Advertisement

ಭವಿಷ್ಯಕ್ಕೂ ಪಾಸ್‌ವರ್ಡೇ ಕಾವಲು

12:30 AM Dec 24, 2018 | |

ಮುಂದಿನ 50 ವರ್ಷ ಗಳವರೆಗೂ ಈ ಪಾಸ್‌ವರ್ಡ್‌ ಎಂಬ ಅಕ್ಷರ ಗುತ್ಛ ನಮ್ಮ ಕೈಬಿಡುವುದಿಲ್ಲ. ಇವುಗಳೊಂದಿಗೆ ನಾವು ಹೆಣಗಲೇ ಬೇಕು. ಹೊಸ ಹೊಸ ವೆಬ್‌ಸೈಟ್‌ ಕಂಡಾಗ ಹೊಸ ಹೊಸ ಪಾಸ್‌ವರ್ಡ್‌ಗಳನ್ನು ಹೆಣೆಯಲೇ ಬೇಕು. ಇಂತಹ ಹೊಸ ಜೋಡಣೆಯ ಪಾಸ್‌ವರ್ಡ್‌ ನಮ್ಮ ನೆನಪಿನ ಶಕ್ತಿಯನ್ನು ಕಾಡುತ್ತಲೇ ಇರುತ್ತವೆ. ಹೆಚ್ಚು ಹೆಚ್ಚು ಸಂಖ್ಯೆಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ಸಾಮರ್ಥ್ಯವನ್ನು ದಿನೇ ದಿನೇ ಗಳಿಸಲೇ ಬೇಕು.

Advertisement

ನಾವು ಸುಮಾರು 20 ಸಾವಿರ ಶಬ್ದಗಳನ್ನು ನೆನಪಿನಲ್ಲಿ ಇಟ್ಟು ಕೊಳ್ಳುವ ಸಾಮರ್ಥ್ಯ ಹೊಂದಿರುತ್ತೇವೆ ಎಂದು ಮನಃಶಾಸ್ತ್ರಜ್ಞರು ಹೇಳುತ್ತಾರೆ. ಆದರೆ ನೀವು ಎಷ್ಟು ಪಾಸ್‌ವರ್ಡ್‌ಗಳನ್ನು ನೆನಪಿಟ್ಟು ಕೊಳ್ಳಲು ಸಾಧ್ಯ? ಎಂದು ಟೆಕ್ಕಿಗಳು ಕೇಳುತ್ತಾರೆ. ನಮ್ಮ ಬಳಿ ಇಮೇಲ್‌ನಿಂದ ಆರಂಭಿಸಿ ಫೋನ್‌, ಕಂಪ್ಯೂಟರ್‌, ನೆಟ್‌ಫ್ಲಿಕ್ಸ್‌, ಅಮೇಜಾನ್‌ವರಗೆ ಎಲ್ಲವಕ್ಕೂ ಪಾಸ್‌ವರ್ಡ್‌ ಬೇಕು. ಬೆಳಗ್ಗೆ ಎದ್ದಾಕ್ಷಣ ಹಲ್ಲುಜ್ಜುವ, ಕನ್ನಡಿ ನೋಡಿಕೊಳ್ಳುವ ಮೊದಲು ಫೋನ್‌ ತೆಗೆದು ಪಾಸ್‌ವರ್ಡ್‌ ಟೈಪಿಸುತ್ತೇವೆ. ತಂತ್ರಜ್ಞಾನ ಅಗಾಧವಾಗಿ ಬದಲಾಗಿದೆ. ಸಣ್ಣ ಮೊಬೈಲ್‌ನಿಂದ ಆರೂ ಮುಕ್ಕಾಲು ಇಂಚಿನ ಸ್ಮಾರ್ಟ್‌ಫೋನ್‌ವರೆಗೆ ನಮ್ಮ ಕೈಲಿರುವ ಗ್ಯಾಜೆಟ್‌ ರೂಪಾಂತರ ಪಡೆದಿದೆ. ಆದರೆ ಪಾಸ್‌ವರ್ಡ್‌ ಹಾಗೆಯೇ ಇದೆ! ಮೊಬೈಲ್‌ನಲ್ಲಿ ಈಗೀಗ ಫಿಂಗರ್‌ಪ್ರಿಂಟ್‌, ಫೇಸ್‌ ಅನ್‌ಲಾಕ್‌ಗಳೆಲ್ಲ ಬಂದಿರ ಬಹುದು. ಆದರೆ ಅವೆಲ್ಲವೂ ಫೋನ್‌ ಅನ್‌ಲಾಕ್‌ ಮಾಡಲು ಮಾತ್ರ ಬಳಕೆಯಾಗುತ್ತಿವೆ. ನೀವು ನಿಮ್ಮ ಬ್ಯಾಂಕ್‌ ಅಪ್ಲಿಕೇಶನ್‌ ತೆರೆಯಬೇಕೆಂದರೆ ಪಾಸ್‌ವರ್ಡ್‌ ಒತ್ತಬೇಕು.

ಅಂದಹಾಗೆ ಈ ಪಾಸ್‌ವರ್ಡ್‌ ಎಂಬ ಕಲ್ಪನೆ ಇತ್ತೀಚಿನದ್ದಲ್ಲ. ನಮಗೆ ಪಾಸ್‌ವರ್ಡ್‌ ಎಂಬುದು ಕಂಪ್ಯೂಟರಿನ ಮೂಲಕ ಪರಿಚಯವಾದದ್ದೇನೋ ಹೌದು. ಆದರೆ ಅದಕ್ಕೂ ಮೂಲದಲ್ಲಿ ಇನ್ನೊಂದು ರೀತಿಯಲ್ಲೂ ಪಾಸ್‌ವರ್ಡ್‌ ಬಳಕೆಯಲ್ಲಿತ್ತು. ಈ ಪಾಸ್‌ವರ್ಡ್‌ ರೀತಿಯ ಕಲ್ಪನೆ ಹುಟ್ಟುಹಾಕಿದ್ದೇ ರೋಮನ್ನರು ಎಂಬುದೊಂದು ಕಥೆಯಿದೆ. ರೋಮ್‌ ಸೇನೆ ತನ್ನ ಸ್ನೇಹಿತರು ಹಾಗೂ  ಶತ್ರುಗಳನ್ನು ಗುರುತಿಸಲು ಈ ಪಾಸ್‌ವರ್ಡ್‌ನ ಕಲ್ಪನೆ ಯನ್ನೇ ಬಳಸಿತ್ತು. ಅಂದರೆ ಒಂದು ಕೋಡ್‌ ಅನ್ನು ಸ್ನೇಹಿತರಿಗೆ ನೀಡಿತ್ತು. ಸೇನೆಯವರು ಸಿಕ್ಕಾಗ ಆ ಕೋಡ್‌ ಹೇಳಿದರೆ ಆತ ಸ್ನೇಹಿತ ಎಂದರ್ಥ. ಇದೇ ರೀತಿ ನಮ್ಮ ಪುರಾಣದಲ್ಲೂ ಇಂಥ ಕಲ್ಪನೆಯಿದೆ. ಶಕುಂತಲೆಯ ಉಂಗರವೂ ಪಾಸ್‌ವರ್ಡ್‌ನ ಒಂದು ರೂಪ ಎನ್ನ ಬಹುದು. ಬೈಬಲ್‌ನಲ್ಲೂ ಶಿಬ್ಬೊಲೆತ್‌ ಇನ್ಸಿಡೆಂಟ್‌ ಎಂಬ ಕಥಾನಕ ವಿದೆ. ಅದಕ್ಕೂ ಈಗಿನ ನಮ್ಮ ಪಾಸ್‌ವರ್ಡ್‌ಗೂ ಹೋಲಿಕೆಯಿದೆ.

ಆದರೆ ಈಗ ನಾವು ಬಳಸುತ್ತಿರುವ ಪಾಸ್‌ವರ್ಡ್‌ಅನ್ನು ಮೊದಲು ಹುಟ್ಟುಹಾಕಿದ್ದು, ಫ‌ರ್ನಾಂಡೋ ಕೊರ್ಬಾಟೋ ಎಂಬ ವಿಜ್ಞಾನಿ. ಸುಮಾರು 1960ರ ಹೊತ್ತಿಗೆ ಕೊರ್ಬಾಟೊ ಮಸಾ ಚುಸೆಟ್ಸ್‌ ವಿವಿಯಲ್ಲಿ ಕೆಲಸ ಮಾಡುತ್ತಿದ್ದಾಗ, ಕಂಪಾಟಿಬಲ್‌ ಟೈಮ್‌ ಶೇರಿಂಗ್‌ ಸಿಸ್ಟಂ ಅನ್ನು ವಿವಿ ಅಭಿವೃದ್ಧಿಪಡಿಸಿತ್ತು. ಆಗ ಎಲ್ಲ ಸಂಶೋಧಕರೂ ತಮ್ಮ ಫೈಲ್‌ಗ‌ಳನ್ನು ಕಂಪ್ಯೂಟರಿನಲ್ಲಿ ಇಟ್ಟುಕೊಳ್ಳುತ್ತಿದ್ದರು. ಅದರಲ್ಲಿ ಒಂದೇ ಹಾರ್ಡ್‌ಡಿಸ್ಕ್ ಇತ್ತು. ಹೀಗಾಗಿ ಇತರರ ಸಂಶೋಧನೆಯನ್ನು ಓದಲು ಅವಕಾಶ ನೀಡ ಬಾರದು ಎಂಬ ಕಾರಣಕ್ಕೆ ಪಾಸ್‌ವರ್ಡ್‌ ಎಂಬ ಕಲ್ಪನೆಯನ್ನು ಹುಟ್ಟುಹಾಕಿದರು. ಪ್ರತಿಯೊಬ್ಬರಿಗೂ ಒಂದೊಂದು ಪಾಸ್‌ವರ್ಡ್‌ ನೀಡಿದರು. ಆ ಪಾಸ್‌ವರ್ಡ್‌ ಬಳಸಿ ಫೈಲ್‌ ಅನ್ನು ಬಳಸಬಹು ದಾಗಿತ್ತು. ಆ ಕಾಲಕ್ಕೆ ಇದು ಅತ್ಯಂತ ಸರಳ ವಿಧಾನವಾಗಿತ್ತು.

ಆ ಕಾಲಕ್ಕೆ ಈ ಸರಳ ವಿಧಾನ ಸಾಕಾಗಿತ್ತು. ಯಾಕೆಂದರೆ ಆಗ ಕಂಪ್ಯೂಟರ್‌ ಬಳಸುವವರ ಸಂಖ್ಯೆಯೂ ಕಡಿಮೆಯಾಗಿತ್ತು. ಬಹುಶಃ ಪಾಸ್‌ವರ್ಡ್‌ ಅನ್ನು ಆ ಕಾಲಕ್ಕೆ ಕೇವಲ ಕೊರ್ಬಾಟೊ ಹಾಗೂ ಅವರ ಶಿಷ್ಯಂದಿರು ಬಳಸುತ್ತಿದ್ದರೇನೋ! ಆದರೆ 90ರ ದಶಕ ಕಾಲಿಡುತ್ತಿದ್ದಂತೆಯೇ ಎಲ್ಲರ ಕೈಗೂ ಕಂಪ್ಯೂಟರ್‌ ಬಂತು. ಜಿಬಿಗಟ್ಟಲೆ ಡೇಟಾ ಜನರೇಟ್‌ ಆಗಲು ಆರಂಭವಾಯಿತು. ಈ ಡೇಟಾವನ್ನು ರಕ್ಷಿಸಲು ಪಾಸ್‌ವರ್ಡ್‌ ಇನ್ನಷ್ಟು ಸುರಕ್ಷಿತವೂ ಆಗಬೇಕಾಯಿತು. ಆಗ ಹಲವು ಕಂಪ್ಯೂಟರ್‌ ಸೈಂಟಿಸ್ಟುಗಳು ಈ ಬಗ್ಗೆ ಸಂಶೋಧನೆ ನಡೆಸಲು ಆರಂಭಿಸಿದ್ದರು. ಇದೇ ವೇಳೆಗೆ ಕ್ರಿಪಾrಲಜಿಯೂ ಚಾಲ್ತಿಗೆ ಬಂದಿತ್ತು. ಕ್ರಿಪ್ಟೋಗ್ರಾಫ‌ರ್‌ ರಾಬರ್ಟ್‌ ಮೋರಿಸ್‌ ಸೀನಿಯರ್‌ ಹ್ಯಾಶಿಂಗ್‌ ಎಂಬ ಹೊಸ ತಂತ್ರವನ್ನು ಕಂಡುಹಿಡಿದರು. ಅಂದರೆ ಒಂದು ಅಕ್ಷರವನ್ನು ಸಂಖ್ಯೆಗಳ ಕೋಡ್‌ ರೂಪದಲ್ಲಿ ಪರಿವರ್ತಿಸುವುದು. ಅಲ್ಲಿಯವರೆಗೆ ನಾವು ನಮೂ ದಿಸಿದ ಪಾಸ್‌ವರ್ಡ್‌, ನಮೂದಿಸಿದ ರೀತಿಯಲ್ಲೇ ಕಂಪ್ಯೂಟರ್‌ನಲ್ಲಿ ಶೇಖರವಾಗುತ್ತಿತ್ತು. ಹ್ಯಾಶಿಂಗ್‌ ಬಂದ ನಂತರ ಪಾಸ್‌ವರ್ಡ್‌ ಅನ್ನು ಓದಲಾಗದ ರೂಪಕ್ಕೆ ಪರಿವರ್ತಿಸಲು ಸಾಧ್ಯವಾಯಿತು. ಈ ಹ್ಯಾಶಿಂಗ್‌ ವಿಧಾನವನ್ನು ಯೂನಿಕ್ಸ್‌ ಆಪರೇಟಿಂಗ್‌ ಸಿಸ್ಟಂಗಳಲ್ಲಿ ಬಳಸಲಾಯಿತು.

Advertisement

ಹ್ಯಾಶಿಂಗ್‌ ನಂತರ ಸಾಲ್ಟಿಂಗ್‌ ಕೂಡ ಬಂತು. ಅಂದರೆ ಪಾಸ್‌ವರ್ಡ್‌ನಲ್ಲಿರುವ ಅಕ್ಷರಕ್ಕೂ ಮೊದಲು ಒಂದಷ್ಟು ರ್‍ಯಾಂಡಮ್‌ ಅಕ್ಷರಗಳನ್ನು ಇಡಲಾಗುತ್ತದೆ. ನಂತರ ಪಾಸ್‌ವರ್ಡ್‌ನ ಅಕ್ಷರವನ್ನು ಹ್ಯಾಶ್‌ ಮಾಡಲಾಗುತ್ತದೆ. ಆಗ ಪಾಸ್‌ವರ್ಡ್‌ ಅನ್ನು ಊಹಿಸು ವುದು ಇನ್ನಷ್ಟು ಕಷ್ಟವಾಗುತ್ತದೆ. ಇಷ್ಟಾದರೂ, ಸಣ್ಣ ಪಾಸ್‌ವರ್ಡ್‌ ಗಳನ್ನು ಸೋರಿಕೆಯಾಗದಂತೆ ತಡೆಯಲು ಈವರೆಗೂ ಸಾಧ್ಯವಾಗಿಲ್ಲ.ಆರಂಭದಲ್ಲಿ ಅಂದರೆ 60ರ ದಶಕದಲ್ಲಿ ಹ್ಯಾಕಿಂಗ್‌ನಂತಹ ಭದ್ರತಾ ಸಮಸ್ಯೆಯನ್ನು ಎದುರಿಸುವುದು ಪಾಸ್‌ವರ್ಡ್‌ನ ಕೆಲಸವಾಗಿರಲಿಲ್ಲ. ಆಗ ಹ್ಯಾಕಿಂಗ್‌ ಎಂಬ ಕಲ್ಪನೆಯೂ ಇರಲಿಲ್ಲ. ಇವೆಲ್ಲ ಶುರುವಾಗಿದ್ದೇ 80ರ ದಶಕದಲ್ಲಿ. ಅದಕ್ಕೂ ಮೊದಲು ಕೇವಲ ಇತರರಿಂದ ಫೈಲ್‌ಗ‌ಳನ್ನು ಪ್ರತ್ಯೇಕಿಸುವುದಕ್ಕಷೇ ಪಾಸ್‌ವರ್ಡ್‌ ಸೀಮಿತವಾಗಿತ್ತು. ಯಾವಾಗ ಹ್ಯಾಕಿಂಗ್‌ನ ಭೀತಿ ಶುರು ವಾಯೊ¤à, ಆಗ ಪಾಸ್‌ವರ್ಡ್‌ ಎಂಬುದು ಭದ್ರತೆಯ ಭಾಗವಾಯಿತು.

ಈಗಲೂ ಪಾಸ್‌ವರ್ಡ್‌ಅನ್ನು ನಾವು ಭದ್ರತೆಗಾಗಿಯೇ ಬಳಸು ತ್ತೇವೆ. ಬ್ಯಾಂಕಿಂಗ್‌, ಶಾಪಿಂಗ್‌ನಿಂದ ಹಿಡಿದು ಎಲ್ಲದಕ್ಕೂ ಈಗ ಪಾಸ್‌ವರ್ಡ್‌ ಇದೆ. ಇದೆಲ್ಲದರಲ್ಲೂ ನಮ್ಮ ಡೇಟಾ ಸುರಕ್ಷಿತ ವಾಗಿರಿಸಿಕೊಳ್ಳಲು ನಮಗೆ ಪಾಸ್‌ವರ್ಡ್‌ ಬೇಕು. ಆದರೆ ಈ ಪಾಸ್‌ವರ್ಡ್‌ ಕೂಡಾ ಸುರಕ್ಷಿತವೇ ? ಈ ಪ್ರಶ್ನೆಗೆ ಉತ್ತರ ಸುಲಭವಲ್ಲ. ಇಬೇ, ಲಿಂಕ್ಡ್ ಇನ್‌, ಟ್ವಿಟರ್‌, ಫೇಸ್‌ಬುಕ್‌ ಸೇರಿದಂತೆ ಹಲವು ಕಂಪನಿಗಳು ಒಂದಲ್ಲ ಒಂದು ರೀತಿಯಲ್ಲಿ ಪಾಸ್‌ವರ್ಡ್‌ ಹ್ಯಾಕಿಂಗ್‌ಗೆ ಒಳಗಾಗಿವೆ. ಅಲ್ಲಿಂದ ನಮ್ಮ ಮಾಹಿತಿ ಕಳ್ಳತನವಾಗಿವೆ.

ಈಗ ನಾವು ಬಳಸುವ ಪಾಸ್‌ವರ್ಡ್‌ನಲ್ಲಿ ಹಲವು ಸಮಸ್ಯೆಗಳಿವೆ. ಸಣ್ಣ ಪಾಸ್‌ವರ್ಡ್‌ ನೆನಪಿಟ್ಟುಕೊಳ್ಳುವುದು ಸುಲಭ, ಆದರೆ ಹ್ಯಾಕ್‌ ಮಾಡಲೂ ಸುಲಭ. ಮಾರುದ್ದ ಪಾಸ್‌ವರ್ಡ್‌ಗಳನ್ನು ನೆನಪಿಟ್ಟು ಕೊಳ್ಳಲಾಗದು, ಹಾಗಂತ ಇದನ್ನು ಕ್ರ್ಯಾಕ್‌ ಮಾಡುವುದು ಸುಲಭ ವಲ್ಲ. ನಾವು ಈಗ ಕನಿಷ್ಠ 10-20 ಸೇವೆಗಳನ್ನು ಬಳಸುತ್ತೇವೆ. ಕಂಪ್ಯೂಟರ್‌, ಸ್ಮಾರ್ಟ್‌ಫೋನ್‌, ಇಮೇಲ್‌, ನೆಟ್‌ಫ್ಲಿಕ್ಸ್‌, ಅಮೇ ಜಾನ್‌, ಸ್ಕೈಪ್‌, ಐಟ್ಯೂನ್‌ಗಳು… ಹೀಗೆ ಎಲ್ಲವಕ್ಕೂ ನಮಗೆ ಪಾಸ್‌ವರ್ಡ್‌ ಬೇಕು. ಆದರೆ ಇವೆಲ್ಲವಕ್ಕೂ ಒಂದೊಂದು ಪಾಸ್‌ವರ್ಡ್‌ ಕೊಟ್ಟರೆ ಇವೆಲ್ಲವನ್ನೂ ನೆನಪಿಟ್ಟುಕೊಳ್ಳುವುದು ಕಷ್ಟ. ಎಲ್ಲವಕ್ಕೂ ಒಂದೇ ಪಾಸ್‌ವರ್ಡ್‌ ಕೊಡುವ ಅತಿ ಬುದ್ಧಿವಂತಿಕೆಯನ್ನೂ ಮಾಡುತ್ತೇವೆ. ಹಾಗಾದಾಗ ಯಾವುದೇ ಒಂದು ಖಾತೆಯ ಪಾಸ್‌ವರ್ಡ್‌ ಸೋರಿಕೆಯಾದರೆ, ಹ್ಯಾಕ್‌ ಮಾಡಿದವ ಬೇರೆ ವೆಬ್‌ಸೈಟ್‌ಗಳಲ್ಲೂ ಅದೇ ಪಾಸ್‌ವರ್ಡ್‌ ಟೆಸ್ಟ್‌ ಮಾಡಿದರೆ ಕಥೆ ಮುಗೀತು! ಇದನ್ನು ನಿರ್ವಹಿಸಲು ಗೂಗಲ್‌ನಲ್ಲೊಂದು ಸೌಲಭ್ಯವಿದೆ. ಆದರೆ ಅದಕ್ಕೆ ನೀವು ಪಾಸ್‌ವರ್ಡ್‌ ಕೊಟ್ಟು ಕುಳಿತರೆ ಕಂಪ್ಯೂಟರಿನಲ್ಲಿ ವೆಬ್‌ಸೈಟ್‌ ತೆರೆಯುವಾಗ ಹೆಣಗಬೇಕಾಗುತ್ತದೆ.

ಇನ್ನೂ ತಮಾಷೆಯ ಸಂಗತಿಯೆಂದರೆ ಬಹುತೇಕರ ಪಾಸ್‌ವರ್ಡ್‌ ಟಚssಡಿಟ್ಟಛ ಎಂದೋ 123456 ಎಂದೋ ಇರುತ್ತದೆ. ಇದು ಹ್ಯಾಕ್‌ ಮಾಡಲು ಅತ್ಯಂತ ಸುಲಭ. ಬ್ರೂಟ್‌ ಫೋರ್ಸ್‌ಗೆ ಹಾಕಿದರೆ ಕ್ಷಣಾರ್ಧದಲ್ಲಿ ನಮ್ಮ ಪಾಸ್‌ವರ್ಡ್‌ ಹ್ಯಾಕರ್‌ ಕೈಗೆ ಸಿಕ್ಕಿರುತ್ತದೆ. 
2004 ರಲ್ಲೇ ಪಾಸ್‌ವರ್ಡ್‌ ಸತ್ತು ಹೋಯಿತು ಎಂದು ಬಿಲ್‌ ಗೇಟ್ಸ್‌ ಹೇಳಿದ್ದರು. ಆದರೂ ಪಾಸ್‌ವರ್ಡ್‌ ಈಗಲೂ ಗಟ್ಟಿಯಾಗಿ ಉಸಿರಾಡುತ್ತಿದೆ. ಗೇಟ್ಸ್‌ ಮಾತು ಕೇಳಿ ಪಾಸ್‌ವರ್ಡ್‌ ನಿಟ್ಟುಸಿರು ಬಿಟ್ಟಿರಬಹುದು! ಹಾಗಂತ ಪಾಸ್‌ವರ್ಡ್‌ ಅನ್ನು ಹಿಂದಿಕ್ಕುವ ಹೊಸ ಹೊಸ ಕೀಗಳ ಸಂಶೋಧನೆ ನಡೆದಿಲ್ಲವೆಂದೇನೂ ಅಲ್ಲ. ಆದರೆ ಅವ್ಯಾವುವೂ ಪಾಸ್‌ವರ್ಡ್‌ಗೆ ಬದಲಿಯಾಗಲ್ಲ. ಹೊರತಾಗಿ, ಹೆಚ್ಚುವರಿ ಭದ್ರತೆಯಾಗಿ ಚಾಲ್ತಿಯಲ್ಲಿವೆ. ಉದಾಹರಣೆಗೆ ಸ್ಮಾರ್ಟ್‌ ಫೋನ್‌ಗಳಲ್ಲಿ ಫಿಂಗರ್‌ಪ್ರಿಂಟ್‌ ಅನ್‌ಲಾಕ್‌ ವ್ಯವಸ್ಥೆ ಬಂದಿದ್ದು ನಿಜ. ಆದರೆ ರಿಬೂಟ್‌ ಮಾಡಿದ ನಂತರ ಮೊದಲ ಬಾರಿ ನೀವು ಸ್ಮಾರ್ಟ್‌ಫೋನ್‌ ಸ್ಟಾರ್ಟ್‌ ಮಾಡುವಾಗ ಪಾಸ್‌ವರ್ಡ್‌ ಅಥವಾ ಪಿನ್‌ ನಮೂದಿಸಬೇಕು. ಇನ್ನು ಬ್ಯಾಂಕ್‌ ಅಪ್ಲಿಕೇಶನ್‌ಗಳು ಹಾಗೂ ಇತರ ಅಪ್ಲಿಕೇಶನ್‌ಗಳಿಗೆ ನಾವು ಪಾಸ್‌ವರ್ಡ್‌ ಟೈಪ್‌ ಮಾಡಲೇ ಬೇಕು. ಹೀಗಾಗಿ ಪಾಸ್‌ವರ್ಡ್‌ ಎಂಬುದು ಬೇಸಿಕ್‌ ಸೆಕ್ಯುರಿಟಿ ಫೀಚರ್‌ ಆಗಿ ಚಾಲ್ತಿಯಲ್ಲಿದೆ.

ಇದೆಲ್ಲಕ್ಕಿಂತ ಪಾಸ್‌ವರ್ಡ್‌ನಲ್ಲೊಂದು ಗಂಭೀರ ಸಮಸ್ಯೆಯಿದೆ. ತಂತ್ರಜ್ಞಾನ ಸುಧಾರಿಸಿದಷ್ಟೂ ಪಾಸ್‌ವರ್ಡ್‌ ಹ್ಯಾಕ್‌ ಮಾಡುವ ಸಾಧ್ಯತೆಯೂ ಹೆಚ್ಚುತ್ತಿದೆ. ಇದನ್ನು ತಡೆಯಲು ಪಾಸ್‌ವರ್ಡ್‌ನ ಅಕ್ಷರಗಳ ಸಂಖ್ಯೆ ಹೆಚ್ಚುತ್ತಿದೆ. ಮೊದಲು ಮೂರು ಸಂಖ್ಯೆ ಪಾಸ್‌ವರ್ಡ್‌ ಇದ್ದರೂ ಸಾಕಿತ್ತು. ಈಗ ಮೂರು ಸಂಖ್ಯೆಯ ಪಾಸ್‌ವರ್ಡ್‌ ಹ್ಯಾಕ್‌ ಮಾಡುವುದು ಅತ್ಯಂತ ಸುಲಭ. ಸದ್ಯ 8 ರಿಂದ 12 ಸಂಖ್ಯೆಗಳವರೆಗೆ ಪಾಸ್‌ವರ್ಡ್‌ ಇರಬೇಕು ಎಂದು ಟೆಕ್ಕಿಗರು ಹೇಳುತ್ತಾರೆ. ಹೀಗೆ ಹ್ಯಾಕಿಂಗ್‌ ತಂತ್ರಜ್ಞಾನ ಅಭಿವೃದ್ಧಿಯಾಗಿ, ಈ ಪಾಸ್‌ವರ್ಡ್‌ ಕ್ರ್ಯಾಕ್‌ ಮಾಡುವ ಸಾಧ್ಯತೆಯೂ ಹೆಚ್ಚಾದಾಗ ಇನ್ನಷ್ಟು ಉದ್ದದ ಪಾಸ್‌ವರ್ಡ್‌ ಅನ್ನು ನಾವು ಹಾಕಿ ಕೊಳ್ಳಬೇಕಾಗುತ್ತದೆ. ಆದರೆ ಅದು ನಾವಂದುಕೊಂಡಷ್ಟು ಬೇಗ ನಡೆಯುವುದಿಲ್ಲ. ಕಳೆದ 30-40 ವರ್ಷಗಳಲ್ಲಿ ನಾವು 12-13 ಸಂಖ್ಯೆಯ ಪಾಸ್‌ವರ್ಡ್‌ಗೆ ಬಂದಿದ್ದೇವೆ. 

ಸದ್ಯ ತಂತ್ರಜ್ಞಾನ ಪರಿಣಿತರ ಪೈಕಿ ಮುಂದಿನ 50 ವರ್ಷ ಗಳವರೆಗೂ ಈ ಪಾಸ್‌ವರ್ಡ್‌ ಎಂಬ ಅಕ್ಷರ ಗುತ್ಛ ನಮ್ಮ ಕೈಬಿಡುವುದಿಲ್ಲ. ಇವುಗಳೊಂದಿಗೆ ನಾವು ಹೆಣಗಲೇ ಬೇಕು. ಹೊಸ ಹೊಸ ವೆಬ್‌ಸೈಟ್‌ ಕಂಡಾಗ ಹೊಸ ಹೊಸ ಪಾಸ್‌ವರ್ಡ್‌ಗಳನ್ನು ಹೆಣೆಯಲೇ ಬೇಕು. ಇಂತಹ ಹೊಸ ಜೋಡಣೆಯ ಪಾಸ್‌ವರ್ಡ್‌ ನಮ್ಮ ನೆನಪಿನ ಶಕ್ತಿಯನ್ನು ಕಾಡುತ್ತಲೇ ಇರುತ್ತವೆ. ಹೆಚ್ಚು ಹೆಚ್ಚು ಸಂಖ್ಯೆಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ಸಾಮರ್ಥ್ಯವನ್ನು ದಿನೇ ದಿನೇ ಗಳಿಸಲೇ ಬೇಕು. ಅಪರೂಪಕ್ಕೆ ಅಡುಗೆ ಮನೆಗೆ ಹೋದಾಗ ಯಾವ ಡಬ್ಬದಲ್ಲಿ ಸಾಸಿವೆ, ಯಾವ ಡಬ್ಬದಲ್ಲಿ ಕೊತ್ತಂಬರಿ ಇದೆ ಎಂದು ಹುಡುಕುವಂತೆ ಯಾವ ವೆಬ್‌ಸೈಟ್‌ ಅಥವಾ ಅಪ್ಲಿಕೇಶನ್‌ಗೆ ಯಾವ ಪಾಸ್‌ವರ್ಡ್‌ ಹಾಕಿದ್ದೇನೆ ಎಂದು ಹುಡುಕಲೇ ಬೇಕು!

– ಕೃಷ್ಣ ಭಟ್‌ 

Advertisement

Udayavani is now on Telegram. Click here to join our channel and stay updated with the latest news.

Next