ಸಂತೆಮರಹಳ್ಳಿ: ರಾಜ್ಯ ಚುನಾವಣಾ ಆಯೋ ಗವು ಕರ್ನಾಟಕ ಪೌರಸಭೆಗಳ ಕೌನ್ಸಿಲರ್‌ಗಳ ಚುನಾವಣೆ ನಿಯಮಗಳ ಆದೇಶದ ಮೇರೆಗೆ ಮೇ 29 ರಂದು ಯಳಂದೂರು ಪಟ್ಟಣ ಪಂಚಾಯಿತಿಗೆ ಚುನಾವಣೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಗರಿಗೆದರಿದ ರಾಜಕೀಯ ಚಟುವಟಿಕೆ: ಯಳಂದೂರು ಪಟ್ಟಣ ಪಂಚಾಯಿತಿಯಲ್ಲಿ ಒಟ್ಟು 11 ವಾರ್ಡ್‌ಗಳಿದ್ದು ಎಲ್ಲಾ ವಾರ್ಡುಗಳಿಗೂ ಚುನಾವಣೆ ನಡೆಯಲಿದೆ. ಚುನಾವಣಾ ಅಧಿಸೂಚನೆ ಹೊರ ಬೀಳುತ್ತಿದ್ದಂತೆ ಪಟ್ಟಣದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಲೋಕಸಭಾ ಚುನಾವಣಾ ಫಲಿತಾಂಶದ ನಂತರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯ ಬಹುದೆಂಬ ಲೆಕ್ಕಾಚಾರದಲ್ಲಿದ್ದ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗ ಶಾಕ್ ನೀಡಿದೆ. ಮೇ ತಿಂಗಳೊಳಗೆ ಸಂಪೂರ್ಣ ಚುನಾವಣೆ ಮುಗಿಸಲು ಆಯೋಗ ಸಿದ್ಧತೆ ನಡೆಸಿಕೊಂಡಿ ರುವುದರಿಂದ ಅಭ್ಯರ್ಥಿಗಳ ಅಧಿಸೂಚನೆ ಹೊರ ಬೀಳುತ್ತಿದ್ದಂತೆ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಮಾಹಿತಿ ಪಡೆದುಕೊಳ್ಳಲು ಮುಗಿಬಿದ್ದರು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಬಿಎಸ್‌ಪಿ ಪಕ್ಷದ ಕಾರ್ಯಕರ್ತರು ಟಿಕೆಟ್ ಸಂಬಂಧ ರಾಜಕೀಯ ಮುಖಂಡರೊಂದಿಗೆ ಗುರುವಾರದಿಂದಲೇ ಸಂಪರ್ಕ ಸಾಧಿಸಲು ಯತ್ನಿಸುತ್ತಿದ್ದಾರೆ.
Advertisement
ಮೇ 9 ರಂದು ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದಾರೆ. ಮೇ 16 ನಾಮಪತ್ರ ಸಲ್ಲಿಸಲು ಕೊನೆ ದಿನ. 17 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. 20ರಂದು ಉಮೇದುವಾರಿಕೆ ಹಿಂತೆಗೆದು ಕೊಳ್ಳಲು ಕೊನೆ ದಿನ. 29 ರಂದು ಚುನಾವಣೆ ನಡೆಯಲಿದೆ. ಮರು ಮತದಾನವಿದ್ದಲ್ಲಿ ಮೇ 30 ರಂದು ನಡೆಯಲಿದೆ. ಮೇ 31 ರಂದು ಮತ ಎಣಿಕೆ ನಡೆಯಲಿದೆ ಇಲ್ಲಿಯವರೆಗೂ ಚುನಾವಣಾ ನೀತಿ ಸಂತೆ ಜಾರಿಯಲ್ಲಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.