Advertisement

ಅಗ್ಗದ ದರದಲ್ಲಿ ಪತಂಜಲಿ ಹಾಲು

12:09 PM Sep 15, 2018 | Karthik A |

ಹೊಸದಿಲ್ಲಿ: ಯೋಗ ಗುರು ಬಾಬಾ ರಾಮ್‌ದೇವ್‌ ಪ್ರವರ್ತಿತ ಪತಂಜಲಿ ಸಂಸ್ಥೆ ಶೀಘ್ರವೇ ಹಾಲು ಮತ್ತು ಅದರ ಉತ್ಪನ್ನಗಳ ಮಾರಾಟಕ್ಕೆ ಕೈ ಹಾಕಲಿದೆ. ಪತಂಜಲಿಯ ಹಾಲು, ಮೊಸರು, ಮಜ್ಜಿಗೆ, ಬೆಣ್ಣೆಯಂಥ ಉತ್ಪನ್ನಗಳು ಮಾರುಕಟ್ಟೆಯಲ್ಲಿ ದೊರೆಯುವ ಇತರ ಸಂಸ್ಥೆಗಳ ಉತ್ಪನ್ನಗಳ ದರಕ್ಕಿಂತ 2 ರೂ.ಕಡಿಮೆ ದರದಲ್ಲಿ ಸಿಗಲಿದೆ ಎಂದು ಯೋಗ ಗುರು ಘೋಷಿಸಿದ್ದಾರೆ. ಪ್ರತಿ ದಿನ 10 ಲಕ್ಷ ಲೀಟರ್‌ ಹಾಲು ಮಾರಾಟ ಗುರಿಯನ್ನು ಹಾಕಿಕೊಳ್ಳಲೂ ಪತಂಜಲಿ ಸಂಸ್ಥೆ ನಿರ್ಧರಿಸಿದೆ. ನೇರವಾಗಿ ರೈತರಿಂದಲೇ ಹಾಲು ಖರೀದಿಸುವುದಾಗಿ ಹೇಳಿದೆ.

Advertisement

1 ಲಕ್ಷ ಹಾಲು ಉತ್ಪಾದಕ ರೈತರ ಜತೆಗೆ ಸಹಭಾಗಿತ್ವ ಹೊಂದುವುದಾಗಿ ಪತಂಜಲಿ ಹೇಳಿದೆ. 56 ಸಾವಿರ ಚಿಲ್ಲರೆ ಮಾರಾಟಗಾರರ ಜಾಲದ ಮೂಲಕ ಹಾಲು ಮತ್ತು ಅದರ ಉತ್ಪನ್ನಗಳ ಮಾರಾಟ ಜಾಲ ಹೊಂದಲಾಗುತ್ತದೆ. ಇದಲ್ಲದೆ ‘ದುಗ್ಧಾಮೃತ’ ಬ್ರಾಂಡ್‌ ಹೆಸರಿನಲ್ಲಿ ಪಶು ಆಹಾರ ಮತ್ತು ‘ದಿವ್ಯ ಜಲ’ ಎಂಬ ಹೆಸರಿನಲ್ಲಿ ಕುಡಿಯುವ ನೀರಿನ ಮಾರಾಟವನ್ನೂ ಸಂಸ್ಥೆ ಆರಂಭಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next