Advertisement
ಈ ಬಗ್ಗೆ ಹಣಕಾಸು ಸೇವೆಗಳ ಇಲಾಖೆ ಕಾರ್ಯದರ್ಶಿ ರಾಜೀವ್ ಕುಮಾರ್ ಹೇಳಿದ್ದು, ಸುಸ್ತಿದಾರರ ವಿರುದ್ಧ ಕಠಿಣ ಹಾಗೂ ತಕ್ಷಣದ ಕ್ರಮ ಕೈಗೊಳ್ಳಲು ಇದು ಅಗತ್ಯವಾಗಿದೆ ಎಂದಿದ್ದಾರೆ. 50 ಕೋಟಿ ರೂ. ಮೇಲ್ಪಟ್ಟ ಹೊಸ ಸಾಲಗಳಿಗೆ ಪಾಸ್ಪೋರ್ಟ್ ವಿವರ ಪಡೆಯು ವುದು ಕಡ್ಡಾಯವಾಗಿದ್ದರೆ, ಹಳೆಯ ಸಾಲಗಳಿಗೆ ಮುಂದಿನ 45 ದಿನಗಳೊಳಗೆ ಪಾಸ್ಪೋರ್ಟ್ ವಿವರಗಳನ್ನು ಪಡೆಯಬೇಕು ಎಂದು ಬ್ಯಾಂಕ್ಗಳಿಗೆ ಸೂಚಿಸಲಾಗಿದೆ. ಉದ್ಯಮಿ ನೀರವ್ ಪಿಎನ್ಬಿಗೆ 12,600 ಕೋಟಿ ರೂ. ಸುಸ್ತಿದಾರರಾಗಿ, ತನಿಖಾ ಏಜೆನ್ಸಿಯಿಂದ ತಪ್ಪಿಸಿಕೊಳ್ಳಲು ವಿದೇಶ ಪ್ರಯಾಣ ಬೆಳೆಸಿದ ನಂತರದಲ್ಲಿ ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. Advertisement
ಸಾಲಕ್ಕೆ ಪಾಸ್ಪೋರ್ಟ್ ವಿವರ ಕಡ್ಡಾಯ
06:35 AM Mar 11, 2018 | |
Advertisement
Udayavani is now on Telegram. Click here to join our channel and stay updated with the latest news.