಂಬ್ಳೆ ಹಾಜರಿದ್ದರು.

ಪ್ಯಾರಾ ಮಿಲಿಟರಿ ಭದ್ರತೆ
ಉಪ್ಪಿನಂಗಡಿ: ಲೋಕಸಭಾ ಚುನಾವಣೆ ಸಂದರ್ಭ ಭದ್ರತೆಗಾಗಿ 206 ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 12 ಮಂದಿ ಸೆಂಟ್ರಲ್‌ ಪ್ಯಾರಾ ಮಿಲಿಟರಿ ಪೋರ್ಸ್‌ (ಸಿಪಿಎಂಎಫ್) ಯೋಧರು, ಪೊಲೀಸ್‌ ಇಲಾಖೆ ಸಿಬಂದಿ ಹಾಗೂ ಗೃಹರಕ್ಷಕ ದಳದ ಸಿಬಂದಿ ಸಹಿತ 369 ಮಂದಿಯನ್ನು ನಿಯೋಜಿಸಲಾಗಿದೆ.

Advertisement

ಶಾಂತಿಯುತ ಮತದಾನ ನಡೆಯಲು 206 ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಓರ್ವ ಡಿವೈಎಸ್ಪಿ, ಮೂವರು ಸಿಪಿಐ, 5 ಮಂದಿ ಪಿಎಸ್‌ಐ, 20 ಮಂದಿ ಎಎಸ್‌ಐ, 188 ಮಂದಿ ಪೊಲೀಸ್‌ ಸಿಬಂದಿ, ಗೃಹರಕ್ಷಕ ದಳದ 104 ಮಂದಿ, 36 ಮಂದಿ ಪೊಲೀಸ್‌ ತರಬೇತಿ ಸಿಬಂದಿಯನ್ನು ಹಾಗೂ 12 ಮಂದಿ ಸೆಂಟ್ರಲ್‌ ಪ್ಯಾರಾ ಮಿಲಿಟರಿ ಪೋರ್ಸ್‌ (ಸಿಪಿಎಂಎಫ್) ಯೋಧರನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್‌ ಇಲಾಖೆಯ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next