ಅರಕಲಗೂಡು: ಅರಕಲಗೂಡು ಪಪಂ ಸಭಾಂಗಣದಲ್ಲಿ ನಡೆದ ಸಾಮಾನ್ಯಸಭೆಯಲ್ಲಿ 2022-23ನೇ ಸಾಲಿನ 3, 21ಲಕ್ಷದ ಉಳಿತಾಯ ಬಜೆಟ್‌ನ್ನು ಪಪಂ ಅಧ್ಯಕ್ಷ ಅಬ್ದುಲ್ ಬಾಸಿತ್ ಮಂಡಿಸಿದರು.
54,22,2090ರೂ. ಗಾತ್ರದ ಬಜೆಟ್ ಮಂಡಿಸಿದ್ದು, ಆರಂಭಿಕ ಶಿಲ್ಕು 9, 22, 53,750ರೂ. 45253750ರೂ. ಒಟ್ಟು ಜಮಾ ಹಾಗೂ 54222090 ರೂ.ಒಟ್ಟು ಖರ್ಚು ತೋರಿಸಲಾಗಿದೆ.
ರಸ್ತೆ ಕಾಮಗಾರಿ ಹಾಗೂ ನಿರ್ವಹಣೆ 15,54ಕೋಟಿ, ಚರಂಡಿ ಕಾಮಗಾರಿ 6,50ಕೋಟಿ,ಇತರೆ ಸಿವಿಲ್ ಕಾಮಗಾರಿಗಳಿಗೆ 1,50ಕೋಟಿ ರೂ.ಬೀದಿದೀಪ ಕಾಮಗಾರಿ ಮತ್ತು ನಿರ್ವಹಣೆಗೆ 2 ಕೋಟಿ ರೂ.ಬೀದಿ ದೀಪ ಹಾಗೂ ಕುಡಿಯುವ ನೀರಿನ ವಿದ್ಯುತ್ ಶುಲ್ಕ 2 ಕೋಟಿ ರೂ.ಹೊರಗುತ್ತಿಗೆ ಸಿಬ್ಬಂದಿ ವೆಚ್ಚ 38 ಲಕ್ಷ ರೂ. ಆರೋಗ್ಯ ಶಾಖೆ ಕಾಮಗಾರಿ ಮತ್ತು ನಿರ್ವಹಣೆಗೆ 1,80ಕೋಟಿ ರೂ.ಒಳಚರಂಡಿ ಯೋಜನೆಗೆ ವಂತಿಕೆ 2 ಕೋಟಿ ರೂ.ನೀರು ಸರಬರಾಜು ನಿರ್ವಹಣೆಗೆ 1.50 ಕೋಟಿ ರೂ.ನೀರು ಸರಬರಾಜು ನಿರ್ವಹಣೆ 20ಲಕ್ಷ ರೂ.ವಾಣಿಜ್ಯ ಮಳಿಗೆಗಳಿದೆ 2,13 ಕೋಟಿ ರೂ.ಸಿಬ್ಬಂದಿಗಳ ವೇತನ ಪಾವತಿಗೆ 2 ಕೋಟಿ ರೂ. ಇನ್ನಿತರೆ ಮಿಸ್‌ಲೇನಿಯಸ್‌ಗಳ ವೆಚ್ಚಗಳು 4,84 ಕೋಟಿ ರೂ. ಸೇರಿದಂತೆ ಇತರೆ ವೆಚ್ಚಗಳ ಕುರಿತ ಬಜೆಟ್‌ನ್ನು ಸಭೆಯಲ್ಲಿ ಪ್ರಸ್ತಾಪಿಸಿದರು.
ಕೋಳಿ ಮಳಿಗೆಯಿಂದ ತೆರಿಗೆ ಇಲ್ಲ: ಪಪಂ ವ್ಯಾಪ್ತಿಯಲ್ಲಿ ಹತ್ತಾರು ಕಡೆ ಕೋಳಿ ಅಂಗಡಿಗಳಿದ್ದು, ಇವುಗಳಿಂದ ಯಾವುದೇ ಆದಾಯ ನಿರೀಕ್ಷಿಸಲಾಗಿಲ್ಲ. ಕೇವಲ ಸೇವೆ ಮಾತ್ರ ಕಲ್ಪಿಸಲಾಗುತ್ತಿದೆ.ಬಾಡಿಗೆಯನ್ನು ಖಾಸಗಿ ವ್ಯಕ್ತಿಗಳಿಗೆ ನೀಡಲಾಗುತ್ತಿದೆ. ಪಪಂ ಮಾತ್ರ ಸ್ವತ್ಛತೆ ನಿರ್ವಹಿಸಬೇಕಿದೆ. ಇದು ಅವೈಜ್ಞಾನಿಕ ಕ್ರಮವಾ ಗಿದ್ದು, ಕೂಡಲೇ ಕೋಳಿ ಅಂಗಡಿಗಳಿಂದ ತೆರಿಗೆ ಸಂಗ್ರಹಕ್ಕೆ ಗಮನಕೊಡಬೇಕೆಂದು ಅವರು ಒತ್ತಾಯಿಸಿದರು.
ಬಜೆಟ್ ಕಾಪಿ ಗೊಂದಲ: ಸಭೆಯಲ್ಲಿ ಮಂಡಿಸಲಾಗಿರುವ ಬಜೆಟ್ ಕಾಪಿ ಗೊಂದಲದಿಂದ ಕೂಡಿದೆ. ಒಂದು ಕಡೆ ಜಾಹೀರಾತು ವೆಚ್ಚ 5ಲಕ್ಷ ಎಂದು ತೋರಿಸಲಾಗಿದೆ. ಆದರೆ ಪುಸ್ತಕದಲ್ಲಿ 1.50ಲಕ್ಷ ರೂ. ಎಂದು ನಮೂದಾಗಿದೆ. ಅದೇ ರೀತಿ ಮಿಸ್‌ಲೇನಿಯಸ್ ವೆಚ್ಚ 4,84 ಕೋಟಿ ಎಂದು ತೋರಿಸಲಾಗಿದೆ. ಇಷ್ಟೊಂದು ವೆಚ್ಚ ಹೇಗೆ ಬರಲು ಸಾಧ್ಯ ಎಂದು ಸದಸ್ಯರಾದ ನಿಖೀಲ್ ಕುಮಾರ, ರಶ್ಮಿಮಂಜುನಾಥ್ ಆಕ್ಷೇಪ ವ್ಯಕ್ತಪಡಿಸಿದರು.
ಸಭೆಯಲ್ಲಿ ಗದ್ದಲ: ನಾಮ ನಿರ್ದೇಶನ ಸದಸ್ಯ ಹಿರಿಯಣ್ಣಯ್ಯ ಅವರು, ಪಟ್ಟಣದಲ್ಲಿ ನೆನಗುದಿಗೆ ಬಿದ್ದಿರುವ ಒಳಚರಂಡಿ ಕಾಮಗಾರಿ ಕುರಿತು ಪ್ರಸ್ತಾಪಿಸಿದ ವೇಳೆ ಇಡೀ ಸಭೆ ಗದ್ದಲದಿಂದ ಕೂಡಿತ್ತು. ನಾಮನಿರ್ದೇಶನ ಸದಸ್ಯರು ಕೇವಲ ಸಲಹೆ ಕೊಡಬಹುದಾಗಿದೆ. ಈ ಕುರಿತು ಮುಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಬಹುದಾಗಿದೆ ಎಂದು ಸದಸ್ಯ ಅನಿಕೇತನ್ ತಿಳಿಸಿದರು. ಇದಕ್ಕೆ ಸದಸ್ಯರಾದ ರಶ್ಮಿ, ರಮೇಶ್ ವಾಟಾಳ್, ನಿಖೀಲ್ ಕುಮಾರ್ ತೀವ್ರವಾಗಿ ಆಕ್ಷೇಪವ್ಯಕ್ತಪಡಿಸಿದರು. ಈ ವೇಳೆ ಮಾಜಿ ಅಧ್ಯಕ್ಷ ಹೂವಣ್ಣ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ಲಕ್ಷ್ಮೀ, ಮುಖ್ಯಾಧಿಕಾರಿ ಶಿವಕುಮಾರ್, ಲೆಕ್ಕಾಧಿಕಾರಿ ವಿಮಲ ಇತರೆ ಸಿಬ್ಬಂದಿ ಹಾಜರಿದ್ದರು.