Advertisement

ಸಚಿವ ಪಾಸ್ವಾನ್‌ ದೇಹಾರೋಗ್ಯ ಸುಧಾರಣೆ; ಆದರೂ ICUನಲ್ಲಿ ಮುಂದುವರಿಕೆ

11:32 AM Jan 13, 2017 | udayavani editorial |

ಪಟ್ನಾ : ನಿನ್ನೆ  ಗುರುವಾರ ರಾತ್ರಿ 8.30ರ ಸುಮಾರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಕಾರಣಕ್ಕೆ  ಇಲ್ಲಿನ ಆಸ್ಪತ್ರೆಯೊಂದರಲ್ಲಿ ಐಸಿಯು ಗೆ ದಾಖಲಾಗಿದ್ದ  70ರ ಹರೆಯದ ಕೇಂದ್ರ ಸಚಿವ ಹಾಗೂ ಎಲ್‌ಜೆಪಿ ಅಧ್ಯಕ್ಷರಾಗಿರುವ ರಾಮ್‌ವಿಲಾಸ್‌ ಪಾಸ್ವಾನ್‌ ಅವರ ದೇಹಾರೋಗ್ಯ ಈಗ ಗಮನಾರ್ಹವಾಗಿ ಸುಧಾರಿಸಿದ್ದು ಅವರು ಚೇತರಿಸಿಕೊಳ್ಳುತ್ತಿದ್ದಾರೆ; ಆದರೂ ಐಸಿಯುನಲ್ಲಿ ಅವರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Advertisement

“ಪಾಸ್ವಾನ್‌ ಜೀ ಅವರ ಆರೋಗ್ಯ ಈಗ ದೃಢವಾಗಿದೆ’ ಎಂದು ಇಲ್ಲಿನ ಎಚ್‌ಐಂಆರ್‌ಐ ಆಸ್ಪತ್ರೆಯ ಕಾರ್ಡಿಯಾಲಜಿ ವಿಭಾಗದ ಮುಖ್ಯಸ್ಥರಾಗಿರುವ ಪ್ರಮೋದ್‌ ಕುಮಾರ್‌ ತಿಳಿಸಿದ್ದಾರೆ.

ಸಚಿವ ಪಾಸ್ವಾನ್‌ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡದ ವರದಿಯನ್ನು ಅನುಸರಿಸಿ ಐಸಿಯುನಿಂದ ಹೊರಗೆ ವರ್ಗಾಯಿಸುವ ನಿರ್ಧಾರವನ್ನು ಮಧ್ಯಾಹ್ನದ ಬಳಿಕ ಕೈಗೊಳ್ಳಲಾಗುವುದು ಎಂದು ವಿಶೇಷ ಕರ್ತವ್ಯನಿರತ ಅಧಿಕಾರಿ ಆರ್‌ ಸಿ ಮೀಣ ತಿಳಿಸಿದ್ದಾರೆ. 

ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ವೈದ್ಯರಿಗೆ ಫೋನ್‌ ಮಾಡಿ ಪಾಸ್ವಾನ್‌ ಅವರ ದೇಹಾರೋಗ್ಯವನ್ನು ವಿಚಾರಿಸಿಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next