ಮುಂಬಯಿ: ತುಳುನಾಡಿನ ಸಂಸ್ಕೃತಿ, ಜನಜೀವನ ಹಾಗೂ ನಂಬಿಕೆ-ನಡಾವಳಿಗಳನ್ನು ಆಧರಿಸಿ ನಿರ್ಮಿಸಲ್ಪಟ್ಟಿರುವ ಪತ್ತನಾಜೆ ಚಲನಚಿತ್ರ ಉತ್ತಮ ಕಥಾವಸ್ತುವನ್ನು ಒಳಗೊಂಡಿದ್ದು, ಕರಾವಳಿಯ ಸುಂದರ ಪರಿಸರದಲ್ಲಿ ಚಿತ್ರೀಕರಣಗೊಂಡಿದೆ. ಒಳ್ಳೆಯ ಸಂದೇಶದೊಂದಿಗೆ ಸಿನಿಪ್ರಿಯರಿಗೆ ಬೇಕಾದ ಹಾಸ್ಯ, ಪ್ರೀತಿ-ಪ್ರೇಮ ಮತ್ತು ಸಾಹಸ ದೃಶ್ಯಗಳಿಂದ ಕೂಡಿದ ಈ ಚಲನಚಿತ್ರ ತುಳು ಚಿತ್ರರಂಗದಲ್ಲಿ ದಾಖಲೆ ನಿರ್ಮಿಸುವಂತಾಗಲಿ ಎಂದು ಶ್ರೀದೇವಿ ಶಿಕ್ಷಣ ಸಂಸ್ಥೆಗಳ ಆಡಳಿತ ನಿರ್ದೇಶಕ ಮತ್ತು ಇಂಟನ್ಯಾಷನಲ… ಬಂಟ್ಸ್ ವೆಲ್ಫೆàರ್ ಟ್ರಸ್ಟ್ ಸಂಸ್ಥಾಪಕ ಎ. ಸದಾನಂದ ಶೆಟ್ಟಿ ಹೇಳಿದ್ದಾರೆ.
ಇತ್ತೀಚೆಗೆ ಪಡು ಚಿತ್ತರಂಜನ ರೈ ಅವರ ಆಶ್ರಯ ಎಸ್ಟೇಟ್‌ನಲ್ಲಿ ಟ್ರಸ್ಟ್ ಏರ್ಪಡಿಸಿದ್ದ ಮರಿಯಲದ ಮಿನದನ ಕಾರ್ಯಕ್ರಮದಲ್ಲಿ ಪತ್ತನಾಜೆ ತುಳುವೆರೆ ಪಬೊì ತುಳು ಚಿತ್ರತಂಡ ಆ. 5ರಂದು ಮಂಗಳೂರು ಪುರಭವನದಲ್ಲಿ ಏರ್ಪಡಿಸಿರುವ ಆಟಿಡೊಂಜಿ ದಿನ… ಸೋಣದಂಚಿ ಪಜ್ಜೆ’ ಚಲನಚಿತ್ರ ರಂಗಸಂಭ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಅವರು ಶುಭ ಹಾರೈಸಿದರು.
ಚಿತ್ರದ ನಿರ್ಮಾಪಕ-ನಿರ್ದೇಶಕ ಡಾ| ತೋನ್ಸೆ ವಿಜಯಕುಮಾರ್ ಶೆಟ್ಟಿ ಮಾತನಾಡಿ, ರಂಗ ಸಂಭ್ರಮದಲ್ಲಿ ಪತ್ತನಾಜೆ ಚಲನಚಿತ್ರದ ಹಾಡುಗಳ ಧ್ವನಿಸುರುಳಿ ಬಿಡುಗಡೆ, ಟ್ರೈಲರ್ ಲೋಕಾರ್ಪಣೆ, ಪೋಸ್ಟರ್‌ಗೆ ಚಾಲನೆ ಮತ್ತು ನೂತನ ಸಿನಿಪತ್ರಿಕೆ ಪತ್ತನಾಜೆ ಅನಾವರಣ ನಡೆಯಲಿದೆ ಎಂದರು.
ಸಿನಿ ಪತ್ರಿಕೆ ಸಂಪಾದಕ ಹಾಗೂ ಚಿತ್ರದ ಶೀರ್ಷಿಕೆ ಗೀತೆ ರಚನೆಕಾರ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ ತುಳುನಾಡಿನಲ್ಲಿ ಸಾಲಾಗಿ ಬರುವ ಹಬ್ಬಗಳಿಗೆ ಮುನ್ನುಡಿಯಾಗಿ ಆಟಿಡೊಂಜಿ ದಿನ ಸೋಣೊದಂಚಿ ಪಜ್ಜೆ ಎಂಬ ವಿಶಿಷ್ಟ ಪರಿಕಲ್ಪನೆಯಲ್ಲಿ ಸೆ. 1ರಂದು ಬಿಡುಗಡೆಯಾಗುವ ಪತ್ತನಾಜೆ ಚಲನಚಿತ್ರದ ತೋರಣ ಮುಹೂರ್ತವಾಗಿ ರಂಗಸಂಭ್ರಮವನ್ನು ಸಂಯೋಜಿಸಲಾಗಿದೆ ಎಂದು ನುಡಿದರು. ಪತ್ತನಾಜೆ ಚಲನಚಿತ್ರ ನಿರ್ವಹಣಾ ಸಮಿತಿ ಅಧ್ಯಕ್ಷೆ ಶಮೀನಾ ಆಳ್ವ ಮೂಲ್ಕಿ ಸ್ವಾಗತಿಸಿದರು. ನಟ ಪ್ರತೀಕ್ ಕಾರ್ಯಕ್ರಮ ನಿರ್ವಹಿಸಿದರು. ಕರಾಲಿ ಚಿತ್ರದ ನಾಯಕ ನಟ ಸಾಹೀಲ್ ರೈ ವಂದಿಸಿದರು.