Advertisement
ಈ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆಲ್ ರೌಂಡರ್ ಪ್ಯಾಟ್ ಕಮಿನ್ಸ್ ಅವರು ಹ್ಯಾಟ್ರಿಕ್ ವಿಕೆಟ್ ತೆಗೆದು ಮಿಂಚಿದರು. ಬಾಂಗ್ಲಾದ ಮೊಹಮದುಲ್ಲಾ, ಮೆಹದಿ ಹಸನ್ ಮತ್ತು ತೌಹಿದ್ ಹ್ರದೋಯ್ ಅವರ ವಿಕೆಟ್ ಗಳನ್ನು ಕಿತ್ತ ಕಮಿನ್ಸ್ ಸಂಭ್ರಮಿಸಿದರು.
Related Articles
Advertisement
ಈ ಮಧ್ಯೆ ಮಿಚೆಲ್ ಸ್ಟಾರ್ಕ್ ಅವರು ಆರಂಭಿಕ ಓವರ್‌ನಲ್ಲಿ ತಂಜಿದ್ ಹಸನ್ ಅವರನ್ನು ಔಟ್ ಮಾಡುವ ಮೂಲಕ ವೈಟ್ ಬಾಲ್ ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆದರು. ತಂಜಿದ್ ಹಸನ್ ವಿಕೆಟ್ ಸ್ಟಾರ್ಕ್ ಅವರ 95 ನೇ ವಿಶ್ವಕಪ್ ವಿಕೆಟ್ ಆಗಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡವು 8 ವಿಕೆಟ್ ಕಳೆದುಕೊಂಡು 140 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ಆಸೀಸ್ 11.2 ಓವರ್ ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 100 ರನ್ ಗಳಿಸಿದ್ದಾಗ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ ಈ ಸಮಯದಲ್ಲಿ ಆಸೀಸ್ 28 ರನ್ ಗಳಿಂದ ಮುಂದಿತ್ತು. ಹೀಗಾಗಿ ಮಾರ್ಷ್ ಪಡೆಯನ್ನು ವಿಜಯಿ ಎಂದು ಘೋಷಿಸಲಾಯಿತು.