Advertisement

ಆನ್‌ಲೈನ್‌ನಲ್ಲಿ ಪಾಸ್‌ಪೋರ್ಟ್‌ ನವೀಕರಣಕ್ಕೆ ಅವಕಾಶ!

03:19 PM Nov 08, 2021 | Team Udayavani |

ನವದೆಹಲಿ: ಪಾಸ್‌ಪೋರ್ಟ್‌ ಹೊಂದಿರುವವರು ಮನೆಯಲ್ಲೇ ಕುಳಿತು ಆನ್‌ಲೈನ್‌ ಮೂಲಕ ತಮ್ಮ ಪಾಸ್‌ಪೋರ್ಟ್‌ ನವೀಕರಣವನ್ನು ಮಾಡುವಂಥ ಸೌಲಭ್ಯವನ್ನು ಕೇಂದ್ರ ಸರ್ಕಾರ ಕಲ್ಪಿಸಿದೆ.

Advertisement

ಇದಕ್ಕಾಗಿ ಪಾಸ್‌ಪೋರ್ಟ್‌ ಸೇವಾ ಪೋರ್ಟಲ್‌ಗೆ (www.passportindia.gov.in) ಜಾಲತಾಣಕ್ಕೆ ಭೇಟಿ ನೀಡಿ ಲಾಗಿನ್‌ ಆಗಬೇಕು. ಆನಂತರ, ಪಾಸ್‌ಪೋರ್ಟ್‌ ನವೀಕರಣದ ಆಯ್ಕೆಯನ್ನು ಕ್ಲಿಕ್‌ ಮಾಡಿ, ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ತುಂಬಿ, ಅಲ್ಲೇ ನೀಡಲಾಗಿರುವ ಪಾಸ್‌ಪೋರ್ಟ್‌ ಕಚೇರಿಗಳ ಪಟ್ಟಿಯಲ್ಲಿ ಹತ್ತಿರವಿರುವ ಕಚೇರಿಯಲ್ಲಿ ಅಪಾಯಿಂಟ್‌ಮೆಂಟ್‌ ಪಡೆಯಬೇಕು.

ನಿಮ್ಮ ಆಯ್ಕೆಯ ದಿನಾಂಕ, ಸಮಯವನ್ನು ಆರಿಸಲು ಅವಕಾಶವಿರುತ್ತದೆ. ಬಳಿಕ ಮೂಲ ಪ್ರತಿಗಳನ್ನು ನಿಗದಿತ ದಿನಾಂಕದಂದು ಕಚೇರಿಗೆ ಕೊಂಡೊಯ್ದು, ಫೋಟೋ ಸಮೇತ ನೀಡಬೇಕು. ಅರ್ಜಿಯ ಪ್ರಗತಿಯನ್ನು ಆನ್‌ಲೈನ್‌ನಲ್ಲೇ ಪರಿಶೀಲಿಸಬಹುದು.

ಇದನ್ನೂ ಓದಿ:ಪಾಕ್‌ ಹೈಕೋರ್ಟ್‌ನಿಂದ 6 ಜೆಯುಡಿ ಉಗ್ರರ ಖುಲಾಸೆ

Advertisement

Udayavani is now on Telegram. Click here to join our channel and stay updated with the latest news.

Next